ಕುಶಾಲನಗರ, ಜ. ೭: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಶ್ರಯದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಮತ್ತು ವಿವಿಧ ಸಂಘ-ಸAಸ್ಥೆಗಳ ಸಹಕಾರದೊಂದಿಗೆ ಕುಶಾಲನಗರ ಸಮೀಪದ ಬೈಲುಕುಪ್ಪೆಯಲ್ಲಿ ೧೫೦೧ನೇ ಮದ್ಯವರ್ಜನ ಶಿಬಿರ ಏರ್ಪಡಿಸಲಾಗಿದೆ.

ಜನವರಿ ೨ ರಿಂದ ಆರಂಭಗೊAಡ ಮದ್ಯವರ್ಜನ ಶಿಬಿರ ೮ ದಿನಗಳ ಕಾಲ ನಡೆಯಲಿದೆ. ಮಲ್ಕಪ್ಪ ಎಸ್ ಎನ್ ವಿ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರುವ ಮದ್ಯವರ್ಜನ ಶಿಬಿರದಲ್ಲಿ ಒಟ್ಟು ೧೨೪ ಶಿಬಿರಾರ್ಥಿಗಳು ಪಾಲ್ಗೊಂಡಿದ್ದಾರೆ.

ಶಿಬಿರದಲ್ಲಿ ಬೆಳಗ್ಗೆ ೫ ಗಂಟೆಯಿAದ ಸಂಜೆ ೯ ಗಂಟೆ ತನಕ ವಿವಿಧ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಶಿಬಿರಾರ್ಥಿಗಳಿಗೆ ವ್ಯಾಯಾಮ ಮತ್ತು ಧ್ಯಾನ, ಆರೋಗ್ಯ ತಪಾಸಣೆ, ನವಜೀವನ ಸಮಿತಿ ಸದಸ್ಯರ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ, ಉಪನ್ಯಾಸ ಕಾರ್ಯಕ್ರಮ, ಕೌಟುಂಬಿಕ ಸಲಹೆ, ಗಣ್ಯರಿಂದ ಮಾಹಿತಿ ಮಾರ್ಗದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ, ಭಜನಾ ಕಾರ್ಯಕ್ರಮ ಮತ್ತಿತರ ದಿನಚರಿ ನಡೆಸಲಾಗುತ್ತಿದೆ.

ಎಂಟು ದಿನಗಳ ಕಾಲ ನಡೆಯಲಿರುವ ಶಿಬಿರದಲ್ಲಿ ಶಿಬಿರಾಧಿಕಾರಿಯಾಗಿ ದೇವಿಪ್ರಸಾದ್, ಆರೋಗ್ಯ ಸಹಾಯಕಿಯಾಗಿ ರಂಜಿತ ಮತ್ತು ಟಿ ಎನ್ ರಾಜೇಶ್ ನೇತೃತ್ವದ ಮದ್ಯವರ್ಜನ ಶಿಬಿರದ ವ್ಯವಸ್ಥಾಪನ ಸಮಿತಿ ಮೂಲಕ ಶಿಬಿರ ಆಯೋಜಿಸಲಾಗಿದೆ.

ತಾ. ೯ರಂದು ಶಿಬಿರದ ಸಮಾರೋಪ ಸಮಾರಂಭ ನಡೆಯಲಿದ್ದು, ವೀರಾಜಪೇಟೆ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳು ಆಶೀರ್ವಚನ ನೀಡಲಿದ್ದು, ಸಮಾರಂಭದಲ್ಲಿ ಶಿಬಿರದ ಗೌರವಾಧ್ಯಕ್ಷ ಎನ್. ಸ್ವಾಮಿ ಅಧ್ಯಕ್ಷತೆಯಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿರ್ದೇಶಕ ಡಾ. ಯೋಗೀಶ್ ತಿಳಿಸಿದ್ದಾರೆ.