ಕೂಡಿಗೆ, ಜ. ೮: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳೆ ಕೂಡಿಗೆ ಶಾಲೆ ಮುಂಭಾಗದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಕುಶಾಲನಗರದ ಗ್ರಾಮಾಂತರ ಪೊಲೀಸರು ಹೆಬ್ಬಾಲೆಯ ಕೀರ್ತಿ, ಬಸವನಹಳ್ಳಿಯ ದೊಡ್ಡ ಎಂಬ ಆರೋಪಿಗಳನ್ನು ಬಂದಿಸಿ, ೨೬೫ ಗ್ರಾಂ. ಗಾಂಜಾ ಸೇರಿದಂತೆ ಅವರು ಬಳಸಿದ ಆಟೋವನ್ನು ವಶಪಡಿಸಿಕೊಂಡಿದ್ದಾರೆ.
ಈ ಸಂದರ್ಭ ಕುಶಾಲನಗರದ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಶಿವಶಂಕರ್, ಕೂಡಿಗೆ ಗ್ರಾಮ ಲೆಕ್ಕಾಧಿಕಾರಿ ಗುರುದರ್ಶನ್, ಗ್ರಾಮ ಪಂಚಾಯಿತಿ ಕಂದಾಯ ವಸೂಲಿಗಾರ ಅನಿಲ್, ಪೊಲೀಸ್ ಸಿಬ್ಬಂದಿಗಳಾದ ಶ್ರೀನಿವಾಸ, ಮಂಜುನಾಥ, ಶನತ್, ಚಾಲಕ ಯೋಗೇಶ್ ಇದ್ದರು.