ಕಣಿವೆ, ಜ. ೭ : ಬಸವನಹಳ್ಳಿ ರಾಷ್ಟಿçÃಯ ಹೆದ್ದಾರಿಯಿಂದ ಹಾರಂಗಿ ಹಿನ್ನೀರು ಪ್ರದೇಶದ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಹಾದ್ರೆ ಹೊರೂರು ರಸ್ತೆ ಸಂಪೂರ್ಣ ಹಾಳಾಗಿದೆ.

ಸುಮಾರು ೨೦ ವರುಷಗಳ ಹಿಂದೆ ನಿರ್ಮಿಸಿದ್ದ ಡಾಂಬರು ರಸ್ತೆ ಈಗ ರಸ್ತೆಯಾಗಿ ಉಳಿದಿಲ್ಲ. ಕಲ್ಲು ಗುಂಡಿಗಳಾಗಿ ಮಾರ್ಪಟ್ಟಿರುವ ರಸ್ತೆಯಲ್ಲಿ ದ್ವಿಚಕ್ರ ಸವಾರರು, ನಾಲ್ಕು ಚಕ್ರದ ವಾಹನದ ಸವಾರರು, ಪಾದಚಾರಿಗಳು ಕೂಡ ತೆರಳದಷ್ಟು ಹಾಳಾಗಿದ್ದರೂ ಕೂಡ ಈ ರಸ್ತೆಯ ಅಭಿವೃದ್ದಿಗೆ ಆಡಳಿತ ಮುಂದಾಗಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ.

ದಟ್ಟ ಕಾನನದ ಒಳಗೆ ಇರುವ ಕಿತ್ತು ನಿಂತ ಈ ರಸ್ತೆಯಲ್ಲಿ ಹಾಡಹಗಲೇ ಕಾಡಾನೆಗಳು ಸಂಚರಿಸುವುದನ್ನು ಕಂಡು ಭಯಭೀತರಾಗಿರುವ ಇಲ್ಲಿನ ಜನರಿಗೆ ಸಂಚಾರಕ್ಕೆ ಸರಿಯಾದ ರಸ್ತೆಯೂ ಇಲ್ಲದಿರುವುದರಿಂದ ಜಿಲ್ಲಾಡಳಿತ ಕೂಡಲೇ ರಸ್ತೆಯ ಅಭಿವೃದ್ದಿಗೆ ಕ್ರಮವಹಿಸಬೇಕು. ಮತ್ತು ರಸ್ತೆಯ ಎರಡು ಕಡೆಗಳಲ್ಲಿ ರಸ್ತೆಗೆ ಬೆಳೆದು ನಿಂತಿರುವ ಕಾಡು ಗಿಡ ಗಂಟಿಗಳನ್ನು ಕಡಿದು ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಹಾದ್ರೆ ಹೊರೂರು ಗ್ರಾಮಸ್ಥರಾದ ಮೊಟ್ಟನ ಕರುಣ ಆಗ್ರಹಿಸಿದ್ದಾರೆ.