ವೀರಾಜಪೇಟೆ, ಜ. ೪: ಜೀವನದಲ್ಲಿ ಜಿಗುಪ್ಸೆಗೊಂಡು ಗೃಹಿಣಿಯೋರ್ವರು ನೇಣಿಗೆ ಶರಣಾದ ಘಟನೆ ನಗರದಲ್ಲಿ ನಡೆದಿದೆ.

ವೀರಾಜಪೇಟೆ ನಗರದ ಪಂಜರ್‌ಪೇಟೆ ನಿವಾಸಿ ಎಂ.ವಿ. ವಿಜಯನ್ ಅವರ ಪತ್ನಿ ವಿಜಯ ಬಾಯಿ (೬೦) ಆತ್ಮಹತ್ಯೆ ಮಾಡಿಕೊಂಡ ಮಹಿಳೆ.

ಮೃತ ಮಹಿಳೆ ತನ್ನ ಪತಿಯೊಂದಿಗೆ ಪಂಜರ್‌ಪೇಟೆಯಲ್ಲಿ ನೆಲೆಸಿದ್ದು, ಈರ್ವರು ಪುತ್ರಿಯರು ಮದುವೆಯಾಗಿ ಬೇರೆ ಊರಿನಲ್ಲಿ ನೆಲೆಸಿದ್ದಾರೆ. ಕಳೆದು ಕೆಲವು ವರ್ಷದಿಂದ ವಿಜಯ ಬಾಯಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ತಾ. ೩ ರಂದು ಪತಿ ಕೆಲಸಕ್ಕೆ ತೆರಳಿದ್ದ ಸಂದರ್ಭ ಸೀರೆಯಿಂದ ಮೇಲ್ಛಾವಣಿಯಲ್ಲಿ ಅಳವಡಿಸಲಾಗಿದ್ದ ಗಾಳಿಯಂತ್ರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂಜೆ ಪತಿ ವಿಜಯನ್ ಮನೆಗೆ ಆಗಮಿಸಿದಾಗ ಘಟನೆ ಬೆಳಕಿಗೆ ಬಂದಿದೆ.

ಮೃತರ ಪತಿ ನೀಡಿದ ದೂರಿನ ಮೇರೆಗೆ ವೀರಾಜಪೇಟೆ ನಗರ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ. - ಕಿಶೋರ್ ಕುಮಾರ್ ಶೆಟ್ಟಿ