ಮಡಿಕೇರಿ, ಜ. ೪: ನಗರದ ವಿಂಗ್ಸ್ ಆಫ್ ಪ್ಯಾಶನ್ ಡ್ಯಾನ್ಸ್ ಅಕಾಡೆಮಿಯಲ್ಲಿ ಪ್ರತಿಭಾ ಪ್ರದರ್ಶನ ಹಾಗೂ ನಟ ದಿ. ಪುನಿತ್ ರಾಜಕುಮಾರ್‌ಗೆ ನಮನ ಕಾರ್ಯಕ್ರಮ ನಡೆಯಿತು.
ಸೂಪರ್ ಅಮ್ಮ ಫ್ಯಾಶನ್ ಶೋ ವಿಭಾಗದಲ್ಲಿ ರಮ್ಯಾ ಪ್ರಥಮ, ಚೇತನ ದ್ವಿತೀಯ, ಹೊಸೋಕ್ಲು ಸರಿತಾ ತೃತೀಯ ಸ್ಥಾನವ ಪಡೆದುಕೊಂಡರು. ಬೆಸ್ಟ್ ಸೂಪರ್ ಮಾಮ್ ಅಂಡ್ ಕಿಡ್ಸ್ ಸ್ಪರ್ಧೆಯಲ್ಲಿ ಮೇಘಾ ತಂಡ ಪ್ರಥಮ, ಅಕ್ಷತಾ ತಂಡ ದ್ವಿತೀಯ ಹಾಗೂ ವಂಶಿಕಾ ತಂಡ ತೃತೀಯ ಬಹುಮಾನ ಗಳಿಸಿದರು. ಕೋವಿಡ್ ಸಂದರ್ಭ ಕೊರೊನಾ ವಾರಿಯರ್ಸ್ಗಳಾಗಿ ಕಾರ್ಯನಿರ್ವಹಿಸಿದ ಕೆ.ಬಿ. ಯಶಸ್ವಿ ಹಾಗೂ ಕವಿತಾ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಅಕಾಡೆಮಿಯ ಸ್ಥಾಪಕಾಧ್ಯಕ್ಷರು ಹಾಗೂ ನೃತ್ಯ ಸಂಯೋಜಕಿ ಪ್ರೀತ ಕೃಷ್ಣ, ಶಿಕ್ಷಕರಾದ ಸೌಮ್ಯ ಶೆಟ್ಟಿ, ಮಂಜುಳಾ, ಉದ್ಯಮಿ ಮಹಾಲಕ್ಷಿ÷್ಮ ಮತ್ತಿತರರು ಹಾಜರಿದ್ದರು. ಅಕಾಡೆಮಿಯ ವಿದ್ಯಾರ್ಥಿಗಳಾದ ಧೃತಿ ಪೂಜಾರಿ ಪ್ರಾರ್ಥಿಸಿದರು. ಅಕ್ಷತಾ ನಿರೂಪಿಸಿ, ಮೇಘಾ ವಂದಿಸಿದರು.