ಶ್ರೀಮAಗಲ, ಜ. ೭: ಕೊಡವ ಭಾಷೆಯನ್ನು ಒಂದು ವಿಷಯವಾಗಿ ಪಠ್ಯ ಕ್ರಮದಲ್ಲಿ ತರುವ ನಿಟ್ಟಿನಲ್ಲಿ ಪೊನ್ನಂಪೇಟೆ ಕೊಡವ ಸಮಾಜದ ಆಶ್ರಯದಲ್ಲಿ ನಡೆಯುತ್ತಿರುವ ಇಲ್ಲಿನ ಅಪ್ಪಚ್ಚಕವಿ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಅಧಿಕೃತವಾಗಿ ಪಾಠ, ಪ್ರವಚನದ ಮೊದಲ ತರಗತಿಯನ್ನು ಶುಕ್ರವಾರದಿಂದ ಆರಂಭಿಸಲಾಯಿತು.

೫ನೇ ತರಗತಿಯಿಂದ ಆರಂಭವಾಗಿರುವ ಕೊಡವ ಪಠ್ಯ ಕ್ರಮ ಬೋಧನೆಯನ್ನು ಈಗಾಗಲೇ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮೂಲಕ ರಚಿಸಿದ ಸಮಿತಿಯಿಂದ ತಯಾರಾದ ಪಠ್ಯ ಪುಸ್ತಕ ಆಧಾರದಲ್ಲಿ ತರಬೇತಿ ಪಡೆದ ಶಿಕ್ಷಕಿಯರು ತರಗತಿಯನ್ನು ವಿದ್ಯಾರ್ಥಿಗಳಿಗೆ ಆರಂಭಿಸಿದರು.

ಇದಕ್ಕೂ ಮೊದಲು ನಡೆದ ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ ಮಂಡಚAಡ ದಿನೇಶ್‌ಚಿಟ್ಟಿಯಪ್ಪ ಅವರು ಮಾತನಾಡಿ, ಕೊಡವ ಭಾಷೆಯನ್ನು ಒಂದು ವಿಷಯವಾಗಿ ವಿದ್ಯಾರ್ಥಿಗಳು ಕಲಿಯುವುದರಿಂದ ಭವಿಷ್ಯದ ಉನ್ನತ ಶಿಕ್ಷಣ ಮತ್ತು ಉದ್ಯೋಗದಲ್ಲಿ ಅನುಕೂಲವಾಗಲಿದೆ. ಈಗಾಗಲೇ ಕೂಡಿಗೆಯ ಚಿಕ್ಕ ಅಳುವಾರದಲ್ಲಿ ಕೊಡವ ಭಾಷೆಯಲ್ಲಿ ಸ್ನಾತಕೋತ್ತರ, ಗೋಣಿಕೊಪ್ಪ ಕಾವೇರಿ ಕಾಲೇಜಿನಲ್ಲಿ ಪದವಿ ತರಗತಿಯಲ್ಲಿ ಕೊಡವ ಭಾಷೆಯನ್ನು ಐಚ್ಚಿಕ ವಿಷಯವಾಗಿ ತೆಗೆದುಕೊಳ್ಳಲು ಅವಕಾಶ ದೊರೆತಿದೆ ಎಂದು ಹೇಳಿದರು.

