ಮಡಿಕೇರಿ, ಜ. ೯: ಕೊರೊನಾ ಮೂರನೇ ಅಲೆ ತಡೆಗೆ ಸರಕಾರ ಕೈಗೊಂಡಿರುವ ವೀಕೆಂಡ್ ಕರ್ಫ್ಯೂಗೆ ಭಾನುವಾರ ಕೊಡಗಿನ ಸಂಪೂರ್ಣ ಬೆಂಬಲ ವ್ಯಕ್ತವಾಯಿತು. ಜಿಲ್ಲೆಯಾದ್ಯಂತ ಜನಜೀವನ ಸ್ತಬ್ಧವಾಗಿತ್ತು.

ಭಾನುವಾರವಾಗಿರುವ ಹಿನ್ನೆಲೆ ಅಗತ್ಯ ವಸ್ತುಗಳ ಮಾರಾಟ ಮಳಿಗೆಗಳೂ ಹೆಚ್ಚಾಗಿ ತೆರೆದಿರಲಿಲ್ಲ. ಬೆಳಿಗ್ಗೆ ನಗರದ ಕಡೆಗೆ ಬಂದ ಜನರು ಅಗತ್ಯ ವಸ್ತು ಖರೀದಿ ಮಾಡಿ ಮನೆಗೆ ತೆರಳಿದರು. ಮಾಂಸ, ಮೀನು ಖರೀದಿ ಜೋರಾಗಿತ್ತು. ೧೦ ಗಂಟೆಯ ನಂತರ ಜನರ ಹಾಗೂ ವಾಹನ ಓಡಾಟ ವಿರಳವಾಯಿತು. ಪ್ರವಾಸೋದ್ಯಮ ಕೇಂದ್ರಗಳು ಬಂದ್ ಆಗಿದ್ದವು. ನಿಗದಿಯಾಗಿದ್ದ ಮದುವೆ, ಸಮಾರಂಭಗಳು ಕೋವಿಡ್ ಮಾರ್ಗಸೂಚಿ ಅನ್ವಯ ನಡೆದವು. ಖಾಸಗಿ ಬಸ್ ಸಂಚಾರ ಸ್ಥಗಿತವಾಗಿತ್ತು. ಸರಕಾರಿ ಬಸ್ ಸಂಚಾರ ವಿರಳವಾಗಿತ್ತು.

ಜಿಲ್ಲೆಯ ಹಲವೆಡೆ ಭಾನುವಾರ ಸಂತೆ ದಿನವಾದ ಹಿನ್ನೆಲೆ ವ್ಯಾಪಾರಿಗಳು ಪರದಾಡಿದರು. ಸಿದ್ದಾಪುರದಲ್ಲಿ ಜನಜಂಗುಳಿ ತಡೆಗೆ ಪೊಲೀಸರು ಲಾಠಿ ಬೀಸಿದರು. ಸುಂಟಿಕೊಪ್ಪದಲ್ಲಿ ಸಂತೆಗೆ ಬಂದಿದ್ದ ವ್ಯಾಪಾರಿಗಳ£

ÀÄ್ನ ವಾಪಸ್ ಕಳುಹಿಸಲಾಯಿತು. ಗೋಣಿಕೊಪ್ಪ ಸಂತೆ ಸ್ಥಗಿತಗೊಂಡಿತ್ತು.