ಗುಡ್ಡೆಹೊಸೂರು, ಜ. ೪: ಕೇರಳದ ಕಣ್ಣಾನೂರು ಕಾಳೆಘಾಟ್ ದೇವಾಲಯದಲ್ಲಿ ಕಾಳೆಘಾಟ್ ಕಳಿಯಾಟ ಮಹೋತ್ಸವ ತಾ. ೧೦ ರಿಂದ ೧೨ ರತನಕ ಜರುಗಲಿದ್ದು, ತಾ. ೧೦ ರಂದು ಮಹಾಗೂರುತಿ ಪೂಜೆ, ತಾ. ೧೧ ರಂದು ಬೆಳಿಗ್ಗೆ ಕರಿಕುಟ್ಟಿಚ್ಚಾತನ್ ತೆರೆ ಹಾಗೂ ತಾ. ೧೨ ರಂದು ಸಮಾರೋಪ ಪೂಜೆಯೊಂದಿಗೆ ಉತ್ಸವ ಮುಕ್ತಾಯಗೊಳ್ಳಲಿದೆ ಎಂದು ದೇವಾಲಯದ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ. ಪೂಜಾ ಕಾರ್ಯದಲ್ಲಿ ಕೊಡಗಿನಿಂದ ಭಕ್ತಾದಿಗಳು ಭಾಗವಹಿಸಲಿದ್ದಾರೆ. ಭಕ್ತಾದಿಗಳು ಕೋವಿಡ್ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕಾಗಿ ಕೋರಲಾಗಿದೆ.