ಮಡಿಕೇರಿ, ಜ. ೫: ಅರಣ್ಯದಂಚಿನಲ್ಲಿ ಮೇಯಲು ತೆರಳಿದ್ದ ಹಸುಗಳ ಜತೆ ಪುಟ್ಟ ಜಿಂಕೆಮರಿಯೊAದು ಹೆಜ್ಜೆ ಹಾಕುತ್ತಾ ಹಸುಗಳ ಜತೆ ಕಾಡಿನಿಂದ ಕೊಟ್ಟಿಗೆಯತ್ತ ಬಂದಿದ್ದ ಪ್ರಸಂಗವೊAದು ವರದಿಯಾಗಿದೆ.

ಶ್ರೀಮಂಗಲ ಸನಿಹದ ಇರ್ಪು ಜಲಪಾತ ಬಳಿಯ ಮುರಳಿ ಎಂಬವರಿಗೆ ಸೇರಿದ ಹಸುಗಳೊಂದಿಗೆ ಕಾಡಿನ ಈ ಪುಟ್ಟ ಅತಿಥಿ ಆಗಮಿಸಿತ್ತು. ಇದನ್ನು ಗಮನಿಸಿದ ಮುರಳಿ ಅವರ ಪುತ್ರಿ ಸಂಗೀತ ಈ ಬಗ್ಗೆ ಕಾಳಜಿ ವಹಿಸಿದ್ದು, ಮರಿಯನ್ನು ರಕ್ಷಿಸಿದ್ದಾರೆ. ಅರಣ್ಯ ಇಲಾಖಾ ಸಿಬ್ಬಂದಿಗಳು ಬಳಿಕ ಇದನ್ನು ಮರಳಿ ಕಾಡಿಗೆ ಸೇರಿಸಿದ್ದಾರೆ.