ಕುಶಾಲನಗರ, ಜ. ೮ : ಹಾಸನ ಜಿಲ್ಲೆಯ ಶ್ರೀ ಸುಬ್ರಹ್ಮಣ್ಯ ಶ್ರೇಷ್ಠಿ ರುಕ್ಮಣಮ್ಮ ಪ್ರತಿಷ್ಠಾನ ಮತ್ತು ಗೀತಾಮಿತ್ರ ಆಧ್ಯಾತ್ಮಿಕ ಮಾಸ ಪತ್ರಿಕೆ ಆಶ್ರಯದಲ್ಲಿ ಕಳೆದ ಡಿಸೆಂಬರ್ ತಿಂಗಳಲ್ಲಿ ನಡೆಸಿದ ರಾಜ್ಯ ಮಟ್ಟದ ಭಗವದ್ಗೀತಾ ಶ್ಲೋಕಗಳನ್ನು ಹೇಳುವ ರಾಜ್ಯ ಮಟ್ಟದ ಆನ್ ಲೈನ್ ಸ್ಪರ್ಧೆಯಲ್ಲಿ ಸಬ್ ಜೂನಿಯರ್ ವಿಭಾಗದಲ್ಲಿ ಕುಶಾಲನಗರದ ಎನ್. ಸಾಗರಿಕ ೩ನೇ ಸ್ಥಾನ ಪಡೆದಿದ್ದಾಳೆ. ಸಾಗರಿಕ ಕುಶಾಲನಗರ ಓಡಿಸ್ಸಿ ಕಲರ್ ಲ್ಯಾಬ್ ಮಾಲೀಕ ನಾಗೇಶ್.ಕೆ.ಎಸ್ ಮತ್ತು ಶಿಕ್ಷಕಿ ಶಾಲಿನಿ ನಾಗೇಶ್ ದಂಪತಿಯ ಪುತ್ರಿ.