ಮಡಿಕೇರಿ, ಜ. ೫: ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ಸಿ.ಡಿ.ಎಸ್. ಜನರಲ್ ಬಿಪಿನ್ ರಾವತ್ ಹಾಗೂ ಇತರ ಸೈನಿಕರಿಗೆ ಕೊಡಗು ಜಿಲ್ಲಾ ಯುವ ಒಕ್ಕೂಟ ಹಾಗೂ ನೆಹರು ಯುವ ಕೇಂದ್ರ ಮಡಿಕೇರಿ ವತಿಯಿಂದ ಶ್ರದ್ಧಾಂಜಲಿ ಅರ್ಪಿಸಲಾಯಿತು.
ನೆಹರು ಯುವ ಕೇಂದ್ರ ಜಿಲ್ಲಾ ಕಚೇರಿಯಲ್ಲಿ ಯುವಜನ ಸಮನ್ವಯಾಧಿಕಾರಿ ಉಲ್ಲಾಸ್ ಕೆ.ಟಿ.ಕೆ. ಹಾಗೂ ಒಕ್ಕೂಟದ ಜಿಲ್ಲಾಧ್ಯಕ್ಷ ಪಿ.ಪಿ. ಸುಕುಮಾರ್, ಬಿಪಿನ್ ರಾವತ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಮಾಡುವುದರ ಮೂಲಕ ಶಾಂತಿಕೋರಿ ೧ ನಿಮಿಷ ಮೌನಾಚರಿಸಲಾಯಿತು.
ಈ ಸಂದರ್ಭ ನೆಹರು ಯುವ ಕೇಂದ್ರದ ಲೆಕ್ಕಾಧಿಕಾರಿ ಚೆನ್ನಗಿರಿಗೌಡ, ಕಚೇರಿ ಸಹಾಯಕಿ ದೀಪ್ತಿ, ಜಿಲ್ಲಾ ಕಾರ್ಯದರ್ಶಿ ಕೊಕ್ಕಲೆ ಗಣೇಶ್, ಮಡಿಕೇರಿ ತಾಲೂಕು ಯುವ ಒಕ್ಕೂಟದ ಅಧ್ಯಕ್ಷ ಡಿ. ನವೀನ್ ದೇರಳ, ಮಾಜಿ ಅಧ್ಯಕ್ಷ ಕೂಡಂಡ ಸಾಬ ಸುಬ್ರಮಣಿ, ಆರ್ಜಿ-ಕಲ್ಲುಬಾಣೆ ಶ್ರೀ ಸುಬ್ರಹ್ಮಣ್ಯ ಯುವತಿ ಮಂಡಳಿ ಅಧ್ಯಕ್ಷೆ ಬಡಕಡ ರೇಷ್ಮಾ, ನೆಹರು ಯುವ ಕೇಂದ್ರದ ರಾಷ್ಟಿçÃಯ ಸೇವಾ ಕಾರ್ಯಕರ್ತೆಯರು ಹಾಜರಿದ್ದರು.
- ಸಾಬ ಸುಬ್ರಮಣಿ