ಕಾವೇರಿಯು ದೇವಲೋಕದಿಂದ ಭೂಲೋಕಕ್ಕೆ ಇಳಿದು ಬಂದವಳು. ಮಹಾತ್ಯಾಗದ ನಿದರ್ಶನವಾಗಿ, ಶಕ್ತಿಯಾಗಿ ಜಲರೂಪ ತಳೆದು ನದಿಯಾಗಿ ಹರಿದು ಲೋಕಪಾವನೆಯಾಗಿ ಉಳಿದಳು. ತಲಕಾವೇರಿಯಲ್ಲಿ ಬ್ರಹ್ಮಗಿರಿಯ ತಪ್ಪಲಿನಲ್ಲಿ ನದಿರೂಪಿಣಿಯಾಗಿ ಹುಟ್ಟಿ ಅವಳೊಂದಿಗೆ ಒಂದಾಗಿ ಲೋಕ ಕಲ್ಯಾಣಕ್ಕೆ ಅವಳಿಗೆ ನೆರವಾಗುವ ನದಿಗಳ ಸಂಖ್ಯೆ-ಅಸAಖ್ಯವಾದುದು. ಬಲಮುರಿ, ಗುಹ್ಯ, ರಾಮಸ್ವಾಮಿ ಕಣಿವೆ, ರಾಮನಾಥಪುರ, ಸಾಲಿಗ್ರಾಮ, ಚುಂಚನಕಟ್ಟೆ, ಕಪ್ಪಡಿಕ್ಷೇತ್ರ, ಎಡತೊರೆ ಮೈಸೂರು ಸಮೀಪದ ೨ನೇ ಬಲಮುರಿ, ರಂಗನತಿಟ್ಟು, ಪಶ್ಚಿಮವಾಹಿನಿ, ಶ್ರೀರಂಗಪಟ್ಟಣ, ಕರೀಘಟ್ಟ ಸೋಮನಾಥಪುರ, ತಿರುಮಕೊಡ್ಲು, ನರಸೀಪುರ, ಮಂಡೂಕುತೊರೆ, ತಲಕಾಡು, ಸತ್ಯಗಾಲ, ಶಿವನಸಮುದ್ರ, ಗಗನಚುಕ್ಕಿ, ಭರಚುಕ್ಕಿ, ಮೇಕೆದಾಟು, ಹೊಗೆನಕಲ್, ಮೆಟ್ಟೂರು, ಭವಾನಿ ಈರೋಡು, ಉಂಜಲೂರು, ಕಾಂಗ್ಯನ್‌ಪಾಳ್ಯಮ್, ಕೊಡುಮುಡಿ, ತಿರುಮಕೊಡ್ಲು ಕಟ್ಟಳೆ, ರಂಗಸಮುದ್ರಮ್, ನತ್ತಮ್, ತಿರುನಾರಾಯಣಪುರಮ್, ತಿರುಈಂಗೋಮಲೈ, ಗುಣಶೀಲಂ, ಕರುಪತ್ತೂರ್, ಕುಳಿತಳೈ, ತಿರುಪ್ಪರಾÊತುರೈ, ಮುಕ್ಕುಂ, ಶ್ರೀರಂಗA, ತಿರುವಾನೈಕ್ಕವಲ್, ತಿರುಚಿನಾಪಳ್ಳಿ, ಕಲ್ಲಣಿ, ತಿರುವೈಯೂರ್, ತಂಜಾವೂರ್, ದಾರಾಸುರಮ್, ಕುಂಭಕೋಣA, ತಿರುವಿಡೈಮರುತ್ತೂರು, ಗೋವಿಂದಪುರ ಧರ್ಮಾಪುರಮ್, ಕಾವೇರಿ ಪೂಂಪಟ್ಟಣ ಹೀಗೆ ತಲಕಾವೇರಿಯಿಂದ ಕಿರಿದಾಗಿ ಮೈದೋರಿದ ಮಹಾಮಾತೆ ಕಾವೇರಿಯು ಇಲ್ಲಿ ಸಾಗರದೊಡನೆ ಸಂಗಮವಾಗುವ ಹಂತದಲ್ಲೂ ಬಹುಮಟ್ಟಿಗೆ ಕಿರಿದಾಗಿ ಹರಿದು ಸಮುದ್ರವನ್ನು ಸೇರುತ್ತಾಳೆ.
