ಕೋವರ್ ಕೊಲ್ಲಿ ಇಂದ್ರೇಶ್

ನವದೆಹಲಿ, ಜ. ೫ : ಸೋಮವಾರ ಮಂಗಳೂರಿನ ಉಳ್ಳಾಲದಲ್ಲಿ ಎನ್‌ಐಎ ಅಧಿಕಾರಿಗಳಿಂದ ಬಂಧಿತಳಾಗಿರುವ ಕೊಡಗು ಮೂಲದ ಮಹಿಳೆ ದೀಪ್ತಿ ಮಾರ್ಲ ಆಲಿಯಾಸ್ ಮರಿಯಂ (೩೬) ಪ್ರಕರಣಕ್ಕೆ ಸಂಬAಧಿಸಿದAತೆ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಪ್ರಸ್ತುತ ಎನ್‌ಐಎ ವಶದಲ್ಲಿರುವ ದೀಪ್ತಿ ಮಾರ್ಲ ಪ್ರಾಥಮಿಕ ತನಿಖೆಯಲ್ಲಿ ಮಹತ್ವದ ಮಾಹಿತಿಯನ್ನು ಹೊರ ಹಾಕಿದ್ದಾಳೆ ಎಂದು ಬುಧವಾರ ಎನ್‌ಐಎ ಮೂಲಗಳು ಖಚಿತ ಪಡಿಸಿವೆ. ಈಕೆಯು ಭಯೋತ್ಪಾದಕ ಸಂಘಟನೆ ಐಸಿಸ್‌ನ ಸತತ ಸಂಪರ್ಕದಲ್ಲಿದ್ದುದು ಮತ್ತು ಅದಕ್ಕೆ ಭಾರತದಲ್ಲಿ ಯುವಕರ ನೇಮಕಾತಿ ಮಾಡಿಕೊಳ್ಳಲು ಸಕ್ರಿಯವಾಗಿ ತೊಡಗಿದ್ದುದು ದೃಢಪಟ್ಟಿದೆ.

ಐಸಿಸ್‌ಗೆ ಭಾರತದಿಂದ ಯುವಕರ ನೇಮಕಾತಿ ಆಗುತ್ತಿದೆ ಎಂದು ೨೦೨೦ ರ ಮಾರ್ಚ್ನಲ್ಲಿ ನವದೆಹಲಿಯಲ್ಲಿ ಬಂಧಿಸಲ್ಪಟ್ಟ ಶಂಕಿತ ಉಗ್ರರಿಂದ ಬಹಿರಂಗವಾಗಿತ್ತು. ಈ ಕುರಿತು ಮೊಕದ್ದಮೆ ದಾಖಲು ಮಾಡಿ ಕೊಂಡಿದ್ದ ಎನ್‌ಐಎ ತೀವ್ರ ತನಿಖೆ ನಡೆಸುತಿದ್ದು ಮರಿಯಂಳ ಬಂಧನ ದಿಂದಾಗಿ ಈ ಪ್ರಕರಣದಲ್ಲಿ ಒಟ್ಟು ಬಂಧಿತರ ಸಂಖ್ಯೆ ೧೧ಕ್ಕೆ ಏರಿಕೆ ಆಗಿದೆ. ಈ ಪ್ರಕರಣದಲ್ಲಿ ಈಕೆಯ ಪತಿ ಅನಾಸ್ ಅಬ್ದುಲ್ ರಹಿಮಾನ್ ಮತ್ತು ಆತನ ಸಹೋದರ ಅಮ್ಮಾರ್ ಕೂಡ ಬಂಧನದಲ್ಲಿದ್ದಾರೆ. ಈ ಪ್ರಕರಣದಲ್ಲಿ ಮೊದಲಿಗೆ ಇಬ್ಬರು ಶಂಕಿತರನ್ನು ಬಂಧಿಸಿದ್ದು ನಂತರ ಮೊಹಮ್ಮದ್ ಅಮೀನ್ ಅಲಿಯಾಸ್ ಅಬು ಯಾಹ್ಯಾ ಮತ್ತು ಕೇರಳದ ಇಬ್ಬರು ಸಹಚರರಾದ ಡಾ. ರಹೀಸ್ ರಶೀದ್ ಮತ್ತು ಮುಸ್ಹಬ್ ಅನ್ವರ್ ಅವರನ್ನು ಬಂಧಿಸಿತ್ತು.

