ಮಡಿಕೇರಿ, ಜ. ೬: ಮಡಿಕೇರಿಯ ಕೊಡಗು ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸಂಸ್ಥೆಯ ವತಿಯಿಂದ ಇತ್ತೀಚೆಗೆ ಕೊಡವ ಸಮಾಜದ ಆವರಣದಲ್ಲಿ ಸೌಹಾರ್ದ ಸಹಕಾರಿ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಸಂಸ್ಥೆಯ ನಿರ್ದೇಶಕ ಮಣವಟ್ಟಿರ ಬಿ. ಮಾಚಯ್ಯ ಅವರು ಧ್ವಜಾರೋಹಣ ನೆರವೇರಿಸಿದರು. ಸಂಸ್ಥೆಯ ಅಧ್ಯಕ್ಷ ಮಂಡುವAಡ ಪಿ. ಮುತ್ತಪ್ಪ ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೊಡವ ಸಮಾಜದ ಅಧ್ಯಕ್ಷ ಕೊಂಗAಡ ಎಸ್. ದೇವಯ್ಯ ಅವರು ಶುಭ ಕೋರಿದರು.
ಎಂ.ಪಿ. ಮುತ್ತಪ್ಪ ಅವರು ಮಾತನಾಡಿ, ಸಂಸ್ಥೆಯ ಪ್ರಗತಿಯ ಕುರಿತು ವಿವರಿಸಿದರು. ಕಾರ್ಯಕ್ರಮದಲ್ಲಿ ಸ್ಪೀಚ್ ಅಂಡ್ ಹಿಯರಿಂಗ್‌ನಲ್ಲಿ ಪ್ರಥಮ ರ‍್ಯಾಂಕ್‌ಗಳಿಸಿರುವ ಸಂಸ್ಥೆಯ ಸದಸ್ಯರಾದ ಬೊಪ್ಪಂಡ ಶ್ಯಾಮ್ ಪೂಣಚ್ಚ ಹಾಗೂ ರತ್ನ ದಂಪತಿಯ ಪುತ್ರಿ ದಶಮಿ ಪೂಣಚ್ಚ ಅವರಿಗೆ ಗೌರವ ಸಲ್ಲಿಸಲಾಯಿತು.
ಬೊಟ್ಟೋಳಂಡ ಕಾಶಿ ಅಚ್ಚಯ್ಯ ಪ್ರಾರ್ಥಿಸಿ, ಸಹಕಾರ ಯೂನಿಯನ್‌ನ ವ್ಯವಸ್ಥಾಪಕಿ ಮಂಜುಳಾ ಭಟ್ ಸಹಕಾರಿ ಗೀತೆ ಹಾಡಿದರು. ಸಂಸ್ಥೆಯ ಪದಾಧಿಕಾರಿಗಳು, ಕೊಡವ ಸಮಾಜ ಹಾಗೂ ವಿದ್ಯಾನಿಧಿಯ ಪ್ರಮುಖರು, ವ್ಯವಸ್ಥಾಪಕಿ ಚೋಂದಮ್ಮ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.