ಚೆಟ್ಟಳ್ಳಿ, ಜ. ೮ : ಮಡಿಕೇರಿಯ ಕೊಡಗು ಸೇವಾ ಕೇಂದ್ರದ ವತಿಯಿಂದ ಎರಡು ಫಲಾನುಭವಿಗಳಿಗೆ ಕೇಂದ್ರದ ಕಚೇರಿಯ ಆವರಣದಲ್ಲಿ ಗಾಲಿ ಕುರ್ಚಿ ವಿತರಿಸಲಾಯಿತು.
ಮಡಿಕೇರಿಯ ಪೆನ್ಷನ್ ಲೇನ್ನಲ್ಲಿ ವಾಸವಾಗಿರುವ ಫಲಾನುಭವಿ ರೆನೊಲ್ಡ್ ಡಿಸೋಜ ಅವರ ಕಾಲು ಗ್ಯಾಂಗರಿನ್ ಕಾಯಿಲೆಗೆ ತುತ್ತಾಗಿ ತುಂಡರಿಸಿದ್ದು, ನಡೆಯಲು ಅಸಾಧ್ಯವಾಗಿತ್ತು.
ಎರಡನೇ ಫಲಾನುಭವಿ ಹಮಿಯಾಲದ ಮಾಚವ್ವ ತೀವ್ರತರದ ಆರ್ಥರೈಟಿಸ್ ಕಾಯಿಲೆಗೆ ತುತ್ತಾಗಿದ್ದು, ಇವರಿಬ್ಬರು ಕೊಟ್ಟ ಅರ್ಜಿಯನ್ನು ಪರಿಶೀಲಿಸಿ ಸೇವಾ ಕೇಂದ್ರದ ಮದನ್ ಅವರು ಇವರಿಬ್ಬರನ್ನು ಫಲಾನುಭವಿಗಳಾಗಿ ಆಯ್ಕೆಮಾಡಿದರು.
ಗಾಲಿಕುರ್ಚಿಯನ್ನು ಸೇವಾಕೇಂದ್ರಕ್ಕೆ ವೀರಾಜಪೇಟೆಯ ದತ್ತು ಟೈಲರ್ಸ್ನ ಮಾಲೀಕರಾದ ದಿವಗಂತ ದತ್ತು ಅವರ ಹೆಸರಿನಲ್ಲಿ ಅವರ ಮಗ ಅಮೆರಿಕದಲ್ಲಿರುವ ಅನಿಲ್ ದತ್ತ್ ಅವರು ಸೇವಾಕೇಂದ್ರದ ಸಂಚಾಲಕ ಪುತ್ತರಿರ ಪಪ್ಪು ತಿಮ್ಮಯ್ಯ ಅವರ ಮುಖಾಂತರ ಕಳುಹಿಸಿದ್ದರು.
ವಿತರಣೆ ಸಂದರ್ಭ ಸೇವಾಕೇಂದ್ರದ ಸಂಚಾಲಕ ಅಜ್ಜಿನಂಡ ತಮ್ಮು ಪೂವಯ್ಯ, ಮಂದಪAಡ ಸತೀಶ್ ಅಪ್ಪಚ್ಚು, ಕೊಡವ ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿ ಮತ್ತು ಸೇವಾಕೇಂದ್ರದ ಪದಾಧಿಕಾರಿ ಮಾರ್ಚಂಡ ಗಣೇಶ್, ಸೇವಾಕೇಂದ್ರದ ಸಂಚಾಲಕಿ ನಾಗಂಡ ಜೀವಿತ ಹಾಜರಿದ್ದರು.