ಮಡಿಕೇರಿ,ಜ.೬: ಮನೆಯ ಸುತ್ತ ಮುತ್ತ ಒಂದಷ್ಟು ದೂರದಲ್ಲಿ ಏನಾದರೂ ಸದ್ದಾದರೆ ಮನೆಯವರಿಗೆ, ಆಸು ಪಾಸಿನವರಿಗೆ ಸದ್ದು ಕೇಳಿಸುತ್ತದೆ, ಏನಾಯ್ತೆಂದು ಗೊತ್ತಾಗುತ್ತದೆ. ಆದರೆ., ಇಲ್ಲಿ ಇವರ ಮನೆಯ ಅಂಗಳದಲ್ಲಿ ೩೦ರಿಂದ ೪೦ ಅಡಿಗಳಷ್ಟು ದೊಡ್ಡದಾದ ಹೊಂಡ ತೋಡಿ., ಮಣ್ಣನ್ನು ಚೀಲಗಳಲ್ಲಿ ತುಂಬಿಸಿ ಹೊತ್ತೊಯ್ದರೂ ಅಲ್ಲಿಯೇ ಇದ್ದವರಿಗೆ ಗೊತ್ತೇ ಆಗಿಲ್ಲವಂತೆ..! ಇದು ಅರಣ್ಯವನ್ನು ರಕ್ಷಣೆ ಮಾಡುವ ಸಲುವಾಗಿ ಜವಾಬ್ದಾರಿಯುತ ಸ್ಥಾನದಲ್ಲಿರುವವರ ಪರಿಸ್ಥಿತಿ..!
ಆಶ್ಚರ್ಯವೆನಿಸಿದರೂ ಇದು ಸತ್ಯ., ನಿಶಾನೆ ಮೊಟ್ಟೆಯಲ್ಲಿ ಅಕ್ರಮವಾಗಿ ಹರಳು ಕಲ್ಲು ದಂಧೆ ನಡೆಯುತ್ತಿದೆ ಎಂಬ ಮಾಹಿತಿ ಮಾತ್ರ ದೊರಕಿತ್ತು. ಆದರೆ, ಬೆಟ್ಟದ ಮೇಲೆ ಎಲ್ಲಿ ಗಣಿಗಾರಿಕೆ ನಡೆಯುತ್ತಿದೆ ಎಂಬ ಬಗ್ಗೆ ಮಾಹಿತಿ ಇರಲಿಲ್ಲ. ಎರಡು, ಮೂರು ಬಾರಿ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರೂ ಅವರುಗಳಿಗೂ ಜಾಗ ಸಿಕ್ಕಿರಲಿಲ್ಲ. ಕೇವಲ ಮಣ್ಣಿನ ರಾಶಿ ಹಾಗೂ ಚೀಲದಲ್ಲಿ ತುಂಬಿಸಿಟ್ಟಿದ್ದ ಮಣ್ಣು ಮಾತ್ರ ಕಾಣಸಿಕ್ಕಿರುವದಾಗಿ ವರದಿ ಸಲ್ಲಿಸಿದ್ದರು. ಆದರೆ ನಿನ್ನೆ ಅರಣ್ಯ ಸಂಚಾರಿ ದಳದವರು ಭೇಟಿ ಮಾಡಿ ಹುಡುಕಿದಾಗ ಕೇವಲ ಅರ್ಧ ಗಂಟೆಯೊಳಗಡೆ ಹರಳು ಕಲ್ಲಿಗಾಗಿ ಹೊಂಡ ತೋಡಿದ ಜಾಗ ಪತ್ತೆಯಾಗಿದೆ. ಅದೂ ಕೂಡ ಹರಳು ಕಲ್ಲು ಕಳವಾಗದಂತೆ ಜಾಗ್ರತೆ ವಹಿಸಲು ವರದಿ ಮಾಡಿತ್ತು. ನಂತರದಲ್ಲಿ ಅರಣ್ಯ ಇಲಾಖಾ ಅಧಿಕಾರಿಗಳು, ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರಾದರೂ ಕೇವಲ ಮಣ್ಣಿನ ರಾಶಿ ಮಾತ್ರ ಕಾಣ ಸಿಕ್ಕಿರುವದಾಗಿ ಅಧಿಕಾರಿಗಳು ವರದಿ ಸಲ್ಲಿಸಿದ್ದರು. ಈ ಬಗ್ಗೆ ಈಚೆಗೆ ನಡೆದ ಉಸ್ತುವಾರಿ ಸಚಿವರ ಸಭೆಯಲ್ಲಿ ಪಶ್ಚಿಮಘಟ್ಟ
(ಮೊದಲ ಪುಟದಿಂದ) ಸಂರಕ್ಷಣೆ ಕಾರ್ಯಪಡೆ ಅಧ್ಯಕ್ಷ ಶಾಂತೆಯAಡ ರವಿ ಕುಶಾಲಪ್ಪ ಗಮನ ಸೆಳೆದ ಹಿನ್ನೆಲೆಯಲ್ಲಿ ಸಚಿವರು ಈ ಸಂಬAಧ ಸೂಕ್ತ ಕ್ರಮ ಕೈಗೊಳ್ಳುವಂತೆ ಉಪ ಸಂರಕ್ಷಣಾಧಿಕಾರಿಗಳಿಗೆ ಸೂಚಿಸಿದ್ದರು. ‘ಶಕ್ತಿ’ಯಲ್ಲಿ ಬಂದ ವರದಿ ಆಧಾರದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಸೂಚನೆ ಮೇರೆಗೆ ಅರಣ್ಯ ಸಂಚಾರಿ ದಳದವರು ಭೇಟಿ ನೀಡಿ ಪರಿಶೀಲಿಸಿದಾಗ ಜಾಗ ಪತ್ತೆಯಾಗಿದೆ.
ಅಂಗಳದಲ್ಲಿ ಹೊಂಡ..!
ಅರಣ್ಯ ಸಂಚಾರಿ ದಳದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪುತ್ತಾಮನೆ ಸೀಮ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀನಿವಾಸ್ ನಾಯಕ್, ಉಪ ವಲಯ ಅರಣ್ಯಾಧಿಕಾರಿ ಚಂದ್ರೇಶ್ ಅವರುಗಳು ನಿನ್ನೆ ಬೆಳಿಗ್ಗೆ ಸ್ಥಳಕ್ಕೆ ಭೇಟಿ ನಿಡಿದ್ದಾರೆ. ಎಲ್ಲೆಲ್ಲೂ ಹುಡುಕಾಡಿದರೂ ಮಣ್ಣು ಮಾತ್ರ ಕಾಣ ಸಿಕ್ಕಿತ್ತಾದರೂ ನಿಕ್ಷೇಪದ ಸ್ಥಳ ಮಾತ್ರ ಪತ್ತೆಯಾಗಿರಲಿಲ್ಲ. ಕೊನೆಯಲ್ಲಿ ಕ್ಯಾಂಪ್ನ ಪಕ್ಕ ಸುಳಿದಾಡುವಾಗ ಗಟ್ಟಿಯಾಗಿದ್ದ ಮಣ್ಣು ಸ್ವಲ್ಪ ಒಳಗಡೆ ಹೋದಂತಾಗಿದೆ. ಜಾಗವನ್ನು ಕೆದಕಿ ನೋಡುವಾಗ ಮುಚ್ಚಿದ್ದ ಹೊಂಡ ಪತ್ತೆಯಾಗಿದೆ..!