ಕೊಡವ ಭಾಷೆಯನ್ನು ಪಠ್ಯಕ್ರಮವಾಗಿ ಮೊದಲ ಬ್ಯಾಚ್‌ನಲ್ಲಿ ಕಲಿಯುತ್ತಿರುವುದು ಮತ್ತು ಕಲಿಸುತ್ತಿರುವ ವಿದ್ಯಾರ್ಥಿಗಳು ಹೆಮ್ಮೆಪಡುವ ಮತ್ತು ಚಾರಿತ್ರಾರ್ಹ ವಿಷಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಕೊಡವ ಭಾಷೆ ಪಠ್ಯ ಅನುಷ್ಠಾನ ಸಮಿತಿ ಸಂಚಾಲಕ ಮಾಚಿಮಾಡ ರವೀಂದ್ರ ಮಾತನಾಡಿ, ಈಗಾಗಲೇ ಜಿಲ್ಲೆಯ ೯ ಶಾಲೆಗಳು ಸ್ವಯಂ ಪ್ರೇರಿತವಾಗಿ ಕೊಡವ ಭಾಷೆಯನ್ನು ತಮ್ಮ ಶಾಲೆಯಲ್ಲಿ ತರಗತಿ ಆರಂಭಿಸಲು ಮುಂದೆ ಬಂದಿದ್ದು, ಈ ಬಗ್ಗೆ ಶಿಕ್ಷಕರು ತರಬೇತಿಯನ್ನು ಸಹ ಪಡೆದಿದ್ದಾರೆ. ಟಿ. ಶೆಟ್ಟಿಗೇರಿಯ ರೂಟ್ಸ್ ಶಾಲೆ, ಪೊನ್ನಂಪೇಟೆಯ ಅಪ್ಪಚ್ಚಕವಿ ವಿದ್ಯಾಲಯ, ಸಾಯಿ ಶಂಕರ್, ಕರ್ನಾಟಕ ಪಬ್ಲಿಕ್ ಸ್ಕೂಲ್, ತೂಚಮಕೇರಿಯ ಜಿ.ಎಂ.ಪಿ. ಶಾಲೆ, ಶ್ರೀಮಂಗಲದ ಜೆ.ಸಿ. ವಿದ್ಯಾಸಂಸ್ಥೆ, ಗೋಣಿಕೊಪ್ಪಲು ಲಯನ್ಸ್ ಶಾಲೆ, ಅರುವತ್ತೊಕ್ಲುವಿನ ಸರ್ವದೈವತಾ ಶಾಲೆ ಪ್ರಸಕ್ತ ವರ್ಷದಿಂದ ಕೊಡವ ಪಠ್ಯಕ್ರಮವನ್ನು ಒಂದು ವಿಷಯವಾಗಿ ಹಾಗೂ ಮೂರನೇ ಭಾಷೆಯಾಗಿ ತರಗತಿ ನಡೆಸಲು ಮುಂದಾಗಿದೆ. ಮುಂದಿನ ದಿನಗಳಲ್ಲಿ ಈ ಶಾಲೆಗಳು ಸಹ ತರಗತಿಯನ್ನು ಆರಂಭಿಸಲಿವೆ. ಕೊಡವ

(ಮೊದಲ ಪುಟದಿಂದ) ಭಾಷೆಯಲ್ಲಿ ತರಗತಿ ಆರಂಭಿಸುವುದು ಚರಿತ್ರೆಯಲ್ಲಿ ದಾಖಲಾಗುವ ವಿಷಯವಾಗಿದೆ.

ಕೊಡವ ಭಾಷೆಯಲ್ಲಿ ಈ ಪಠ್ಯಕ್ರಮವನ್ನು ೧೫ ವರ್ಷದ ಹಿಂದೆಯೇ ಅಳವಡಿಸಲು ಯೋಜನೆ ಇತ್ತು. ಪುಸ್ತಕ ಸಹ ರಚನೆಯಾಗಿತ್ತು. ಹಲವು ಕಾರಣದಿಂದ ಆರಂಭಿಸಲು ಸಾಧ್ಯವಾಗಲಿಲ್ಲ. ಇದೀಗ ತರಗತಿ ಆರಂಭವಾಗಿದ್ದು, ಭಾಷಾ ಅಲ್ಪಸಂಖ್ಯಾತವಾಗಿರುವ ಕೊಡವ ಭಾಷೆಯನ್ನು ಒಂದು ವಿಷಯವಾಗಿ ಕಲಿತ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಉನ್ನತ ಶಿಕ್ಷಣ ಹಾಗೂ ಉದ್ಯೋಗ ಸೇರಿದಂತೆ ಇತರ ವಿಷಯದಲ್ಲಿ ಅನುಕೂಲವಾಗಲಿದೆ ಎಂದು ಹೇಳಿದರು.

