ಆಗ ಕುಪ್ಪಂಡ ನಂಜಪ್ಪ ಅವರು ಸೇನೆಯಲ್ಲಿ ಮೇಜರ್ ಹುದ್ದೆಯಲ್ಲಿದ್ದರು. ಆ ಸಂದರ್ಭ ೧೯೭೧ರ ಭಾರತ ಪಾಕ್ ಯುದ್ಧದಲ್ಲಿ ಕೊಡಗಿನ ಮೇಜರ್ ಪ್ರಮುಖ ಪಾತ್ರವಹಿಸಿದ್ದು ಅವರು ಆಗಿನ ತನ್ನ ಅನುಭವವನ್ನು ಶಕ್ತಿಯೊಂದಿಗೆ ಹೀಗೆ ಹಂಚಿಕೊAಡರು.
‘‘ನಾನು ಸೇನೆ ಸೇರಿ ಆಗ ಕೇವಲ ನಾಲ್ಕೂವರೆ ವರ್ಷ ಕಳೆದಿತ್ತು. ವಯಸ್ಸು ಸುಮಾರು ೨೩, ೨೪. ಆ ಸಂದರ್ಭ ಅಸ್ಸಾಂ ಮತ್ತು ತ್ರಿಪುರಗಳಲ್ಲಿ ಆಗಿನ ಪೂರ್ವ ಪಾಕಿಸ್ತಾನದ ಬಳಿಯಲ್ಲಿಯೇ ೬ ತಿಂಗಳು ಕಾಲ ಪೂರ್ವ ತರಬೇತಿ ನಡೆಸಲಾಯಿತು. ೧೯೭೧ರ ಡಿಸೆಂಬರ್ ೧ ರಂದು ನಾನು ಸೇವೆ ಸಲ್ಲಿಸುತ್ತಿದ್ದ ಘಟಕದಲ್ಲಿ ಕಾರ್ಯನಿರ್ವಹಿಸಲು ೫೦೦ ಕಿ. ಮೀ ಅಂತರ ತಲುಪಬೇಕಾಗಿತ್ತು. ಆಗ ನನ್ನ ಸಹವರ್ತಿ ಅಗರ್‌ತಾಲ (ತ್ರಿಪುರದ) ಮೇಜರ್ ಆಕ್ಸಿಸ್ ಅವರೊಡಗೂಡಿ ಮುರಿದ ಸೇತುವೆಯೊಂದರ ಬಳಿ ತೆರಳಿ ನಮ್ಮ ಯುದ್ಧ ಕಾರ್ಯಾಚರಣೆ ಪ್ರಾರಂಭಿಸಿದೆವು. ಈಗ ಬಾಂಗ್ಲಾ ದೇಶದಲ್ಲಿರುವ ಆಗ ಪೂರ್ವ ಪಾಕಿಸ್ತಾನದಲ್ಲಿದ್ದ ಅಖೋರ ಬಳಿ ನಮ್ಮ ದಾಳಿ ನಡೆದಿತ್ತು. ನಮ್ಮೊಂದಿಗೆ ತಲಾ ೧೨೦ ಯೋಧರ ೨ ಪಡೆಗಳು ಜೊತೆಗೂಡಿ ಡಿಸೆಂಬರ್ ೨ ರಂದು ರಾತ್ರಿ ವೇಳೆ ಸಮರ ಮುಂದುವರಿಯುತು. ಶತ್ರು ರಾಷ್ಟç ಪಾಕಿಸ್ತಾನ ಪಡೆಗಳು ದಿಢೀರಾಗಿ ನಮ್ಮ ಮೇಲೆ ದಾಳಿ ನಡೆಸಿದವು. ಅಲ್ಲದೆ ತಾತ್ಕಾಲಿಕ ಅಣೆಕಟ್ಟೆಯೊಂದರಿAದ ಶತ್ರುಗಳು ದಿಢೀರಾಗಿ ನೀರು ಹರಿಯಬಿಟ್ಟಾಗ ನಮ್ಮ ಪಡೆಗಳಲ್ಲಿ ಅನೇಕರು ನಾಲ್ಕೆöÊದು ಕಿ. ಮೀಟರ್‌ವರೆಗೆ ಕೊಚ್ಚಿಕೊಂಡು ಹೋದರು.
ಈ ಸಂದರ್ಭ ನೀರು ಹರಿಯುವಿಕೆಯನ್ನು ಲೆಕ್ಕಿಸದೆ ನಾನು ಸುಮಾರು ೬೦ ಯೋಧರ ಪಡೆಯೊಂದಿಗೆ ಬಿದಿರಿನ ಸೇತುವೆಯೊಂದನ್ನು ದಾಟಿ ಶತ್ರುಗಳ ವಿರುದ್ಧ ದಾಳಿ ನಡೆಸಲು ಹಿರಿಯ ಸೇನಾಧಿಕಾರಿಗಳಿಂದ ಆದೇಶಕ್ಕಾಗಿ ನಿರೀಕ್ಷಿಸುತ್ತಿದ್ದೆ. ಯುದ್ಧದ ತಯಾರಿಕೆ ಬಗ್ಗೆ ನಾನು ನನ್ನ ಪಡೆಯೊಂದಿಗೆ ಚರ್ಚಿಸಿ ನಿರ್ದೇಶನ ನೀಡುತ್ತಿದ್ದಾಗ ಶತ್ರು ಪಾಳಯದಿಂದ ಬಾಂಬ್‌ವೊAದು ಎಸೆಯಲ್ಪಟ್ಟು ನನ್ನ ಬಳಿಯೇ ಬಿದ್ದಿತ್ತಾದರೂ ದೈವವಶಾತ್ ನಾನು ಬದುಕುಳಿದೆ. ಈ ಸಂದರ್ಭ ಈ ಕುಕೃತ್ಯದಲ್ಲಿ ಭಾಗಿಯಾಗಿದ್ದ ೩-೪ ಮಂದಿ ಪಾಕಿಸ್ತಾನಿ ನಾಗರಿಕರನ್ನು ನಾವು ಬಂಧಿಸಿದೆವು. ದಾಳಿಯ ರಭಸ ಜೋರಾಗುತ್ತಾ ಬಂದು ಸಾವಿರಾರು ಬುಲೆಟ್‌ಗಳು ಎದುರಾದಾಗ ನಾವು ಕೂಡ ಬಂಕರ್‌ನಿAದ ಬಂಕರ್‌ಗೆ ಗ್ರೆನೇಡ್‌ಗಳ ಮೂಲಕ ೫ ಗಂಟೆಗಳ ಕಾಲ ಆರ್ಟಿಲರಿ ಶೆಲ್ ದಾಳಿಯೊಂದಿಗೆ ಮುಂದುವರಿದೆವು. ಡಿಸೆಂಬರ್ ೩ಕ್ಕೆ ನಾವು ಆ ಭಾಗದಲ್ಲಿ ವಿಜಯಿಶಾಲಿಗಳಾದೆವು. ಈ ಕಾರ್ಯಕ್ಕಾಗಿಯೇ ನನಗೆ ವೀರಚಕ್ರ ಪ್ರಶಸ್ತಿ ಲಭಿಸಿತು. (ಮುಂದುವರಿಯುವುದು)
-‘‘ಚಕ್ರವರ್ತಿ’’