ಮಡಿಕೇರಿ, ಜ. ೭: ಜನವರಿ ೧೯ ರವರೆಗೆ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರಲಿದ್ದು, ಈ ಸಂದರ್ಭ ಹೊಟೇಲ್ ಅಥವಾ ರೆಸಾರ್ಟ್ಗೆ ತೆರಳುವ ಪ್ರವಾಸಿಗರು, ಅಧಿಕೃತ ಬುಕಿಂಗ್ ದಾಖಲಾತಿಗಳನ್ನು ಹೊಂದಿದ್ದಲ್ಲಿ ತಮ್ಮ ವಾಹನ, ಟ್ಯಾಕ್ಸಿಗಳಲ್ಲಿ ಸಂಚರಿಸಲು ಯಾವುದೇ ನಿರ್ಬಂಧವಿರುವುದಿಲ್ಲ.
ರೆಸಾರ್ಟ್, ಹೊಟೇಲ್‌ಗಳಲ್ಲಿ ಲಭ್ಯವಿರುವ ಸೌಲಭ್ಯಗಳು ಕೇವಲ ಆತಿಥ್ಯ ಪಡೆಯುವ ಗ್ರಾಹಕರಿಗೆ ಮಾತ್ರ ನೀಡಬೇಕು. ವನ್ಯಜೀವಿ ಸಫಾರಿಗಳು ಕೋವಿಡ್ ನಿಯಮ ಪಾಲನೆಯೊಂದಿಗೆ ನಡೆಸಬಹುದಾಗಿದೆ ಎಂದು ರಾಜ್ಯ ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.