ಸೋಮವಾರಪೇಟೆ, ಜ. ೬: ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದ ಸೋಮವಾರಪೇಟೆ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.

ಸೋಮವಾರಪೇಟೆ ಪ್ರಖಂಡ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷರಾಗಿ ಚಂದ್ರು ಹುಲ್ಲೂರಿಕೊಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಕೆ.ಜಿ. ಸುರೇಶ್, ಉಪಾಧ್ಯಕ್ಷರಾಗಿ ನತೀಶ್ ಮಂದಣ್ಣ ಹಾಗೂ ಭಜರಂಗದಳದ ಪ್ರಖಂಡ ಸಂಚಾಲಕರಾಗಿ ಜೀವನ್ ನೇಗಳ್ಳೆ, ಗೋರಕ್ಷಾ ಪ್ರಮುಖ್ ಆಗಿ ಸಜಿ ಭರತ್ ಐಗೂರು, ತಾಲೂಕು ಪ್ರಚಾರ ಪ್ರಮುಖ್ ಆಗಿ ಪ್ರದೀಪ್ ಆಯ್ಕೆಯಾಗಿದ್ದಾರೆ.

ಮಡಿಕೇರಿ ನಗರದ ವೇದಾಂತ ಸಂಘದಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ ಹಾಗೂ ಕಾರ್ಯಾಧ್ಯಕ್ಷ ಸುರೇಶ್ ಮುತ್ತಪ್ಪ, ಭಜರಂಗದಳದ ಜಿಲ್ಲಾ ಸಂಚಾಲಕ ಅನೀಶ್ ಅವರುಗಳ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ಮಾಡಲಾಗಿದೆ.