ಇನ್ನೂ ಸಿಗದ ಪಿಂಚಣಿ
ನಾಪೋಕ್ಲು, ಜ. ೭: ೧೯೭೫-೭೬ ರ ತುರ್ತು ಪರಿಸ್ಥಿತಿಯ ಸಂದರ್ಭ ಸೆರೆಮನೆ ವಾಸವನ್ನು ಅನುಭವಿಸಿದವರಿಗೆ ಪಿಂಚಣಿ ನೀಡುವ ವಿಷಯದಲ್ಲಿ ಅಂತವರು ಅರ್ಜಿಯನ್ನು ಸಲ್ಲಿಸುವಂತೆ ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ್ ಪ್ರಕಟಣೆಯಲ್ಲಿ ಮನವಿ ಮಾಡಿದ್ದರು. ನೆಲಜಿ ಗ್ರಾಮದ ೭೦ ವರ್ಷ ಪ್ರಾಯದ ಮಣವಟ್ಟೀರ ಸುಬ್ರಮಣಿ ಅವರು ೫೫ ದಿನ ತುರ್ತು ಪರಿಸ್ಥಿತಿ ಸಂದರ್ಭ ಸೆರೆವಾಸವನ್ನು ಅನುಭವಿಸಿದ್ದು, ಪಿಂಚಣಿಗೆ ಅರ್ಜಿ ಸಲ್ಲಿಸಿದ್ದರು. ಇದುವರೆಗೆ ಈ ವಿಷಯದ ಬಗ್ಗೆ ಯಾವುದೇ ತಿಳುವಳಿಕೆ ಪತ್ರವಾಗಲಿ ಬಂದಿರುವುದಿಲ್ಲ ಎಂದು ಪತ್ರಿಕೆÀಯೊಂದಿಗೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ತಮಗೆ ಪಿಂಚಣಿ ಸೌಲಭ್ಯವನ್ನು ಒದಗಿಸಿಕೊಡುವಂತೆ ಕೋರಿದ್ದಾರೆ.
- ದುಗ್ಗಳ