ಮಡಿಕೇರಿ, ಜ. ೮: ತಾ. ೭ರಂದು ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ‘ಪುದಿಯಕ್ಕಿ ನೈವೇದ್ಯ’ ಪ್ರಯುಕ್ತ ಶಾಸ್ತೊçÃಕ್ತವಾದ ನಡಾವಳಿಗಳು ನಡೆದವು. ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದ ದೇವತಕ್ಕರಾದ ಪರದಂಡ ಕುಟುಂಬಸ್ಥರ ಮನೆಯಿಂದ ‘ಪಾಲ್ಬೈಯಾಡ್’ ಬಂದ ನಂತರ ಇಗ್ಗುತ್ತಪ್ಪ ದೇವಸ್ಥಾನ ಇತರ ತಕ್ಕಮುಖ್ಯಸ್ಥರುಗಳ ಪಾಲ್ ಬೈಯಾಡ್ ಕೂಡ ಬಂದಿತು. ನಂತರ ಎಲ್ಲರೂ ಆದಿಸ್ಥಾನ ಮಲ್ಮಕ್ಕೆ ಭೋಜನ ನಂತರ ತೆರಳಿದರು. ಅಲ್ಲಿ ಪೇರೂರು, ನೆಲಜಿಯ ದೇವಸ್ಥಾನದ ತಕ್ಕಮುಖ್ಯಸ್ಥರುಗಳೂ ಕೂಡ ಪಾಲ್ಬೈಯಾಡ್ನೊಂದಿಗೆ ಆಗಮಿಸಿದರು. ಜಗದೀಶ್ ಭಟ್ ಅವರು ಮಲ್ಮದಲ್ಲಿ ಪೂಜಾ ವಿಧಿ- ವಿಧಾನಗಳನ್ನು ನೆರವೇರಿಸಿದರು.
ಇಗ್ಗುತ್ತಪ್ಪ ದೇವರ ಉದ್ಭವ ಮೂರ್ತಿಗೆ ಹೊಸ ಸಣ್ಣಕ್ಕಿ ಹಾಲಿನ ಪಾಯಸ ಮಾಡಿ ಅರ್ಪಿಸಿದ ನಂತರ ದೇವತಕ್ಕರು ನಾಡಿನ ಸುಭಿಕ್ಷೆಗೆ ಪ್ರಾರ್ಥನೆ ಸಲ್ಲಿಸಿ, ಸರ್ವರೂ ತಮ್ಮ ಗ್ರಾಮಗಳಿಗೆ ತೆರಳಿದರು.
ಮಲ್ಮದಲ್ಲಿ ಪಾರುಪತ್ತೆಗಾರ ಪರದಂಡ ತಮ್ಮಪ್ಪ, ಪರದಂಡ ಸುಮನ್ ಸುಬ್ರಮಣಿ, ನೆಲಜಿ ಪೇರೂರಿನ ಗ್ರಾಮಸ್ಥರು ಸೇರಿದ್ದರು.