ಮಡಿಕೇರಿ, ಜ. ೮: ಬಾಳೆಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾರ್ಡ್ ಸಭೆಗಳು ತಾ. ೧೦ ರಿಂದ ೧೭ ರ ತನಕ ವಿವಿಧೆಡೆ ನಡೆಯಲಿವೆೆ ಎಂದು ಪಂಚಾಯ್ತಿ ಪ್ರಕಟಣೆ ತಿಳಿಸಿದೆ. ಬಾಳೆಲೆ ಗ್ರಾಮದ ವಾರ್ಡ್ ಸಭೆ ತಾ. ೧೦ ಬೆಳಿಗ್ಗೆ ೧೦.೩೦ ಗಂಟೆಗೆ ಅಂಬೇಡ್ಕರ್ ಭವನ, ಅಪರಾಹ್ನ ೧೨ ಗಂಟೆಗೆ ಮಾರಿಯಮ್ಮ ದೇವಸ್ಥಾನ ಮಡಿವಾಳಕೇರಿ, ಅಪರಾಹ್ನ ೨.೩೦ ಗಂಟೆಗೆ ಕೊಪ್ಪಲು ಲಕ್ಷಿö್ಮÃ ದೇವಸ್ಥಾನದಲ್ಲಿ ಸಭೆಗಳು ನಡೆಯಲಿವೆ. ಸುಳುಗೋಡು ಗ್ರಾಮದ ವಾರ್ಡ್ ಸಭೆ ತಾ. ೧೧ ರಂದು ಬೆಳಿಗ್ಗೆ ೧೧ ಗಂಟೆಗೆ ಸುಳುಗೋಡು ಸ.ಹಿ.ಪ್ರಾ. ಶಾಲೆಯ ಸಭಾಂಗಣದಲ್ಲಿ, ತಾ. ೧೨ ರಂದು ದೇವನೂರು ಎ ಗ್ರಾಮದ ವಾರ್ಡ್ ಸಭೆ ಬೆಳಿಗ್ಗೆ ೧೧ ಗಂಟೆಗೆ ಬಾಳೆಲೆ ಗ್ರಾ.ಪಂ. ಕಚೇರಿ ಸಭಾಂಗಣದಲ್ಲಿ, ತಾ. ೧೭ ರಂದು ದೇವನೂರು ಬಿ ಗ್ರಾಮದ ವಾರ್ಡ್ ಸಭೆ ಬೆಳಿಗ್ಗೆ ೧೧ ಗಂಟೆಗೆ ದೇವನೂರು ಬಿ ಸ.ಹಿ.ಪ್ರಾ. ಶಾಲೆಯ ಸಭಾಂಗಣದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