ಗೋಣಿಕೊಪ್ಪ ವರದಿ, ಜ. ೭: ಇಗ್ಗುತ್ತಪ್ಪ ಕೊಡವ ಸಂಘದ ಮಹಾಸಭೆ ಕಕೂನ್ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಅಜ್ಜಿಕುಟ್ಟೀರ ದೇವಯ್ಯ ಅಧ್ಯಕ್ಷತೆಯಲ್ಲಿ ತಾ. ೪ ರಂದು ನಡೆಯಿತು.
ಸಂಘದ ಚಟುವಟಿಕೆಗೆ ಸುಮಾರು ರೂ. ೩೧ ಲಕ್ಷದಲ್ಲಿ ನಿರ್ಮಿಸುತ್ತಿರುವ ಕಟ್ಟಡ ಕಾಮಗಾರಿ ಪ್ರಗತಿ ಬಗ್ಗೆ ಚರ್ಚೆ ನಡೆಯಿತು. ಸದಸ್ಯರುಗಳ ಸಹಭಾಗಿತ್ವದಲ್ಲಿ ಆರ್ಥಿಕ ಕ್ರೋಢೀಕರಣ ಮಾಡಲು ನಿರ್ಧರಿಸಲಾಯಿತು.
ನೂತನ ಆಡಳಿತ ಮಂಡಳಿಗೆ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಅಜ್ಜಿಕುಟ್ಟೀರ ದೇವಯ್ಯ ಪುನರಾಯ್ಕೆ ಯಾದರು.
ಉಪಾಧ್ಯಕ್ಷರಾಗಿ ಕೊಣಿಯಂಡ ಬೋಜಮ್ಮ ಉತ್ತಪ್ಪ, ಕಾರ್ಯದರ್ಶಿಯಾಗಿ ಚೋನೀರ ಸತ್ಯ, ಖಜಾಂಚಿಯಾಗಿ ಕರ್ತುರ ನಾಚಪ್ಪ, ನಿರ್ದೇಶಕರಾಗಿ ಮೂಕಳಮಾಡ ಪೂಣಚ್ಚ, ಚೋನೀರ ಮಂಜು, ಚೊಟ್ಟೆಯಂಡ ಮಾಡ ಅರುಣ ಬೆಳ್ಯಪ್ಪ, ಮಲಚೀರ ಯಶೋಧ ದೇವಯ್ಯ, ಚಿಲ್ಲವಂಡ ರಚನ ದರ್ಶನ್, ನೆಲ್ಲಮಕ್ಕಡ ಪ್ರೇಮ, ಮಲ್ಲಂಡ ಸುರೇಶ್, ಮುರುವಂಡ ರತ್ತು ಉತ್ತಪ್ಪ, ಪೆಮ್ಮಂಡ ನಿತಿನ್, ಚೊಟ್ಟೆಯಂಡಮಾಡ ರೀಟಾ ಮಾದಪ್ಪ, ಅಯ್ಯಂಡ ಪೂವಯ್ಯ, ಹೊಟ್ಟೇಂಗಡ ಸುರೇಶ್, ಮೋರ್ಕಂಡ ಗಣಪತಿ ಅವರನ್ನು ಆಯ್ಕೆ ಮಾಡಲಾಯಿತು.