ಸುಂಟಿಕೊಪ್ಪ, ಜ. ೪: ಕೊಡಗು ಗೌಡ ನಿವೃತ್ತ ನೌಕರರ ಸಂಘದವರು ನಿವೃತ್ತರಾದ ನಂತರ ಸಂಘವನ್ನು ಕಟ್ಟಿ ಸಮಾಜ ಸೇವೆಯಲ್ಲಿ ತೊಡಗಿಸಿ ಕೊಂಡಿರುವುದು ಇಡೀ ಸಮಾಜ ಮೆಚ್ಚುವಂತಹ ಕಾರ್ಯವಾಗಿದೆ ಎಂದು ಡಾ. ಜಗದೀಶ್ ಪಳಂಗೋಟು ಮಾಚಯ್ಯ ಹೇಳಿದರು.
ಮಡಿಕೇರಿಯ ಕೊಡಗು ಗೌಡ ಸಮಾಜದ ಸಭಾಂಗಣದಲ್ಲಿ ನಡೆದ ಕೊಡಗು ಗೌಡ ನಿವೃತ್ತ ನೌಕರರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಡಾ. ಬಿ.ಸಿ. ರಾಯ್ ಪ್ರಶಸ್ತಿ ಪಡೆದ ಡಾ. ಜಗದೀಶ್ ಅವರನ್ನು ಹಾಗೂ ಹಿರಿಯ ಸದಸ್ಯ ಕೊಲ್ಯದ ರಾಮಪ್ಪ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಜಗದೀಶ್ ಪಳಂಗೋಟು ಮಾಚಯ್ಯ ಅವರು, ಸಮಾಜದ ಒಳಿತಿಗಾಗಿ ಈ ಸಂಘವು ಮುಡಿಪಾಗಿದ್ದು, ಸಂಘ ನೂರಾರು ವರ್ಷಗಳ ಕಾಲ ಕಾರ್ಯನಿರ್ವಹಿಸಲಿ ಎಂದರು. ಮೈಸೂರು-ಮಡಿಕೇರಿ ಭಾಗಗಳಿಂದ ಬರುವ ಬಡ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುತ್ತಿದ್ದು, ತಾವು ಈ ಕಾರ್ಯವನ್ನು ಜೀವನ ಪರ್ಯಂತ ಮಾಡುವುದಾಗಿ ನುಡಿದರು. ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಕೋರನ ವಿಶ್ವನಾಥ ಮಾತನಾಡಿ, ಉಚಿತ ಕಣ್ಣಿನ ತಪಾಸಣೆ, ಶಸ್ತç ಚಿಕಿತ್ಸೆ, ಔಷಧಿ, ಕನ್ನಡಕ ವಿತರಣೆ, ಶಾಲಾ-ಕಾಲೇಜು ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮುಂತಾದ ಕಾರ್ಯಗಳನ್ನು ನಮ್ಮ ಸಂಘ ಮಾಡುತ್ತಿದ್ದು, ಸಂಘದಲ್ಲಿರುವ ಎಲ್ಲರ ಸಹಕಾರದಿಂದ ಈ ಕೆಲಸ ಮಾಡಲು ಸಾಧ್ಯವಾಗಿದೆ ಎಂದರು. ಹಿರಿಯ ಸದಸ್ಯ ಕೊಲ್ಯದ ರಾಮಪ್ಪ, ಸಂಘ ಇನ್ನೂ ಎತ್ತರಕ್ಕೆ ಬೆಳೆದು ಹೆಚ್ಚಿನ ಸೇವೆ ಮಾಡು ವಂತಾಗಲಿ ಎಂದು ಆಶಿಸಿದರು.
ಕೊಡಗು ಗೌಡ ನಿವೃತ್ತ ನೌಕರರ ಸಂಘದ ಉಪಾಧ್ಯಕ್ಷ ಕುದುಪಜೆ ಬೋಜಪ್ಪ, ಖಜಾಂಚಿ ಪೊನ್ನಚ್ಚನ ಸೋಮಣ್ಣ, ಕಾರ್ಯದರ್ಶಿ ಬೈತಡ್ಕ ಬೆಳ್ಯಪ್ಪ, ಸಹಕಾರ್ಯದರ್ಶಿ ಕುದುಪಜೆ ಎಸ್. ಶಾರದ, ನಿರ್ದೇಶಕರುಗಳಾದ ದಂಬೆಕೋಡಿ ಅನಂದ, ಪಟ್ಟಡ ದೇವಯ್ಯ, ಸೂದನ ಮೋಹಿನಿ, ತಳೂರು ಕಾಳಪ್ಪ, ಕುಯ್ಯಮುಡಿ ವಸಂತ, ಹೊಸೋಕ್ಲು ಟಿ. ಪೊನ್ನಪ್ಪ, ಕರ್ಣಯ್ಯನ ನಾಗೇಶ, ಸೂದನ ನಾಣಯ್ಯ, ಕೂಡಕಂಡಿ ಉಮಾದೇವಿ ಪ್ರ್ರಾರ್ಥಿಸಿದರು. ಉಪಾಧ್ಯಕ್ಷ ಕುದುಪಜೆ ಬೋಜಪ್ಪ ಸ್ವಾಗತಿಸಿ, ಕಾರ್ಯದರ್ಶಿ ಬೈತಡ್ಕ ಬೆಳ್ಯಪ್ಪ ವಂದಿಸಿದರು.