ಕಳೆದ ಆಗಸ್ಟ್ ನಾಲ್ಕರಂದು ಸಂಸ್ಥೆಯು ಅಮ್ಮಾರ್ ಸೇರಿದಂತೆ ಇನ್ನೂ ನಾಲ್ವರನ್ನು ಬಂಧಿಸಿತು. ಅದೇ ತಿಂಗಳು ಪಶ್ಚಿಮ ಏಷ್ಯಾದಲ್ಲಿ ಇಸ್ಲಾಮಿಕ್ ಸ್ಟೇಟ್‌ಗೆ ಸೇರಲು ಹೊರಟಿದ್ದ ಕೇರಳದ ಇಬ್ಬರು ಮಹಿಳೆಯರನ್ನು ಬಂಧಿಸಿತು. ಅದೇ ದಿನ ಜಮ್ಮು ಕಾಶ್ಮೀರ, ಬೆಂಗಳೂರು ಮತ್ತು ಮಂಗಳೂರಿನಲ್ಲಿ ಒಟ್ಟು ಐದು ಕಡೆ ಧಾಳಿ ನಡೆಸಿ ಶಂಕಿತರನ್ನು ಬಂಧಿಸಲಾಗಿತ್ತು.

ಎನ್‌ಐಎ ತನಿಖೆಯಲ್ಲಿ ಸಿರಿಯಾ ಮತ್ತು ಇರಾಕ್‌ನಲ್ಲಿ ಐಸಿಸ್ ಕ್ಯಾಲಿಫೇಟ್ ಅವನತಿಯ ನಂತರ, ದೀಪ್ತಿ ಮಾರ್ಲಾ

(ಮೊದಲ ಪುಟದಿಂದ) ಮತ್ತು ಆಕೆಯ ಸಹಚರ ಮೊಹಮ್ಮದ್ ಅಮೀನ್ ೨೦೨೦ ರ ಜನವರಿ ಮತ್ತು ಮಾರ್ಚ್ ತಿಂಗಳಿನಲ್ಲಿ ಹಿಜ್ರಾ (ಧಾರ್ಮಿಕ ವಲಸೆ) ಮತ್ತು ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿಕೊಂಡು ಮತ್ತು ಐಸಿಸ್‌ನ ಚಟುವಟಿಕೆಗಳನ್ನು ಬೆಂಬಲಿಸುವುದಕ್ಕಾಗಿ ಕಾಶ್ಮೀರಕ್ಕೆ ಭೇಟಿ ನೀಡಿದ್ದರು. ಮೊಹಮ್ಮದ್ ಅಮೀನ್ ಜೊತೆಗೆ ದೀಪ್ತಿ ಮಾರ್ಲಾ ಐಸಿಸ್‌ನ ಪಿತೂರಿಯ ಕಿಂಗ್‌ಪಿನ್ ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ಎನ್‌ಐಎ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. ಬಂಧಿತರ ೧೧ ಜನರ ಮೇಲೂ ಐಸಿಸ್ ಸಂಘಟನೆಗೆ ನಿಧಿ ಸಂಗ್ರಹಿಸುವ ಯುವಕರನ್ನು ಮೂಲಭೂತ ವಾದಿಗಳನ್ನಾಗಲು ಪ್ರಚೋದಿಸುವ ಮತ್ತು ಐಸಿಸ್ ಸಂಘಟನೆಗೆ ಸೇರಿಸುವ ಆರೋಪಗಳನ್ನು ಹೊರಿಸಲಾಗಿದೆ.

ಕಿಂಗ್ ಪಿನ್ ದೀಪ್ತಿ ಮಾರ್ಲ

ಕೊಡಗಿನ ಗುಡ್ಡೆ ಹೊಸೂರು ಮೂಲದ ದೀಪ್ತಿ ಮಾರ್ಲ ಮತಾಂತರ ಹೊಂದಿ ಅನಾಸ್‌ನ್ನು ಮದುವೆ ಆದ ನಂತರ ಮೂಲಭೂತವಾದಿಯಾಗಿ ಬದಲಾಗಿದ್ದಳು. ಅಷ್ಟೇ ಅಲ್ಲ ವಿವಿಧ ಈಕೆ ವಿವಿಧ ಹೆಸರುಗಳಲ್ಲಿ ೧೫ಕ್ಕೂ ಹೆಚ್ಚು ನಕಲಿ ಸೋಷಿಯಲ್ ಮೀಡಿಯಾ ಅಕೌಂಟ್‌ಗಳನ್ನು ಹೊಂದಿದ್ದು ಯುವಕರ ಜೊತೆ ಪ್ರೀತಿ, ಲೈಂಗಿಕ ಚಾಟ್ ಕೂಡ ಮಾಡುತ್ತಿದ್ದಳೆಂದು ತನಿಖೆಯಲ್ಲಿ ಬಾಯಿ ಬಿಟ್ಟಿದ್ದಾಳೆ ಎಂದು ತಿಳಿದು ಬಂದಿದೆ. ಈಕೆಯು ಹೀಗೆ ಯುವಕರನ್ನು ಹನಿಟ್ರ‍್ಯಾಪ್ ಮಾಡಿ ಇಸ್ಲಾಂಗೆ ಮತಾಂತರ ಮಾಡುತ್ತಿದ್ದಳು. ನಂತರ ಅವರನ್ನು ಐಸಿಸ್‌ಗೆ ಸೇರಲು ಕಳುಹಿಸುತ್ತಿದ್ದಳು. ಈಕೆಯು ಕ್ರೋನಿಕಲ್ ಫೌಂಡೇಶನ್ ಎಂಬ ಇನ್ಸಾ÷್ಟಗ್ರಾಂ ಪೇಜ್ ಮಾಡಿಕೊಂಡು ಯುವಕರನ್ನು ಮತಾಂತರಕ್ಕೆ ಪ್ರೇರೇಪಿಸುತ್ತಿದ್ದಳು. ಬಳಿಕ ಮತಾಂತರಗೊAಡ ಯುವಕರನ್ನ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಗೆ ಸೇರಿಸುತ್ತಿದ್ದಳು ಎಂದು ಎನ್‌ಐಎ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ.

ಕಳೆದ ವರ್ಷ ಕಾಶ್ಮೀರಕ್ಕೆ ಹೋಗಿದ್ದಾಗ ಯುವಕರನ್ನು ಐಸಿಸ್‌ಗೆ ಸೆಳೆಯುವ ಕೆಲಸ ಮಾಡಿದ್ದಳು. ಅಲ್ಲದೆ ಕೆಲ ತಿಂಗಳುಗಳ ಹಿಂದೆ ಎನ್‌ಐಎನಿಂದ ಬಂಧಿತನಾದ ಬೆಂಗಳೂರಿನ ಮಾದೇಶ್ ಪೆರುಮಾಳ್ ಎಂಬಾತನನ್ನು ಈಕೆಯೇ ಹನಿಟ್ರಾö್ಯಪ್ ಮಾಡಿ ಐಸಿಸ್‌ಗೆ ಸೇರಿಸಿದ್ದಳು ಎಂಬ ಸ್ಫೋಟಕ ವಿಚಾರವೂ ತನಿಖೆ ವೇಳೆ ಹೊರಬಿದ್ದಿದೆ. ಯುವಕರನ್ನು ಮತಾಂತರ ಮಾಡಲು ಈಕೆ ಎಷ್ಟು ಬೇಕಾದರೂ ಹಣ ಖರ್ಚು ಮಾಡುತ್ತಿದ್ದಳು ಎನ್ನುವುದು ವಿಚಾರಣೆ ವೇಳೆ ಗೊತ್ತಾಗಿದೆ. ಆರೋಪಿಗಳೆಲ್ಲರೂ ಐಸಿಸ್ ಸಕ್ರಿಯ ಬೆಂಬಲಿಗರಾಗಿರುವುದು ತಿಳಿದು ಬಂದಿದ್ದು ತನಿಖೆ ಮುಂದುವರೆದಿದೆ.