ಪಠ್ಯ ಪುಸ್ತಕ ರಚನಾ ಸಮಿತಿಯ ಸಂಚಾಲಕ ಕಾಳಿಮಾಡ ಮೋಟಯ್ಯ ಅವರು ಮಾತನಾಡಿ, ೧ನೇ ತರಗತಿಯಿಂದ ಕನ್ನಡ ಭಾಷೆಯಲ್ಲಿ ಅಕ್ಷರಮಾಲೆ ಕಲಿತ ವಿದ್ಯಾರ್ಥಿಗಳಿಗೆ ೫ನೇ ತರಗತಿಯಲ್ಲಿ ಬರುವ ಐಚ್ಚಿಕ ಭಾಷೆಯ ವಿಷಯವಾದ ಕೊಡವ ಭಾಷೆಯ ತರಗತಿ ಕಷ್ಟವಾಗುವುದಿಲ್ಲ. ಕನ್ನಡ ಲಿಪಿಯನ್ನೇ ಬಳಸಿಕೊಂಡು ಕೊಡವ ತರಗತಿ ನಡೆಯುವುದರಿಂದ ಕನ್ನಡ ಕಲಿತ ವಿದ್ಯಾರ್ಥಿಗಳಿಗೆ ಸುಲಭವಾಗಿ ಕೊಡವ ಪಠ್ಯಕ್ರಮ ಕಲಿಯಬಹುದಾಗಿದೆ. ಇದರಿಂದ ಕೊಡವ ಭಾಷೆಯ ಬೆಳವಣಿಗೆಗೂ ಸಹಕಾರಿಯಾಗಲಿದೆ ಎಂದು ವಿವರಿಸಿದರು.

ವಿದ್ಯಾಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಮಲಚೀರ ತನುಜ ಅವರು ಮಾತನಾಡಿ, ೫ನೇ ತರಗತಿಯಲ್ಲಿ ಕೊಡವ ಭಾಷೆಯ ಐಚ್ಚಿಕ ವಿಷಯವನ್ನು ಕಲಿಯಲು ತಿಳಿಸಿದಾಗ ಉತ್ಸುಕತೆಯಿಂದ ಪೋಷಕರು ಹಾಗೂ ೫ನೇ ತರಗತಿಗೆ ಸೇರಿದ ಎಲ್ಲಾ ವಿದ್ಯಾರ್ಥಿಗಳು ಒಪ್ಪಿಕೊಂಡಿದ್ದು, ಶಿಕ್ಷಕಿಯರು ಸಹ ಕೊಡವ ಭಾಷೆಯ ತರಗತಿ ನಡೆಸಲು ಆಸಕ್ತಿ ತೋರಿದ್ದಾರೆ. ನಮ್ಮ ವಿದ್ಯಾಸಂಸ್ಥೆ ಕೊಡವ ಭಾಷೆಯ ತರಗತಿಯನ್ನು ಆರಂಭಿಸಿರುವುದು ಹೆಮ್ಮೆಯ ವಿಚಾರವಾಗಿದೆ ಎಂದು ಹೇಳಿದರು.

೫ನೇ ತರಗತಿಯ ೨೭ ವಿದ್ಯಾರ್ಥಿಗಳ ಮೊದಲ ಬ್ಯಾಚ್‌ನಲ್ಲಿ ತರಗತಿ ಆರಂಭವಾಯಿತು. ತರಗತಿಯನ್ನು ಶಿಕ್ಷಕಿಯರಾದ ಸರಿತಾ ಹಾಗೂ ಪೂವಮ್ಮ ನಡೆಸಿದರು. ವಾರದಲ್ಲಿ ಎರಡು ತರಗತಿಗಳನ್ನು ಈ ವಿಷಯದಲ್ಲಿ ನಡೆಸಲು ವಿದ್ಯಾಸಂಸ್ಥೆ ನಿರ್ಧರಿಸಿದೆ.

ವೇದಿಕೆಯಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯ ಪಡಿಞõÁರಂಡ ಪ್ರಭುಕುಮಾರ್, ಮಾಜಿ ಸದಸ್ಯ ಅಣ್ಣೀರ ಹರೀಶ್ ಮಾದಪ್ಪ ಹಾಜರಿದ್ದರು.