ಚೆಯ್ಯಂಡಾಣೆ, ಜ. ೪: ಎಮ್ಮೆಮಾಡುವಿನ ತಾಜುಲ್ ಉಲಮಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕೊಡಗು ಜಿಲ್ಲೆಯ ಇತಿಹಾಸ ಪ್ರಸಿದ್ಧ ಎಮ್ಮೆಮಾಡು ಸೂಫಿ ಶಹೀದ್ (ರ ಅ) ಹಾಗೂ ಹಸ್ಸನ್ ಸಖಾಫ್ (ರ.ಅ) ದರ್ಗಾ ಸಮೀಪ ಎಸ್ಎಸ್ಎಫ್ ಹಾಗೂ ಎಸ್ವೈಎಸ್ ಯೂನಿಟ್ ವತಿಯಿಂದ ಖರೀದಿಸಿದ ಸ್ಥಳದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಸುನ್ನಿ ಸೆಂಟರ್ ಕಟ್ಟಡಕ್ಕೆÀ ಶಿಲಾನ್ಯಾಸವನ್ನು ಇಂಡಿಯನ್ ಗ್ರಾಂಡ್ ಮುಫ್ತಿ ಶೈಖುನಾ ಸುಲ್ತಾನುಲ್ ಉಲಮಾ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಕಾಂತಪುರA ನೆರವೇರಿಸಿದರು. ಈ ಸಂದರ್ಭ ಕೆ.ಸಿ.ಎಫ್ ಯುಎಇ ಅಧ್ಯಕ್ಷ ಅಬ್ದುಲ್ ಜಲೀಲ್ ನಿಝಾಮಿ, ಸುನ್ನಿ ಸೆಂಟರ್ ನಿರ್ಮಾಣ ಸಮಿತಿ ಕಾರ್ಯದರ್ಶಿ ಅಹ್ಮದ್ ಮಾಸ್ಟರ್, ಕೋಶಾಧಿಕಾರಿ ಮುಸ್ತಫಾ, ಎಮ್ಮೆಮಾಡು ಅನಾಥ ಮಂದಿರ ಅಧ್ಯಕ್ಷ ಚಕ್ಕೇರ ಹಸೈನಾರ್ ಹಾಜಿ, ಎಸ್ವೈಎಸ್ ಜಿಲ್ಲಾ ಸಮಿತಿ ಸದಸ್ಯ ಮುಜೀಬ್, ಹ್ಯಾರಿಸ್ ಮುಸ್ಲಿಯಾರ್,ಸೌಕತ್, ಹಾಗೂ ಮುಸ್ಲಿಂ ಜಮಾಅತ್ ಪದಾಧಿಕಾರಿಗಳು ಉಪಸ್ಥಿತರಿದ್ದರು.