ಕೊಡ್ಲಿಪೇಟೆ, ಜ. ೬: ಸಮೀಪದ ದೊಡ್ಡಕುಂದ ಗ್ರಾಮದ ಯೂತ್ಸ್ ಮತ್ತು ಹನಿ ಫ್ರೆಂಡ್ಸ್ ವತಿಯಿಂದ ನೂತನವಾಗಿ ನಿರ್ಮಿಸಲಾದ ಡಾ. ಬಿ.ಆರ್. ಅಂಬೇಡ್ಕರ್ ವಾಲಿಬಾಲ್ ಕ್ರೀಡಾಂಗಣ ಮತ್ತು ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟವನ್ನು ಜಿಲ್ಲಾ ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷ ಹಾಗೂ ತಾ.ಪಂ. ಮಾಜಿ ಸದಸ್ಯ ಪಾಲಾಕ್ಷ ಉದ್ಘಾಟಿಸಿದರು.
ಬ್ಯಾಡಗೊಟ್ಟ ಗ್ರಾ.ಪಂ. ಉಪಾಧ್ಯಕ್ಷೆ ಪಾವನ ಗಗನ್ ರೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತೂಕ ಮತ್ತು ಅಳತೆ ಇಲಾಖೆಯ ಸಹಾಯಕ ನಿಯಂತ್ರಕ ಲಿಂಗರಾಜು, ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಜೆ.ಎಲ್. ಜನಾರ್ದನ್, ಪ್ರಮುಖರಾದ ಜವರೇಗೌಡ, ಕೊಡ್ಲಿಪೇಟೆ ಗ್ರಾ.ಪಂ. ಸದಸ್ಯರಾದ ಹನೀಫ್ ಕಿರಿಕೊಡ್ಲಿ, ಲಾವಣ್ಯ ಧರ್ಮಪ್ರಕಾಶ್, ಅಶ್ವಿನಿ ಮಂಜುನಾಥ್, ಸುನಂದ, ನಗೀನ ಭಾನು, ಬ್ಯಾಡಗೊಟ್ಟ ಗ್ರಾ.ಪಂ. ಸದಸ್ಯ ರಾದ ಮಹಮ್ಮದ್ ಹನೀಫ್, ಲೀನ ಪರಮೇಶ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ನವೀನ್ ಡೆನ್ನ, ಶಿಕ್ಷಕÀ ವಿಷ್ಣುವರ್ಧನ್ ಉಪಸ್ಥಿತರಿದ್ದರು. ನಂತರ ನಡೆದ ತಾಲೂಕು ಮಟ್ಟದ ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ನವೀನ್ ಡೆನ್ನ, ಶಿಕ್ಷಕÀ ವಿಷ್ಣುವರ್ಧನ್ ಉಪಸ್ಥಿತರಿದ್ದರು. ನಂತರ ನಡೆದ ತಾಲೂಕು ಮಟ್ಟದ ಕುಶಾಲನಗರ ದ್ವಿತೀಯ, ಮಗ್ಗೆ ತಂಡ ತೃತೀಯ ಮತ್ತು ಹನಿ ಫ್ರೆಂಡ್ಸ್ ತಂಡ ಚತುರ್ಥ ಸ್ಥಾನ ಪಡೆಯಿತು. ತೀರ್ಪುಗಾರರಾಗಿ ಕೊಡ್ಲಿಪೇಟೆ ವಿದ್ಯಾ ಸಂಸ್ಥೆಯ ದೈಹಿಕ ಶಿಕ್ಷಕರಾದ ರಂಗಸ್ವಾಮಿ ಮತ್ತು ಎ.ಪಿ. ಸುನಿಲ್ ಕಾರ್ಯ ನಿರ್ವಹಿಸಿದರು.
ಸಮಾರೋಪ ಸಮಾರಂಭವನ್ನು ಕೊಡ್ಲಿಪೇಟೆ ಗ್ರಾ.ಪಂ. ಅಧ್ಯಕ್ಷ ಕೆ.ಆರ್. ಚಂದ್ರಶೇಖರ್ ವಹಿಸಿದ್ದರು. ಸದಸ್ಯರಾದ ಪ್ರಸನ್ನ ಡಿ.ಕೆ., ಶೋಬಿತ್ ಗೌಡ, ವಕೀಲ ಶ್ವೇತನ್, ದಲಿತ ಸಮಿತಿ ಅಧ್ಯಕ್ಷ ಡಿ.ಎನ್. ವಸಂತ್ ಕುಮಾರ್, ಹೆಚ್.ಎಂ. ಇಸಾಕ್, ಕೆ ಎಂ ಅಶ್ರಫ್, ಗಗನ್ ರೈ ಮಾಜಿ ಅಧ್ಯಕ್ಷ ಔರಂಗ್ಜೇಬ್ ಇತರರು ಭಾಗವಹಿಸಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು.