ಗುಡ್ಡೆಹೊಸೂರು, ಜ. ೮: ಇಲ್ಲಿಗೆ ಸಮೀಪದ ಬೆಟ್ಟಗೇರಿಯಲ್ಲಿ ಜೀರ್ಣೋದ್ಧಾರಗೊಳ್ಳುತ್ತಿರುವ ಶ್ರೀ ಚೌಡೇಶ್ವರಿ ದೇವಸ್ಥಾನ ಆವರಣದಲ್ಲಿ ನಾಗದೇವರ ಪೂಜೆ ನಡೆಸಲಾಯಿತು.
ಈ ಪೂಜಾ ಕಾರ್ಯದಲ್ಲಿ ಗ್ರಾಮಸ್ಥರು ಮತ್ತು ದೇವಸ್ಥಾನ ಸಮಿತಿಯವರು ಭಾಗವಹಿಸಿದ್ದರು. ಕೋವಿಡ್ ನಿಯಮ ಪಾಲಿಸಿ ಪೂಜಾ ಕಾರ್ಯ ನಡೆಸಲಾಯಿತು. ಪೂಜಾ ಕಾರ್ಯವನ್ನು ಕುಶಾಲನಗರದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಅರ್ಚಕ ಸೋಮಶೇಖರ್ ಮತ್ತು ತಂಡದವರು ನೆರವೇರಿಸಿದರು.