ಗೋಣಿಕೊಪ್ಪಲು, ಜ.೪: ಕುಟ್ಟ ಗ್ರಾಮ ಪಂಚಾಯಿತಿಯಲ್ಲಿ ಬಿಲ್ ಕಲೆಕ್ಟರ್ ಮಹೇಶ್ ಹಾಗೂ ಅಟೆಂಡರ್ ರಾಜನ್ ಸಾರ್ವಜನಿಕರಿಂದ ಸಂಗ್ರಹಿಸುವ ತೆರಿಗೆ ಹಣವನ್ನು ಪಂಚಾಯಿತಿಗೆ ಸಲ್ಲಿಕೆ ಮಾಡದೆ ಲಕ್ಷಾಂತರ ಹಣವನ್ನು ತಮ್ಮ ಸ್ವಂತಕ್ಕೆ ಬಳಸಿಕೊಂಡು ಪಂಚಾಯಿತಿಗೆ ಮೋಸ ಮಾಡಿದ ಪ್ರಕರಣಕ್ಕೆ ಸಂಬAಧಿಸಿದAತೆ ಬಿಜೆಪಿ ಪ್ರತಿಭಟನೆ ನಡೆಸಿ ಸೂಕ್ತ ಕ್ರಮಕ್ಕೆ ಒತ್ತಾಯಿಸಿತು.
ಕುಟ್ಟ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ್ ತೀತಿರ ಮಂಜುನಾಥ್, (ರಾಜ) ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧÀ್ಯಕ್ಷೆ ಚೋಡುಮಾಡ ಶರೀನ್ ಸುಬ್ಬಯ್ಯ ಮುಂದಾಳತ್ವದಲ್ಲಿ ಪಂಚಾಯಿತಿ ಆವರಣದಲ್ಲಿ ಜಮಾವಣೆಗೊಂಡ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಪಂಚಾಯಿತಿ ಸದಸ್ಯರು ಹಣ ದುರುಪಯೋಗದ ಹಿಂದೆ ಕಾಣದ ಶಕ್ತಿ ಕೆಲಸ ಮಾಡುತ್ತಿದೆ. ಲಕ್ಷಾಂತರ ಹಣ ದುರುಪಯೋಗ ಸಾಬೀತು ಗೊಂಡಿದ್ದರೂ ಕೆಲವರು ಆರೋಪಿಗಳ ಸಹಕಾರಕ್ಕೆ ನಿಲ್ಲುತ್ತಿದ್ದಾರೆ ಎಂದು ಮಾಜಿ ಜಿ.ಪಂ.ಅಧ್ಯಕ್ಷೆ ಚೋಡುಮಾಡ ಶರೀನ್ ಸುಬ್ಬಯ್ಯ ಗಂಭೀರವಾಗಿ ಆರೋಪಿಸಿದರು.
ಅಗತ್ಯ ದಾಖಲಾತಿಯನ್ನು ಸಂಗ್ರಹಿಸಲು ಗ್ರಾ.ಪಂ.ಉಪಾಧ್ಯಕೆÀ್ಷ ಪಿ.ಎಂ.ದಿವ್ಯಾರವರ ಪ್ರಯತ್ನದಿಂದ ಸಾಧ್ಯವಾಯಿತು ಎಂದು ಗ್ರಾ.ಪಂ. ಸದಸ್ಯ ತೀರ್ಥ ಮಂಜುನಾಥ್ ಹೇಳಿದರು.
ಕಳೆದ ಹತ್ತು ವರ್ಷಗಳ ತೆರಿಗೆ ಹಣ ದುರುಪಯೋಗವಾಗಿರುವ ಬಗ್ಗೆ ಸಂಶಯವಿದೆ. ಅಧಿಕಾರಿಗಳು ಸಮಗ್ರ ತನಿಖೆ ನಡೆಸಿದರೆ ಸತ್ಯಾಂಶ ಹೊರ ಬರಲಿದೆ. ಯಾವುದೇ ಕಾರಣಕ್ಕೂ ಅಧಿಕಾರಿಗಳು ಯಾವುದೇ ಒತ್ತಡಕ್ಕೆ ಮಣಿಯದೇ ತನಿಖೆಯನ್ನು ಪಾರದರ್ಶಕವಾಗಿ ನಡೆಸುವಂತೆ ಒತ್ತಾಯಿಸಿದರು.
ಶಕ್ತಿ ಕೇಂದ್ರ ಪ್ರಮುಖ್ ತೀತಿರ ಮಂಜುನಾಥ್ ಮಾತನಾಡಿ, ಹಣ ದುರುಪಯೋಗ ಬಗ್ಗೆ ಕಳೆದ ಹಲವು ತಿಂಗಳ ಹಿಂದೆ ಹಲವು ಅಧಿಕಾರಿಗಳಿಗೆ ಲಿಖಿತ ಪತ್ರ ಬರೆದು ಕ್ರಮ ಕೈಗೊಳ್ಳಲು ತಿಳಿಸಲಾಗಿತ್ತು. ಆದರೆ ಯಾವುದೇ ಅಧಿಕಾರಿಗಳು ಈ ವಿಚಾರದಲ್ಲಿ ಗಮನಹರಿಸಲಿಲ್ಲ ಎಂದು ದೂರಿದರು.
ಪ್ರತಿಭಟನಾ ವೇಳೆ ಪಕ್ಷದ ಹಿರಿಯ ಮುಖಂಡರಾದ ಹೊಟ್ಟೆಂಗಡ ರಮೇಶ್ ಶಕ್ತಿ ಕೇಂದ್ರ ಸಹ ಪ್ರಮುಖ್ ಕಾಕೇರ ದಿನೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಟಿ.ಎಂ.ಗಣಪತಿ, ಉಪಾಧ್ಯಕೆÀ್ಷ ಪಿ.ಎಂ.ದಿವ್ಯ, ಸದಸ್ಯರಾದ ಎಂ.ಕೆ.ಶಾAತಿ, ಮಣಿ, ಜೆ.ಪಿ.ಜನಾರ್ದನ, ಪ್ರೇಮ, ಕರ್ಪಯ್ಯ, ಪಕ್ಷದ ಪ್ರಮುಖರಾದ ಪಿ.ಆರ್. ಮನೋಜ್, ಪೆಮ್ಮಣಮಾಡ ನವೀನ್, ಮುಂತಾದವರು ಹಾಜರಿದ್ದರು.
- ಹೆಚ್.ಕೆ.ಜಗದೀಶ್