ಕಣಿವೆ, ಜ. ೫ : ಇಲ್ಲಿಗೆ ಸಮೀಪದ ಕೂಡಿಗೆ ಕ್ರೀಡಾ ಶಾಲೆಯಲ್ಲಿ ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿರುವ ಕ್ರೀಡಾ ಪ್ರತಿಭೆ ಚಿಂತನ್ ಅವರಿಗೆ ಇಲಾಖಾ ಪ್ರೋತ್ಸಾಹ ಸಿಗುತ್ತಿಲ್ಲ ಎಂದು ಪೋಷಕರು ದೂರಿಕೊಂಡಿದ್ದಾರೆ.
ಕ್ರೀಡಾ ಶಾಲೆಯಲ್ಲಿ ಹತ್ತನೇ ತರಗತಿ ಓದುತ್ತಿರುವ ಹೆಚ್.ವಿ. ಚಿಂತನ್ ಎಂಬ ವಿದ್ಯಾರ್ಥಿ ಇತ್ತೀಚೆಗೆ ಜರುಗಿದ ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ಮೊದಲ ಸ್ಥಾನಗಳಿಸಿ ಚಿನ್ನದ ಪದಕದೊಂದಿಗೆ ರಾಷ್ಟçಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ರಾಷ್ಟçಮಟ್ಟದ ಗುಡ್ಡಗಾಡು ಓಟದ ಸ್ಪರ್ಧೆ ಇದೇ ತಿಂಗಳ ತಾ ೧೫ ರಂದು ನಾಗಾಲ್ಯಾಂಡ್ ರಾಜ್ಯದ ಕೊಹಿಮಾದಲ್ಲಿ ನಡೆಯಲಿದೆ.
ಈ ಕ್ರೀಡಾಕೂಟದಲ್ಲಿ ಭಾಗವಹಿಸಲು ತೆರಳಬೇಕಿರುವ ಚಿಂತನ್ಗೆ ಆರ್ಥಿಕ ಸಹಾಯ ಅತೀ ಅಗತ್ಯವಿದೆ. ಅಂದರೆ ಕೊರೊನಾ ಕಾರಣಕ್ಕೆ ನಾಗಲ್ಯಾಂಡ್ಗೆ ರೈಲ್ವೆ ಸಂಚಾರ ಸ್ಥಗಿತಗೊಳಿಸಿರುವುದರಿಂದ ಇರುವ ಏಕೈಕ ಆಯ್ಕೆ ವಿಮಾನ ಸಂಚಾರ. ಈ ವಿಮಾನ ಸಂಚಾರ ಸೇರಿದಂತೆ ಇತರೇ ವೆಚ್ಚ ಸೇರಿ ಈ ಪ್ರತಿಭೆಗೆ ಅತೀ ತುರ್ತಾಗಿ ರೂ. ೪೦ ಸಾವಿರಗಳ ಅನಿವಾರ್ಯತೆ ಇದೆ.
ಬಡ ರೈತ ಕುಟುಂಬದ ಪೋಷಕರು ಈ ಕ್ರೀಡಾ ಪ್ರತಿಭೆಗೆ ಹಣ ಹೊಂದಿಸಿಕೊಡಲು ಸಾಧ್ಯವಾಗುತ್ತಿಲ್ಲ.
ಆದ್ದರಿಂದ ರಾಷ್ಟçಮಟ್ಟದ ಕ್ರೀಡೆಗೆ ಆಯ್ಕೆಯಾಗಿರುವ ಗ್ರಾಮೀಣ ಪ್ರದೇಶದ ಈ ಕ್ರೀಡಾ ಪ್ರತಿಭೆಗೆ ಆರ್ಥಿಕವಾಗಿ ಸಹಾಯ ಮಾಡಲಿಚ್ಛಿಸುವವರು ಪೋಷಕರ ಸಂಪರ್ಕ ಸಂಖ್ಯೆ ೯೧೧೩೬ ೬೬೨೬೫ ಸಂಪರ್ಕಿಸಿ ನೆರವು ನೀಡಲು ಕ್ರೀಡಾ ಪ್ರತಿಭೆ ಚಿಂತನ್ ಪೋಷಕರಾದ ವಾಸುದೇವ ಹಾಗೂ ಸುಮ ವಾಸುದೇವ ಕೋರಿಕೊಂಡಿದ್ದಾರೆ.
ವರದಿ : ಕೆ.ಎಸ್.ಮೂರ್ತಿ ಕುಶಾಲನಗರ