ಮಡಿಕೇರಿ, ಜ. ೭ : ಮೂರ್ನಾಡು ೩೩/೧೧ ಕೆವಿ ವಿದ್ಯುತ್ ಉಪ-ಕೇಂದ್ರದಿAದ ಹೊರ ಹೋಗುವ ನಾಪೋಕ್ಲು ಫೀಡರ್ ಹಾಗೂ ಮೂರ್ನಾಡು ಫೀಡರ್‌ಗಳಲ್ಲಿ ತುರ್ತು ನಿರ್ವಹಣೆ ಕಾರ್ಯ ನಡೆಸಬೇಕಾಗಿರುವುದರಿಂದ ತಾ. ೮ರಂದು (ಇಂದು) ಬೆಳಿಗ್ಗೆ ೧೧ ರಿಂದ ೫.೦೦ ಗಂಟೆವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು. ಕಾಂತೂರು, ಮುತ್ತಾರ್ಮುಡಿ, ಐಕೊಳ, ಬೇತ್ರಿ, ಕಿಗ್ಗಾಲು, ಮೂರ್ನಾಡು, ಎಂ. ಬಾಡಗ ಹಾಗೂ ನಾಪೋಕ್ಲು ಟೌನ್, ಬೇತು, ಹೊದವಾಡ, ಹಳೇ ತಾಲೂಕು, ಚೆರಿಯಪರಂಬು, ಕಲ್ಲುಮೊಟ್ಟೆ, ಮೋಟೇರಿ, ಕೊಳಕೇರಿ ಮತ್ತು ಸುತ್ತಮುತ್ತ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಕೋರಿದೆ.

* ಸುಳ್ಯ ೩೩/೧೧ ಕೆವಿ ವಿದ್ಯುತ್ ಉಪ-ಕೇಂದ್ರದಿAದ ಹೊರ ಹೋಗುವ ಎಫ್೧ ಕೊಲ್ಚ್ಚಾರ್ ಫೀಡರ್‌ನಲ್ಲಿ ತುರ್ತು ನಿರ್ವಹಣೆ ಕಾರ್ಯ ನಡೆಸಬೇಕಾಗಿರುವುದರಿಂದ ತಾ. ೮ರಂದು ಬೆಳಿಗ್ಗೆ ೧೦ ರಿಂದ ಅಪರಾಹ್ನ ೫ ಗಂಟೆವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು. ಕುಂದಲ್ಪಾಡಿ, ಕುಂಬಳಚೇರಿ, ಗಡಿಗುಡ್ಡೆ, ಬಂಗಾರಕೋಟೆ, ಕುಂದಾಡು, ಕೊಳಂಗಾಯ, ನಿಡ್ಯಮಲೆ ಹಾಗೂ ಸುತ್ತಮುತ್ತ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

* ಮಡಿಕೇರಿ ೬೬/೧೧ ಕೆವಿ ವಿದ್ಯುತ್ ಉಪ ಕೇಂದ್ರದಿAದ ಹೊರ ಹೋಗುವ ಎಫ್೭ ಮೇಕೇರಿ ಫೀಡರ್‌ನಲ್ಲಿ ತುರ್ತು ನಿರ್ವಹಣೆ ಕಾರ್ಯ ನಡೆಸಬೇಕಾಗಿರುವುದರಿಂದ ತಾ. ೮ರಂದು ಬೆಳಿಗ್ಗೆ ೧೦ ರಿಂದ ಅಪರಾಹ್ನ ೫ ಗಂಟೆವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು. ಕಗ್ಗೋಡ್ಲು, ಹಾಕತ್ತೂರು, ಬಿಳಿಗೇರಿ, ತೊಂಭತ್ತುಮನೆ ಹಾಗೂ ಸುತ್ತಮುತ್ತ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

* ಮಡಿಕೇರಿ ೬೬/೧೧ ಕೆವಿ ವಿದ್ಯುತ್ ಉಪ ಕೇಂದ್ರದಿAದ ಹೊರಹೋಗುವ ಎಫ್೧ ಕೋಟೆ ಮತ್ತು ಎಫ್೫ ಜಿಟಿ ರೋಡ್ ಫೀಡರ್‌ನಲ್ಲಿ ತುರ್ತು ನಿರ್ವಹಣೆ ಕಾರ್ಯ ನಡೆಸಬೇಕಿರುವುದರಿಂದ ತಾ. ೮ ರಂದು (ಇಂದು) ಬೆಳಗ್ಗೆ ೧೦ ಗಂಟೆಯಿAದ ಸಂಜೆ ೫ ಗಂಟೆಯವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು. ಆದ್ದರಿಂದ ಚೈನ್ ಗೇಟ್, ಪುಟಾಣಿನಗರ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತ, ಸಿದ್ದಾಪುರ ರಸ್ತೆ, ಜಿಟಿ.ರಸ್ತೆ, ಕೊಹಿನೂರು ರಸ್ತೆ, ಕೈಗಾರಿಕಾ ಬಡಾವಣೆ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಹಾಗೂ ಸುತ್ತಮುತ್ತ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.