ಮಡಿಕೇರಿ, ಜ. ೬: ಜಿಲ್ಲೆಯ ಪ್ರಮುಖ ಕೊಡವ ಸಮಾಜಗಳ ಪೈಕಿ ಒಂದಾಗಿರುವ ಅಮ್ಮತ್ತಿ ಕೊಡವ ಸಮಾಜದ ನೂತನ ಆಡಳಿತ ಮಂಡಳಿ ರಚನೆಯಾಗಿದೆ.

ಸಮಾಜದ ಹಾಲಿ ಅಧ್ಯಕ್ಷ ಮೂಕೋಂಡ ಬೋಸ್ ದೇವಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ೨೦೨೨-೨೦೨೫ನೇ ಸಾಲಿಗೆ ಮೂರು ವರ್ಷಕ್ಕೆ ಹೊಸ ಆಡಳಿತ ಮಂಡಳಿ ಸದಸ್ಯರನ್ನು ಅವಿರೋಧವಾಗಿ ಆಯ್ಕೆಮಾಡಲಾಯಿತು.

ತಾ. ೫ ರಂದು ನಡೆದ ನೂತನ ಆಡಳಿತ ಮಂಡಳಿ ಸಭೆಯಲ್ಲಿ ಮುಂದಿನ ಮೂರು ವರ್ಷದವರೆಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಐನಂಡ ಪ್ರಕಾಶ್ ಗಣಪತಿ, ಉಪಾಧ್ಯಕ್ಷರಾಗಿ ಕಾವಾಡಿಚಂಡ ದೀಪಕ್ ಉತ್ತಯ್ಯ, ಗೌರವ ಕಾರ್ಯದರ್ಶಿಯಾಗಿ ಪಟ್ಟಡ ಧನು ಉತ್ತಯ್ಯ, ಖಜಾಂಚಿಯಾಗಿ ಮಾಚಿಮಂಡ ಜಯ ಉತ್ತಪ್ಪ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಆಡಳಿತ ಮಂಡಳಿ ಸದಸ್ಯರಾಗಿ ಕುಟ್ಟಂಡ ಚಿಣ್ಣಪ್ಪ, ನೆಲ್ಲಚಂಡ ಭೀಮಯ್ಯ, ಪಟ್ಟಡ ದೀಪಕ್ ಕಾರ್ಯಪ್ಪ, ಚೋವಂಡ ಪ್ರಭು, ಪೂದ್ರಿಮಾಡ ನೀಲ್ ಗಣಪತಿ, ಮಚ್ಚಾರಂಡ ಇಗ್ಗುಮಣಿ ಅಚ್ಚಯ್ಯ, ಮನೆಯಪಂಡ ಧನ್ಯ ದೇವಯ್ಯ, ಮಂಡೇಪAಡ ಲಾಲಾ ಮಾಚಯ್ಯ, ಐನಂಡ ಜ್ಹೀನ ಕಿರಣ್, ಕುಟ್ಟಂಡ ರೀಟಾ ಚಿಣ್ಣಪ್ಪ, ಕೋಡಿಮಣಿಯಂಡ ಅಶ್ವಿನಿ ಜಯ ಅವರುಗಳು ನೇಮಕಗೊಂಡಿದ್ದಾರೆ.