ಕಾವೇರಿ ಜಾತ್ರೆಯು ಸಂವತ್ಸರಕ್ಕೊಮ್ಮೆ ನಡೆಯುವ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮ. ಕಾವೇರಿ ಜಾತ್ರೆಯು ಪ್ರತಿವರ್ಷವೂ ಅಕ್ಟೋಬರ್ ತಿಂಗಳ ತುಲಾಮಾಸದಲ್ಲಿ ನಡೆಯಲಿದ್ದು ಸಾಮಾನ್ಯವಾಗಿ ತಾ. ೧೬ ಅಥವಾ ೧೭ ರಂದು ನಡೆಯುತ್ತದೆ. ಇದನ್ನೇ ಕಾವೇರಿ ಸಂಕ್ರಾAತಿ ಜಾತ್ರೆಯೆಂದು ಕರೆಯುವ ರೂಢಿ. ಈ ಪವಿತ್ರಮಾಸದಲ್ಲಿ ನಡೆಯುವ ತುಲಾ ಸಂಕ್ರಮಣ ಜಾತ್ರೆಗೆ ಮುಖ್ಯವಾಗಿ ಕರ್ನಾಟಕ, ತಮಿಳುನಾಡು, ಕೇರಳ ರಾಜ್ಯಗಳಿಂದ ಯಾತ್ರಾರ್ಥಿಗಳು ಆಗಮಿಸುತ್ತಾರೆ. ಅಲ್ಲದೆ ಪ್ರಸ್ತುತವಾಗಿ ಭಾರತದ ವಿವಿಧೆಡೆ ಗಳಿಂದಲೂ ಆಗಮಿಸುತ್ತಿರುವುದು ವಿಶೇಷವಾಗಿದೆ. ಅದರಲ್ಲೂ ಕೊಡಗಿನ ಭಕ್ತರು ಎಲ್ಲಿದ್ದರೂ ಆ ಸಮಯದಲ್ಲಿ ಒಂದು ತಿಂಗಳ ಕಾಲ ನಡೆಯುವ ತುಲಾ ಮಾಸದಲ್ಲಿ ಬಂದು ಪವಿತ್ರ ತೀರ್ಥಸ್ನಾನ ಪೂಜೆಯಲ್ಲಿ ಪಾಲ್ಗೊಳ್ಳು ತ್ತಾರೆ. ಈ ಹಿಂದೆ ಕಾವೇರಿ ಜಾತ್ರೆಗೆ ಸುಮಾರು ೩೦ ಸಾವಿರದಿಂದ ೫೦ ಸಾವಿರದ ತನಕ ಭಕ್ತಾದಿಗಳು ಜಮಾಯಿಸುತ್ತಿದ್ದರು. (ತುಲಾ ಮಾಸದಲ್ಲಿ) ಪ್ರಸ್ತುತವಾಗಿ ಪ್ರತಿತಿಂಗಳು ಯಾತ್ರಾರ್ಥಿಗಳು ಎಲ್ಲಾ ಕಾಲದಲ್ಲೂ ಆಗಮಿಸುತ್ತಿರುತ್ತಾರೆ. ತುಲಾ ಸಂಕ್ರಮಣದAದು ಆರಂಭವಾದ ಕಾವೇರಿ ಜಾತ್ರೆಯು ವೃಶ್ಚಿಕ ಸಂಕ್ರಮಣದAದು ಮುಕ್ತಾಯಗೊಳ್ಳುತ್ತದೆ.

ಪ್ರಚಲಿತ ವರ್ಷದಲ್ಲಿ ವಿವಾಹವಾದವರು ಶ್ರೀ ಕಾವೇರಿ ಜಾತ್ರೆಯ ವೇಳೆಗೆ ಬಂದು ತೀರ್ಥಸ್ನಾನ ಮಾಡಿ, ಗತಿಸಿದ ಪಿತೃಗಳ ಸಂತೃಪ್ತಿಗಾಗಿ ಶ್ರಾದ್ಧ ತರ್ಪಣಾದಿ ಕ್ರಿಯೆಗಳನ್ನು ಮಾಡಿ, ದೇವರ ದರ್ಶನ ಮಾಡಿ ಪವಿತ್ರ ತೀರ್ಥವನ್ನು ಕೊಂಡೊಯ್ಯತ್ತಾರೆ. ಇದು ಪ್ರಮುಖವಾಗಿ ಕೊಡವ ಜನಾಂಗ ದವರಲ್ಲಿ ಪ್ರಚಲಿತವಾಗಿರುವ ಸಂಪ್ರದಾಯ.