‘ಹೊಂಡವಿದ್ದ ಜಾಗದ ಮೇಲೆ ಕಾಲಿಟ್ಟ ಸಂದರ್ಭ ಕಾಲ್ಜಾರಿ ಹೊಂಡದೊಳಗೆ ಬಿದ್ದು ಬಿಡುತ್ತಿದ್ದೆ. ಸ್ವಲ್ಪದರಲ್ಲಿ ಬಚಾವಾದೆ’ ಎಂದು ಅಧಿಕಾರಿ ಸೀಮಾ ಭಯದಿಂದಲೇ ಹೇಳಿದರು. ಇದೇ ಸಂದರ್ಭದಲ್ಲಿ ‘ಮೂರು ಸಲ ಹುಡುಕಿದರೂ ನಿಮಗೆ ಜಾಗ ಸಿಕ್ಕಿಲ್ಲವಲ್ಲ; ಅರ್ಧ ಗಂಟೆಯಲ್ಲಿ ನಾವು ಹುಡುಕಿದ್ದೇವೆ ಹೋಗಿ ನೋಡಿ’ ಎಂದು ಧಾರಿ ಮಧ್ಯೆ ಸಿಕ್ಕ ಉಪ ವಲಯ ಅರಣ್ಯಾಧಿಕಾರಿ ಮೂರ್ತಿ ಅವರನ್ನು ತರಾಟೆಗೆ ತೆಗೆದುಕೊಂಡರು.
ಸುರAಗವಿದೆ..!
ಒಬ್ಬ ಮನುಷ್ಯ ಸರಾಗವಾಗಿ ಇಳಿಯುವಷ್ಟರ ಮಟ್ಟಿಗೆ ಅಗಲದ ಸುಮಾರು ಮೂವತ್ತರಿಂದ ನಲವತ್ತು ಅಡಿಗಳಷ್ಟು ಆಳದ ಹೊಂಡ ಕೊರೆಯಲಾಗಿದೆ. ಅಲ್ಲಿಂದ ತಳಭಾಗದಲ್ಲಿ ನಿಕ್ಷೇಪ ಇರುವ ಸ್ಥಳಕ್ಕೆ ಹೋಗಲು ಸುರಂಗ ಕೊರೆಯಲಾಗಿದೆ. ಆದರೆ, ಹೊಂಡ ಯಾರಿಗೂ ಗೊತ್ತಾಗದ ಹಾಗೆ ಅರ್ಧ ಅಡಿ ಕೆಳಗೆ ಬಡಿಗೆಗಳನ್ನು ಜೋಡಿಸಿ, ಅದರ ಮೇಲೆ ಪ್ಲಾಸ್ಟಿಕ್ ಚೀಲಗಳನ್ನು ಇರಿಸಿ ಅದರ ಮೇಲೆ ಮಣ್ಣು ಹಾಕಿ, ಅದರ ಮೇಲೆ ಕಡಿದು ತುಂಡರಿಸಿದ್ದ ಹುಲ್ಲುಗಳನ್ನು ಹಾಕಿ ಮುಚ್ಚಲಾಗಿತ್ತು. ಹೊಂಡದ ಅರ್ಧ ಭಾಗದಲ್ಲೂ ಕೂಡ ಕೆಳಗಡೆ ಇರುವ ಸುರಂಗ ಮಾರ್ಗ ಕಾಣಿಸದ ಹಾಗೆ ಇದೇ ರೀತಿ ಬಡಿಗೆಗಳನ್ನಿರಿಸಿ ಮಣ್ಣು ಹಾಕಿ ಮುಚ್ಚಲಾಗಿತ್ತು. ಹೊಂಡದೊಳಗಡೆ ಇಳಿದು ನೋಡಿದಾಗ ಇದು ಗೋಚರಿಸಿದೆ. ಅರಣ್ಯಾಧಿಕಾರಿಗಳು, ಸಿಬ್ಬಂದಿಗಳು, ಸ್ಥಳೀಯ ಕೆಲವರ ಸಹಕಾರದಿಂದಲೇ ಈ ಗಣಿಗಾರಿಕೆ ನಡೆಯುತ್ತಿರುವದು ನಿಸ್ಸಂಶಯ..!
-ಕುಡೆಕಲ್ ಸಂತೋಷ್, ಸುನಿಲ್,
ಚಿತ್ರಗಳು; ಲಕ್ಷಿö್ಮÃಶ್, ಸುಧೀರ್