ಪುಣ್ಯವಾಹಿನಿ ಕಾವೇರಿಯು ಕೊಡಗಿನ ತಲಕಾವೇರಿಯಲ್ಲಿ ಉಗಮಿಸಿ ತಮಿಳುನಾಡಿನ ತನಕ ಜೀವನದಿಯಾಗಿ ಹರಿದು ಸಾಗರದೊಡನೆ ಸಂಗಮವಾಗುವ ಈ ಎಲ್ಲಾ ಕ್ಷೇತ್ರಗಳಲ್ಲೂ ಒಂದಲ್ಲ ಒಂದು ರೀತಿಯಿಂದ ಪ್ರತಿದಿನವೂ ವಿಶೇಷವಾದ ಉತ್ಸವಾದಿಗಳು ನಡೆದು ನಂಬಿದ ಭಕ್ತರಿಗೆ, ಅವರ ಬದುಕಿಗೆ ಹೊಸ ಹುರುಪು, ಅನುಗ್ರಹ, ಆಶೀರ್ವಾದವನ್ನು ನೀಡಿ ಹರಸುತ್ತಾಳೆ. ಸಾಧಾರಣವಾಗಿ ಕಾವೇರಿಯು ಹರಿಯುವ ಎಲ್ಲಾ ಕಡೆಗಳಲ್ಲಿ ವಿಶೇಷ ಪೂಜೆ, ಬಾಗಿನ ಸಮರ್ಪಿಸುವ ಸಂಪ್ರದಾಯವು ನಡೆದು ಬಂದಿದೆ.
ಪೊಲಿAಕಾನ ಉತ್ಸವ
ತಲಕಾವೇರಿ-ಭಾಗಮಂಡಲ ಕ್ಷೇತ್ರಗಳಲ್ಲಿ ವರ್ಷಕ್ಕೊಮ್ಮೆ ತುಲಾಸಂಕ್ರಮಣ ಜಾತ್ರೆಗೆ ಮೊದಲು ಕಾವೇರಿ ದಂಡೆಗಳಲ್ಲಿ ಬೇರೆ-ಬೇರೆ ಸ್ಥಳಗಳಲ್ಲಿ ವಿಭಿನ್ನ ರೀತಿಯ ಉತ್ಸವಗಳು ನಡೆಯುತ್ತದೆ. ಹಾಗೆಯೇ ವಿಶೇಷವಾಗಿ ಕಾವೇರಿ ಹರಿದು ಬರುವ ಭಗಂಡ ಕ್ಷೇತ್ರವಾದ ಭಾಗಮಂಡಲದಲ್ಲೂ ಮಳೆಗಾಲದಲ್ಲಿ ಆಟಿ ತಿಂಗಳ ಅಮಾವಾಸ್ಯೆಯ, ಭೀಮನ ಅಮವಾಸ್ಯೆಯಂದು ಪೊಲಿಂಕಾನ ಉತ್ಸವವನ್ನು ಆಚರಿಸಲಾಗುವುದು. ಪೊಲಿಂಕಾನ ಉತ್ಸವವು ಕಾವೇರಿ ಮಾತೆಯ ಪ್ರೀತ್ಯರ್ಥವಾಗಿ ಆಚರಿಸಲ್ಪಡುವ ವೈಶಿಷ್ಟö್ಯ ಪೂರ್ಣವಾದ ಧಾರ್ಮಿಕ ಉತ್ಸವ ಇದಾಗಿದೆ. ಬಾಳೆಯ ರೆಂಬೆಗಳಿAದ ವಿಶಿಷ್ಟವಾದ ರೀತಿಯಲ್ಲಿ ಅಲಂಕೃತವಾಗಿ ಮಂಟಪವನ್ನು ಸುಮಾರು ಮೂರು ಅಡಿಗಳಷ್ಟು ಎತ್ತರವಾಗಿ ನಿರ್ಮಿಸಿ (೩x೩ ಅಡಿ) ಮಧ್ಯದಲ್ಲಿ ಜ್ಯೋತಿಯನ್ನು ಬೆಳಗಿಸಲು ವ್ಯವಸ್ಥೆಗೊಳಿಸಲಾಗುತ್ತದೆ. ಮಧ್ಯದಲ್ಲಿ ಮಂಗಳ ದ್ರವ್ಯ, ಕರಿಮಣಿ ತಾಳಿ, ಕುಂಕುಮ, ಬಿಚ್ಚೋಲೆಗಳನ್ನು ಬೆಳ್ಳಿಯ ಚಿಕ್ಕ ತಟ್ಟೆಯಲ್ಲಿಟ್ಟು, ಚಿಲ್ಲರೆ ಹಣವನ್ನು ಮಂಟಪದಲ್ಲಿಡುತ್ತಾರೆ. ಹೂಗಳಿಂದ ಅಲಂಕೃತಗೊಳಿಸಲಾಗುತ್ತದೆ. ಆ ಬಳಿಕ ಕಾವೇರಿ ಮಾತೆಯನ್ನು ವಿಶೇಷವಾಗಿ ದೇಗುಲದ ಅರ್ಚಕರು ಪೂಜಿಸುತ್ತಾರೆ. ವಿಪರೀತ ಮಳೆ, ನದಿಯ ಪ್ರವಾಹದಿಂದ ಊರಿಗೆ, ದೇಶಕ್ಕೆ, ನಾಡಿಗೆ ತೊಂದರೆ ಆಗದಿರಲೆಂದು ಭಕ್ತಿಪೂರ್ವಕವಾಗಿ ಪ್ರಾರ್ಥನೆ ಸಲ್ಲಿಸಿ ಭಕ್ತರು