ಇನ್ನು ಭಾಗಮಂಡಲದ ಸುತ್ತಮುತ್ತಲಿನ ಗ್ರಾಮ ನಿವಾಸಿಗಳಂತೂ ಕಾವೇರಿ ಸಂಕ್ರಮಣ ಜಾತ್ರೆಯನ್ನು ಕಾಯುತ್ತಿರುತ್ತಾರಲ್ಲದೆ, ಮನೆಯ ಪರಿಸರವನ್ನು ಶುಚಿಗೊಳಿಸಿ ಸುಣ್ಣ-ಬಣ್ಣದಿಂದ ಅಲಂಕರಿಸುತ್ತಾರೆ.

ಪ್ರಾರAಭದ ಹಂತದಲ್ಲಿ ಭಾಗಮಂಡಲ ದೇವಾಲಯದಲ್ಲಿ ಪತ್ತಾಯಕ್ಕೆ ಅಕ್ಕಿ ಹಾಕುವ ಅಂದರೆ ಈ ಹಿಂದೆ ದೇವಾಲಯಕ್ಕೆ ಆಗಮಿಸುವ ಯಾತ್ರಾರ್ಥಿ ಗಳು ಮುಂಚಿನ ದಿನವೇ ಆಗಮಿಸುತ್ತಿದ್ದು, ಅವರಿಗೆ ಊಟಕ್ಕೆ ಅನುಕೂಲವಾಗು ವಂತೆ ಪಡಿಯಕ್ಕಿಯನ್ನು ಪ್ರಸಾದದ ರೂಪದಲ್ಲಿ ನೀಡುವ ಪದ್ಧತಿಯೂ ಇಂದಿಗೆ ಚಾಚೂ ತಪ್ಪದೆ ನಡೆÀಯುತ್ತಿದೆ. ಇದೇ ಸಂದರ್ಭದಲ್ಲಿ ಪತ್ತಾಯಕ್ಕೆ ಅಕ್ಕಿಯನ್ನು ಹಾಕಲು ಮುಹೂರ್ತವನ್ನು ನಿಶ್ಚಯಿಸಿ ಪ್ರಥಮವಾಗಿ ದೇಗುಲದ ತಕ್ಕರು ಪತ್ತಾಯಕ್ಕೆ ಅಕ್ಕಿಯನ್ನು ಪ್ರಾರ್ಥಿಸಿ ಅರ್ಪಿಸುತ್ತಾರೆ. ಬಳಿಕ ಪ್ರತಿವರ್ಷವೂ ದೇವಾಲಯಕ್ಕೆ ಈ ಕಾರ್ಯಕ್ರಮಕ್ಕಾಗಿ ಅರ್ಪಿಸುವ ಜಿಲ್ಲೆಯ ವಿವಿಧ ಕಡೆ ಯಿಂದಲೂ ಅಕ್ಕಿಯನ್ನು ಸಮರ್ಪಿಸುತ್ತಾರೆ.

ಕಾವೇರಿ ಜಾತ್ರೆಯು ಎಲ್ಲಾ ಕೆಲಸ ಕಾರ್ಯಗಳು ಸುಗಮವಾಗಿ ಯಾವುದೇ ಅಡೆ-ತಡೆಯಿಲ್ಲದೆ ನಡೆಯಲೆಂದು ೨ ಬಾಳೆಗೊನೆ ಕಡಿಯುವ ಕಾರ್ಯಕ್ರಮ ಅಜ್ಞಾಮುಹೂರ್ತ ನಡೆದು ಸಾಂಗವಾಗಿ ನೆರವೇರುವಂತಾಗಲಿ ಎಂದು ಪ್ರಾರ್ಥಿಸುತ್ತಾರೆ. ಆಜ್ಞಾ ಮುಹೂರ್ತದಂದು ತಕ್ಕರು ಮತ್ತು ಭಕ್ತಾದಿಗಳ ಸಮ್ಮುಖದಲ್ಲಿ ದೇವರ ನಡೆಯಲ್ಲಿ ನಿಂತು ಕಟ್ಟಾಜ್ಞೆಯನ್ನು ಹೊರಡಿಸುತ್ತಾರೆ. ಅಜ್ಞಾ ಮುಹೂರ್ತದ ನಂತರ ತೀರ್ಥೋದ್ಭವದ ತನಕವೂ ಮಧುಮಾಂಸ ಆಹಾರವನ್ನು ವರ್ಜ್ಯಮಾಡಬೇಕೆಂಬದು ಅಲ್ಲಿನ ಕಟ್ಟಳೆ. ಮರಕಡಿಯುವುದು, ಪ್ರಾಣಿ ಪಕ್ಷಿವಧೆ ಮಾಡುವುದಾಗಲಿ ಯಾರು ಕೂಡಾ ಮಾಡÀಬಾರದು. ಇದಕ್ಕೆ ತಪ್ಪಿದಲ್ಲಿ ದೇವರು ನೀಡುವ ಶಿಕ್ಷೆಯನ್ನು ಅನುಭವಿಸಬೇಕಾದೀತೆಂದು ಕಟ್ಟಾಜ್ಞೆಯನ್ನು ತಕ್ಕರು ವಿಧಿಸುತ್ತಾರೆ.

ಈ ಕ್ಷೇತ್ರವು ರಾಜರ ಕಾಲದಲ್ಲಿರುವಾಗ ಕಾವೇರಿ ಜಾತ್ರೆಯ ಸಂಬAಧವಾಗಿ ವಿಶೇಷ ರಾಜಾಜ್ಞೆಯನ್ನು ಹೊರಡಿಸುತ್ತಿದ್ದುದನ್ನು ತಲಕಾವೇರಿ ತಕ್ಕರಾದ ಕೋಡಿ ಮೋಟಯ್ಯ ಅವರು ನೆನಪಿಸಿಕೊಂಡರು. ಕೊಡಗು ರಾಜ್ಯವಾಗಿದ್ದಾಗ ಎಲ್ಲಾ ಭಕ್ತರಿಗೆ ಅನ್ವಯವಾಗುವಂತೆ ೧೨ ಕೊಂಬು ಅಂದರೆ ರಾಜಾಜ್ಞೆಯಂತೆ ಕೊಂಬು ಕಹಳೆಯನ್ನು ಊದಿದಾಗ ಅದರ ಶಬ್ದವು ಎಲ್ಲಿಯವರೆಗೆ ಕೇಳಿಸು ತ್ತದೋ ಅಲ್ಲಿಯ ತನಕದ ನಿವಾಸಿಗಳು, ಪ್ರಜೆಗಳು ಈ ಆಜ್ಞೆಯನ್ನು ಪಾಲಿಸ ತಕ್ಕದ್ದು ಎಂದು ಕಟ್ಟಪ್ಪಣೆಯನ್ನು ಹೊರಡಿಸುತ್ತಿದ್ದರೆಂದು ತಕ್ಕರಾದ ಮೋಟಯ್ಯ ಅವರು ಜ್ಞಾಪಿಸಿಕೊಂಡರು. ಅಲ್ಲದೆ ತಲಕಾವೇರಿಯಲ್ಲಿ ಪ್ರಸ್ತುತವಾಗಿ ತಕ್ಕರು ಒಂದು ತಿಂಗಳು ವ್ರತಾನುಷ್ಠಾನ ಮಾಡಿ ಕಾವೇರಿಯಮ್ಮನ ಸೇವೆಯನ್ನು ಮಾಡುತ್ತಿರುವುದು ಸಂಪ್ರದಾಯವಾಗಿ ಬೆಳೆದು ಬಂದಿದೆ.

