ಕೂಡಿಗೆ, ಜ. ೪: ಕರ್ನಾಟಕ ರಾಜ್ಯ ಗಂಗಾ ಕಲ್ಯಾಣ ಇಲಾಖೆಯ ರಾಜ್ಯ ವಿಶೇಷ ಸದನ ಸಮಿತಿ ಅಧ್ಯಕ್ಷರು ಸೇರಿದಂತೆ ತಂಡದ ಸದಸ್ಯರು ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೋಹನ ಅವರ ಜಮೀನಿನಲ್ಲಿ ಇಲಾಖೆಯ ವತಿಯಿಂದ ಕೊರೆಸಲಾದ ಕೊಳವೆ ಬಾವಿಯ ಸ್ಥಳಕ್ಕೆ ತೆರೆಳಿ ಪರಿಶೀಲಿಸಿದರು.
ರಾಜ್ಯ ವಿಶೇಷ ಸದನ ಸಮಿತಿಯ ಅಧ್ಯಕ್ಷ ಡಾ. ವೈ.ಎ. ನಾರಾಯಣ ಸ್ವಾಮಿ, ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ಬಸವರಾಜ್ ಇಟ್ಟಗಿ, ಗೋಪಾಲ್ ಸ್ವಾಮಿ, ಪ್ರತಾಪ್ ಸಿಂಹ, ನಾಯಕ್ ತಂಡ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಆಗಮಿಸಿ ಪರಿಶೀಲಿಸಿದರು.
ಈ ಸಂದರ್ಭ ವಿವಿಧ ಇಲಾಖೆಯ ರಾಜ್ಯಮಟ್ಟದ ಅಧಿಕಾರಿಗಳು ಮತ್ತು ಜಿಲ್ಲಾಮಟ್ಟದ ಅಧಿಕಾರಿ ವರ್ಗದವರು ಹಾಜರಿದ್ದರು.