ಕೂಡಾ ತಮ್ಮ ಕಾಣಿಕೆಯನ್ನು ಮಂಟಪಕ್ಕೆ ಸಲ್ಲಿಸುತ್ತಾರೆ. ಅನಂತರ ದೇವಾಲಯದ ಅರ್ಚಕರು ದೇವರ ಉತ್ಸವದಂತೆ ವೇದಮಂತ್ರದೊಡನೆ ಮತ್ತು ಮಂಗಳವಾದ್ಯ, ಚಂಡೆಗಳೊಡನೆ ಪ್ರದಕ್ಷಿಣೆ ಬಂದು ಕಾವೇರಿ ನದಿಯ ಬಸವನ ಕಲ್ಲಿನ ಸಮೀಪ ಬಂದು ಪೂಜೆ ಪ್ರಾರ್ಥನೆಗಳೊಡನೆ ಮಂಟಪವನ್ನು ಅರ್ಚಕರು ತೇಲಿಬಿಡುತ್ತಾ ಕಾವೇರಿ ನದಿಗೆ ಅರ್ಪಿಸುತ್ತಾರೆ. ಭಕ್ತಾದಿಗಳು ಕಾವೇರಿ ಮಾತೆಗೆ ಜಯಕಾರ ಹಾಕುತ್ತಿದ್ದಂತೆ ಮಂಟಪವು ನದಿಯಲ್ಲಿ ತೇಲಿಕೊಂಡು ನಿಧಾನಗತಿಯಲ್ಲಿ ಸಾಗುವುದನ್ನು ಆಗಮಿಸಿದ ಭಕ್ತರು ನೋಡಿ ಕಣ್ಣು ತುಂಬಿಸಿಕೊಳ್ಳುತ್ತಾರೆ. ಅಂದು ಸಮೀಪದ ಎಲ್ಲಾ ಗ್ರಾಮಗಳಿಂದಲೂ ಭಕ್ತರು ಸೇರುವ ದೃಶ್ಯವು ಮನಸ್ಸಿಗೆ ಸಂತೃಪ್ತಿಯನ್ನುAಟು ಮಾಡುತ್ತದೆ.
ಪೊಲಿಂಕಾನ ಉತ್ಸವದ ಒಂದು ಪ್ರಚಲಿತ ಕಥೆಯಿದೆ. ಪುರಾತನಕಾಲದಲ್ಲಿ ಭಕ್ತೆಯೋರ್ವಳು ಅಮಾವಾಸ್ಯೆಯಂದು ಕ್ಷೇತ್ರಕ್ಕೆ ಭೇಟಿ ನೀಡಬೇಕೆಂಬ ಅಭಿಪ್ರಾಯಪಟ್ಟಿದ್ದು ಅಂದು ಪ್ರವಾಹ ಬಂದು ದಾಟಲು ಆಗಿಲ್ಲವೆಂದು ಕಾವೇರಿಮಾತೆಯನ್ನು ಭಕ್ತಿಪೂರ್ವಕವಾಗಿ ಪ್ರಾರ್ಥಿಸಿದ ನಂತರ ಪ್ರವಾಹ ಇಳಿಮುಖವಾಗುತ್ತದೆ. ಈ ಭಕ್ತೆ ದೇವಾಲಯದಲ್ಲಿ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಿದಳೆಂದು ಪ್ರತೀತಿ. ಅದು ಇಂದಿಗೂ ನಡೆಯುತ್ತಿರುವುದಾಗಿ ಕೆಲವರ ನಂಬಿಕೆ. ಇದೇ ರೀತಿಯಾಗಿ ತಮಿಳುನಾಡಿನಲ್ಲಿ ಕಾವೇರಿ ಹರಿಯುವ ಸ್ಥಳಗಳಲ್ಲಿ ‘‘ಪದಿನೆಟ್ಟಾಂಪೆರಕು’’ ಎಂಬ ಹಬ್ಬವನ್ನು ಆಟಿ ೧೮ರಂದು ಆಚರಿಸುತ್ತಾರೆ. ಅವರಿಗೂ ಆಟಿ ಮಾಸ ವಿಶೇಷವಾಗಿರುತ್ತದೆ. ಅಂದಿನ ಕಾಲದಲ್ಲಿ ಅರ್ಪಿಸುತ್ತಿದ್ದ ಪೊಲಿಂಕಾನ ಮಂಟಪವು ಸುಮಾರು ಪಾಲೂರು ಶ್ರೀ ಹರಿಶ್ಚಂದ್ರ ಕ್ಷೇತ್ರದವರೆಗೂ ತಲುಪಿದ ಬಗ್ಗೆ ಹೇಳಿದ್ದನ್ನು ನಾನು ಕೇಳಿರುತ್ತೇನೆ. ಆದುದರಿಂದ ಕಾವೇರಿಯ ಮಹಿಮೆ ಇಂದು ನಿನ್ನೆಯದಲ್ಲ, ಅತೀ ಪುರಾತನ ಧಾರ್ಮಿಕ ಸಂಪ್ರದಾಯವಾಗಿದ್ದು ಕೊಡಗಿನ ಭಕ್ತರು ಇಂತಹ ಉತ್ಸವಗಳಲ್ಲಿ ಪಾಲ್ಗೊಂಡರೆ ಒಳಿತಾಗುತ್ತದೆ.