ಕಾಂಗ್ರೆಸ್ ಪಾದಯಾತ್ರೆಗೆ ಚಾಲನೆ

ಕನಕಪುರ (ರಾಮನಗರ), ಜ. ೯: ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಪಕ್ಷದಿಂದ ವಾರಾಂತ್ಯ ಕರ್ಫ್ಯೂ ನಡುವೆಯೂ ಪಾದಯಾತ್ರೆ ಭಾನುವಾರದಿಂದ ಆರಂಭವಾಗಿದೆ. ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಮೇಕೆದಾಟು ಸಂಗಮದಲ್ಲಿ ಪಾದಯಾತ್ರೆ ಕಾರ್ಯಕ್ರಮ ಆರಂಭಗೊAಡಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕಾಂಗ್ರೆಸ್‌ನ ಹಿರಿಯ ಹಲವು ಮುಖಂಡರು, ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು, ಮಹಿಳಾ ಪ್ರತಿನಿಧಿಗಳು, ಕಾರ್ಯಕರ್ತರು ಭಾಗಿಯಾಗಿದ್ದರು. ಹಿಂದೂ ಕ್ರೆöÊಸ್ತ-ಮುಸ್ಲಿಂ ಧರ್ಮಗುರುಗಳು ಕುಂಡಗಳಲ್ಲಿದ್ದ ಸಸಿಗಳಿಗೆ ನೀರೆರೆಯುವ ಮೂಲಕ ನಡಿಗೆ ಆರಂಭದ ಸಮಾರಂಭಕ್ಕೆ ವಿಧ್ಯುಕ್ತ ಚಾಲನೆ ನೀಡಿದರು. ಲೋಕಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ನಗಾರಿ ಬಾರಿಸುವ ಮೂಲಕ ನೀರಿಗಾಗಿ ಹೋರಾಟಕ್ಕೆ ಬದ್ಧ ಎಂಬ ಸಂದೇಶ ಸಾರಿದರು.

ಪಾದಯಾತ್ರೆ ರಾಜಕೀಯ ಪ್ರೇರಿತ:ಸಿಎಂ ಬೊಮ್ಮಾಯಿ

ಬೆಂಗಳೂರು, ಜ. ೯: ಅತ್ತ ರಾಮನಗರ ಜಿಲ್ಲೆಯ ಕನಕಪುರ ಸಂಗಮದಿAದ ಕಾಂಗ್ರೆಸ್ ಮೇಕೆದಾಟು ಯೋಜನೆಯ ಪಾದಯಾತ್ರೆಗೆ ಚಾಲನೆ ನೀಡಿ ಕಾಂಗ್ರೆಸ್ ನಾಯಕರು ನಡಿಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದರೆ, ಇತ್ತ ಸಿಎಂ ಬಸವರಾಜ ಬೊಮ್ಮಾಯಿ ಪಾದಯಾತ್ರೆಯ ಔಚಿತ್ಯವನ್ನು ಪ್ರಶ್ನಿಸಿದ್ದಾರೆ. ಬೆಂಗಳೂರಿನಲ್ಲಿAದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್‌ನವರು ೫ ವರ್ಷ ಅಧಿಕಾರದಲ್ಲಿದ್ದರು, ಸಮ್ಮಿಶ್ರ ಸರ್ಕಾರದಲ್ಲಿ ಡಿ.ಕೆ. ಶಿವಕುಮಾರ್ ಅವರು ಕೂಡ ನೀರಾವರಿ ಸಚಿವರಾಗಿದ್ದರು. ಹಾಗಾದರೆ ಆಗ ಅವರು ಮೇಕೆದಾಟು ಯೋಜನೆಯ ಬಗ್ಗೆ ಏನು ಮಾಡಿದರು. ಡಿಪಿಆರ್ ವರದಿಯನ್ನು ಆಗ ಅವರು ಸರಿಯಾಗಿ ಸಲ್ಲಿಕೆ ಮಾಡಿದ್ದರೆ ಯೋಜನೆ ಈಡೇರುತ್ತಿರಲಿಲ್ಲವೇ, ಸಮ್ಮಿಶ್ರ ಸರ್ಕಾರ ಬಂದ ಮೇಲೆ ಡಿಪಿಆರ್ ಬಂದಿರುವುದು, ಸಮ್ಮಿಶ್ರ ಸರ್ಕಾರದಲ್ಲಿ ಕೂಡ ಡಿಪಿಆರ್‌ನ್ನು ಸರಿಯಾಗಿ ತೆಗೆದುಕೊಂಡು ಹೋಗಿಲ್ಲ ಎಂದು ಟೀಕಿಸಿದರು. ಕಾಂಗ್ರೆಸ್‌ನವರಿಗೆ ಮೇಕೆದಾಟು ಯೋಜನೆ ಬೇಕಾಗಿಲ್ಲ, ರಾಜಕಾರಣ ಬೇಕಾಗಿದೆ. ಯೋಜನೆಯ ಡಿಪಿಆರ್ ಮಾಡಲು ನಾಲ್ಕು ವರ್ಷ ತೆಗೆದುಕೊಂಡಿದ್ದಾರೆ. ಸಾಧ್ಯತೆ ವರದಿ ಮಾತ್ರ ಸಲ್ಲಿಕೆ ಮಾಡಿದ್ದಾರೆ, ಇದು ಕಾಂಗ್ರೆಸ್ ನವರ ಸಾಧನೆ, ಬೆಟ್ಟ ಅಗೆದು ಇಲಿ ತೆಗೆದಿದ್ದಾರೆ. ಇದು ಅವರ ಸಾಧನೆ ಎಂದು ವ್ಯಂಗ್ಯವಾಡಿದರು. ಕೋವಿಡ್ ನಿಯಮ ಉಲ್ಲಂಘಿಸಿ ವೀಕೆಂಡ್ ಕರ್ಫ್ಯೂ ವೇಳೆ ಪಾದಯಾತ್ರೆ ಮಾಡುತ್ತಿರುವುದಕ್ಕೆ ನೋಟೀಸ್ ನೀಡಲಾಗಿದೆ. ನಮ್ಮ ಅಧಿಕಾರಿಗಳು ಕೂಡ ಹೋಗಿ ಪಾದಯಾತ್ರೆ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ. ಅವರು ಉಡಾಫೆಯಿಂದ ಮಾಡುತ್ತಿದ್ದಾರೆ. ಅದಕ್ಕೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದರು.

