ನಾಪೋಕ್ಲು, ಜ. ೭: ಒಂದು ಊರಿನ ದೇವಾಲಯವು ಅಭಿವೃದ್ಧಿಯಾದರೆ ಆ ಊರು ಅಭಿವೃದ್ಧಿಯಾದಂತೆ ಎಂದು ನಾಪೋಕ್ಲು ಭಗವತಿ ದೇವಾಲಯದ ಅಭಿವೃದ್ಧಿ ಸಮಿತಿಯ ಗೌರವ ಕಾರ್ಯದರ್ಶಿ ಅರೆಯಡ ಡಿ. ಸೋಮಪ್ಪ ಹೇಳಿದರು. ನಾಪೋಕ್ಲು ಭಗವತಿ ದೇವಾಲಯದ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದ್ದು, ವಾರ್ಷಿಕ ಮಹಾಸಭೆ ಮತ್ತು ಬ್ರಹ್ಮರಾಕ್ಷಸನಿಗೆ ನೈವೇದ್ಯ ಅರ್ಪಣೆ ಮತ್ತು ಮಹಾಪೂಜೆಯ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೊರೊನಾದಿಂದಾಗಿ ಹಬ್ಬ ಹರಿದಿನಗಳಿಗೆ ತೊಂದರೆಯಾಗಿವೆ. ನಾವು ನಿಗದಿತ ಸಮಯದಲ್ಲಿ ದೇವರ ಹಬ್ಬವನ್ನು ಆಚರಿಸಿಕೊಂಡು ಬಂದಿದ್ದೇವೆ ಎಂದ ಅವರು, ಊರಿನವರ ಸಹಾಯ ಸಹಕಾರದಿಂದ ಇಂದು ನಮ್ಮ ಊರ ದೇವಾಲಯವು ಯಾವುದೇ ಕುಂದುಕೊರತೆ ಇಲ್ಲದೆ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದರು. ಸಭೆಯಲ್ಲಿ ಕುಲ್ಲೇಟಿರ ಶಂಕರಿ ಚಂಗಪ್ಪ, ಅರೆಯಡ ಕರುಂಬಯ್ಯ (ರಘು) ಮಾತನಾಡಿದರು,

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾವು ನಿಗದಿತ ಸಮಯದಲ್ಲಿ ದೇವರ ಹಬ್ಬವನ್ನು ಆಚರಿಸಿಕೊಂಡು ಬಂದಿದ್ದೇವೆ ಎಂದ ಅವರು, ಊರಿನವರ ಸಹಾಯ ಸಹಕಾರದಿಂದ ಇಂದು ನಮ್ಮ ಊರ ದೇವಾಲಯವು ಯಾವುದೇ ಕುಂದುಕೊರತೆ ಇಲ್ಲದೆ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದರು. ಸಭೆಯಲ್ಲಿ ಕುಲ್ಲೇಟಿರ ಶಂಕರಿ ಚಂಗಪ್ಪ, ಅರೆಯಡ ಕರುಂಬಯ್ಯ (ರಘು) ಮಾತನಾಡಿದರು,

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಲ್ಲೇಟಿರ ಮುತ್ತಪ್ಪ, ಅಜ್ಜೇಟಿರ ರಾಜ ಮುತ್ತಪ್ಪ, ಕುಲ್ಲೇಟಿರ ಗುರುವಪ್ಪ, ಕುಂದೈರೀರ ತಮ್ಮಯ್ಯ, ಕೊಂಬAಡ ನಂದ, ಪಾಡಿಯಮ್ಮಂಡ ಮಿಟ್ಟು ಮತ್ತಿತರರು ಇದ್ದರು. ನಂತರ ಮಹಾಪೂಜೆ ನಡೆದು ನೆರೆದಿದ್ದ ಭಕ್ತಾದಿಗಳಿಗೆ ಅನ್ನದಾನ ಕಾರ್ಯಕ್ರಮ ನಡೆಯಿತು.

- ದುಗ್ಗಳ