ಹೀಗೆ ಪ್ರಾರ್ಥನೆ ಸಲ್ಲಿಸಿದ ನಂತರ ನಂದಾದೀಪವನ್ನು ಬೆಳಗಲಾಗುತ್ತದೆ. ಒಂದು ತಿಂಗಳ ಕಾಲ ದೀಪ ಬೆಳಗುತ್ತಿರುತ್ತದೆ. ಬಳಿಕ ಅಕ್ಷಯ ಪಾತ್ರೆಯನ್ನು ಇರಿಸಿದ ನಂತರ ಪತ್ತಾಯದಿಂದ ಸಂಗ್ರಹಿಸಲಾದ ಅಕ್ಕಿಯನ್ನು ಆಗಮಿಸಿದ ಭಕ್ತಾದಿಗಳಿಗೆ ಹಂಚುತ್ತಾರೆ. ಇದಕ್ಕೂ ಮುಹೂರ್ತವನ್ನು ಗೊತ್ತುಪಡಿಸ ಲಾಗುತ್ತದೆ. ಜಾತ್ರಾ ಸಮಯದಲ್ಲಿ ಆಗಮಿಸುವ ಭಕ್ತಾದಿಗಳು ಹರಕೆ ರೂಪದಲ್ಲಿ ಸಮರ್ಪಿಸುವ ಹಣ, ಇತ್ಯಾದಿಗಳನ್ನು ಅರ್ಪಿಸಲು ಮುಹೂರ್ತ ನಿಶ್ಚಯ ಮಾಡಿ ಭಂಡಾರ ಗೋಲಕವನ್ನು ಇರಿಸಲಾಗುವುದು. ಅಂದೇ ವಿಶೇಷವಾಗಿ ಸಕಲ ವಿಘ್ನನಿವಾರಕನಾದ ಮಹಾಗಣಪತಿ ದೇವರಿಗೂ, ಜಾತ್ರೆಗೆ ಸಂಬAಧಿಸಿದ ಸಿದ್ಧತಾ ಕಾರ್ಯಗಳು ಸುಸೂತ್ರವಾಗಿ ನೆರವೇರ ಲೆಂದು ಪ್ರಾರ್ಥಿಸಿ ಅಪ್ಪಕಜ್ಜಾಯ ಸೇವೆಯನ್ನು ನೆರವೇರಿಸಲಾಗುತ್ತದೆ.

ಕಾವೇರಿ ತುಲಾ ಸಂಕ್ರಮಣ ಜಾತ್ರೆಯು ಕಳೆದು (ನವೆಂಬರ್-೧೬) ವೃಶ್ಚಿಕ ಸಂಕ್ರಮಣದAದು ಕಿರುಜಾತ್ರೆ-ಕಿರುಸಂಕ್ರಮಣ ಜಾತ್ರೆಯು ನಡೆಯುತ್ತದೆ. ವೃಶ್ಚಿಕ ಸಂಕ್ರಮಣದAದು ಕಿರು ಜಾತ್ರೆಯು ಮುಗಿದ ನಂತರ ಭಾಗಮಂಡಲ-ತಲಕಾವೇರಿ ಕ್ಷೇತ್ರಗಳಲ್ಲಿ ಶುದ್ಧೀಕರಣ-ಶುದ್ಧ ಕಲಶಾದಿಗಳು ಕ್ಷೇತ್ರದ ತಂತ್ರಿಯವರ ಮುಖಾಂತರ ನಡೆಯುತ್ತದೆ. ಸತ್‌ಸಂಪ್ರದಾಯವು ಹೀಗೆ ಉಳಿಯಲು ಸರ್ವರ ಸಹಕಾರ ಅಗತ್ಯವೆಂದು ಅಭಿಪ್ರಾಯಪಡುತ್ತಾ ಕಾವೇರಿ ಮಾತೆಯು ಸನ್ಮಂಗಳ ವನ್ನುಂಟು ಮಾಡಲೆಂದು ಪ್ರಾರ್ಥಿಸುತ್ತೇನೆ.

- ಎಸ್. ಎಸ್. ಸಂಪತ್‌ಕುಮಾರ್,

ಭಾಗಮಂಡಲ.