ಪಾದಯಾತ್ರೆಯಿಂದ ವಾಪಸ್ಸಾದ ಸಿದ್ದರಾಮಯ್ಯ

ಹೆಗ್ಗನೂರು, ಜ. ೯: ಕೊರೊನಾ ನಿಯಮಗಳು, ನಿರ್ಬಂಧಗಳ ನಡುವೆಯೇ ರಾಜ್ಯ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಕೈಗೊಂಡಿದ್ದು, ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಜ್ವರ, ಸುಸ್ತು ಕಾಣಿಸಿಕೊಂಡ ಹಿನ್ನೆಲೆ ಅವರು ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ಸಿದ್ದರಾಮಯ್ಯ ಅವರ ಆರೋಗ್ಯ ತಪಾಸಣೆ ನಡೆಸಿದ ವೈದ್ಯರು ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ.

ತಾ. ೧೪ ರಂದು ಜಾಗತಿಕ ಸೂರ್ಯ ನಮಸ್ಕಾರ ಪ್ರದರ್ಶನ

ನವದೆಹಲಿ, ಜ. ೯: ಕೇಂದ್ರ ಆಯುಷ್ ಸಚಿವಾಲಯ ಮಕರ ಸಂಕ್ರಾAತಿಯ ದಿನವಾದ ತಾ. ೧೪ ರಂದು ಜಾಗತಿಕ ಸೂರ್ಯ ನಮಸ್ಕಾರ ಪ್ರದರ್ಶನ ಆಯೋಜಿಸಿದೆ. ಈ ಕಾರ್ಯಕ್ರಮದಲ್ಲಿ ಜಗತ್ತಿನೆಲ್ಲೆಡೆಯಿಂದ ೭೫ ಲಕ್ಷ ಮಂದಿ ಪಾಲ್ಗೊಳ್ಳಲಿದ್ದಾರೆ. ಸಕಲ ಜೀವಿಗಳ ಬೆಳವಣಿಗೆಗೆ ತನ್ನ ಕಿರಣಗಳ ಮೂಲಕ ಚೈತನ್ಯ ನೀಡುವ ಸೂರ್ಯನಿಗೆ ಕೃತಜ್ಞತೆ ಸಮರ್ಪಿಸಲು ಅಂದು ಸೂರ್ಯ ನಮಸ್ಕಾರ ನಡೆಸಲಾಗುತ್ತದೆ. ಸೂರ್ಯ ಶಕ್ತಿಯ ಮೂಲವಾಗಿದೆ. ಆಹಾರ ಸರಪಳಿಯ ಮುಂದುವರಿಕೆಗೆ ಮಾತ್ರವಲ್ಲದೆ, ಮಾನವ ಜೀವಿಗಳ ದೇಹ ಹಾಗೂ ಮನಸ್ಸಿನ ಚೈತನ್ಯಕ್ಕೆ ಅತ್ಯಗತ್ಯವಾಗಿದೆ. ಸಾಮೂಹಿಕ ಸೂರ್ಯ ನಮಸ್ಕಾರ ಪ್ರದರ್ಶನ ಹವಾಮಾನ ಬದಲಾವಣೆ ಹಾಗೂ ಜಾಗತಿಕ ತಾಪಮಾನ ಸಂದೇಶವನ್ನು ಜಗತ್ತಿಗೆ ಸಾರುವ ಉದ್ದೇಶವನ್ನು ಹೊಂದಿದೆ. ಭಾರತೀಯ ಸಾಂಸ್ಕೃತಿಕ, ಆಧ್ಯಾತ್ಮಿಕ ಪರಂಪರೆಯಲ್ಲಿ ಮಕರ ಸಂಕ್ರಾAತಿ ಅತ್ಯಂತ ಮಹತ್ವ ಹೊಂದಿದೆ; ಸೂರ್ಯ ನಮಸ್ಕಾರ ೧೨ ಹಂತಗಳ ಒಂದು ಸುತ್ತಾಗಿದ್ದು, ಈ ಅಭ್ಯಾಸ ಮನುಷ್ಯನ ದೇಹ ಮತ್ತು ಮನಸ್ಸುಗಳಿಗೆ ಚೈತನ್ಯ ನೀಡುತ್ತದೆ ಎಂದು ಆಯುಷ್ ಸಚಿವಾಲಯ ಹೇಳಿದೆ.

ಬೋಟ್‌ಗಳ ಮೇಲೆ ಬಂಡೆ ಬಿದ್ದು ೭ ಸಾವು

ಮಿನಾಸ್‌ಗೆರೈಸ್, ಜ. ೯: ಜಾಲಿ ಮೂಡ್‌ನಲ್ಲಿ ಬೋಟಿಂಗ್ ಮಾಡುತ್ತಿದ್ದ ಬೋಟ್‌ಗಳ ಮೇಲೆ ದೈತ್ಯಾಕಾರದ ಬೃಹತ್ ಬಂಡೆಯೊAದು ಉರುಳಿದ್ದು, ೨ ಬೋಟ್‌ಗಳಲ್ಲಿದ್ದ ಕನಿಷ್ಟ ೭ ಮಂದಿ ಸಾವನ್ನಪ್ಪಿದ್ದು, ೩೨ ಮಂದಿ ಗಾಯಗೊಂಡಿದ್ದಾರೆ. ಬ್ರೆಜಿಲ್‌ನ ಮಿನಾಸ್‌ಗೆರೈಸ್ ರಾಜ್ಯದಲ್ಲಿ ಈ ಅವಘಡ ಸಂಭವಿಸಿದ್ದು, ಸರೋವರದಲ್ಲಿ ಕೆಲವು ದೋಣಿಗಳು ವಿಹರಿಸುತ್ತಿರುವಾಗ ಬೃಹತ್ ಬೆಟ್ಟದಿಂದ ದೈತ್ಯಾಕಾರದ ಬಂಡೆಗಲ್ಲು ಜಾರಿ ಬಿದ್ದಿದೆ. ಕಲ್ಲಿನ ಬಂಡೆ ಬೀಳುತ್ತಿರುವ ದೃಶ್ಯವನ್ನು ಕಂಡು ಕೆಲವರು ಅಲ್ಲಿಂದ ಪರಾರಿಯಾಗಲು ಯತ್ನಿಸಿದರು. ಆದರೆ, ಮೂರು ದೋಣಿಗಳು ಸಿಲುಕಿಕೊಂಡಿದ್ದರಿAದ ೭ ಮಂದಿ ಸಾವಿಗೀಡಾಗಿ ೩೨ ಮಂದಿ ಗಾಯಗೊಂಡಿದ್ದಾರೆ. ಅಲ್ಲದೆ, ೨೦ ಪ್ರವಾಸಿಗರು ನಾಪತ್ತೆಯಾಗಿದ್ದಾರೆ ಎಂದು ಮಿನಾಸ್‌ಗೆರೈಸ್‌ನ ಅಗ್ನಿಶಾಮಕ ದಳದ ಕಮಾಂಡರ್ ಕರ್ನಲ್ ಎಡ್ಗಾರ್ಡ್ ಎಸ್ಟೆವೊ ಡಿಸಿಲ್ವಾ ತಿಳಿಸಿದ್ದಾರೆ.