ವೀರಾಜಪೇಟೆ, ಜ. ೮: ವೀರಾಜಪೇಟೆ ಸಮೀಪದ ಕದನೂರು ಕೊಟ್ಟೋಳಿ ಕೊಡವ ಸಂಘದ ೧೮ನೇ ವಾರ್ಷಿಕೋತ್ಸವ ಇತ್ತೀಚೆಗೆ ವೀರಾಜಪೇಟೆ ಕೊಡವ ಸಮಾಜ ಸಭಾಂಗಣದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಬೊಳ್ಳಂಡ ಕಿಶೋರಿ ಅಯ್ಯಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಅಮ್ಮಣಿಚಂಡ ಯಮುನಾ ಅರಸು ಕಳೆದ ಸಭೆಯ ವರದಿಯನ್ನು ಮಂಡಿಸಿದರು. ಶೈಕ್ಷಣಿಕ ಸಾಧನೆಗೈದ ಸಂಘದ ಸದಸ್ಯರ ಮಕ್ಕಳನ್ನು ಈ ಸಂದರ್ಭ ಸನ್ಮಾನಿಸಲಾಯಿತು.

ಪ್ರಮುಖರಾದ ಮಾತಂಡ ಮೊಣ್ಣಪ್ಪ, ಕಲಿಯಂಡ ಉತ್ತಪ್ಪ ಮಾತನಾಡಿದರು. ಅಮ್ಮಣಿಚಂಡ ಪ್ರವೀಣ್ ನೇತೃತ್ವದ ತಂಡ ಬೊಳಕಾಟ್ ಹಾಗೂ ಅಮ್ಮಣಿಚಂಡ ಕವಿತ ತಂಡದ ನೃತ್ಯ ಕಾರ್ಯಕ್ರಮ ನಡೆಯಿತು.

ಮುಂದಿನ ಮೂರು ವರ್ಷಗಳ ಅವಧಿಗೆ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಮ್ಮಣಿಚಂಡ ರತ್ನ ಸುಬ್ರಮಣಿ ನೂತನ ಅಧ್ಯಕ್ಷರಾಗಿ, ಚನಿಯಪಂಡ ಸನ್ನಿ ಅಪ್ಪಯ್ಯ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಒಟ್ಟು ಏಳು ಜನರ ಸಮಿತಿಯನ್ನು ಸಭೆಯಲ್ಲಿ ಆಯ್ಕೆ ಮಾಡಲಾಯಿತು.

ಕೊಟ್ಟೇರ ಕುಸುಮ ಪೂವಣ್ಣ ನಿರೂಪಿಸಿ, ಕೋಣೇರಿರ ವಿನಯ್ ನಾಣಯ್ಯ ವಂದಿಸಿದರು. ಸಂಘದ ಸಮಿತಿ ಸದಸ್ಯರುಗಳಾದ ಬೊಳ್ಳಂಡ ಕಿಶೋರಿ ಅಯ್ಯಪ್ಪ, ಅಮ್ಮಣಿಚಂಡ ಯಮುನಾ ಅರಸು, ರಂಜನ್ ನಂಜಪ್ಪ, ಕವಿತ ಸುಬ್ರಮಣಿ, ಕೋಣೇರಿರ ಕುಶ ಕುಟ್ಟಪ್ಪ, ವಿನಯ್ ನಾಣಯ್ಯ, ಕೋಟೇರ ಕುಸುಮ ಪೂವಣ್ಣ, ಅನ್ನರ್ ಕಂಡಪ್ಪಜ್ಯ ಶ್ಯಾಂ, ಕೊಟ್ಟಂಗಡ ರಾಧಗಣಪತಿ ಹಾಜರಿದ್ದರು.