ಮೋದಿ ತೆರಳುತ್ತಿದ್ದ ರಸ್ತೆಯಲ್ಲಿ ಪಂಜಾಬ್ ರೈತರ ಪ್ರತಿಭಟನೆ
ಚಂಡೀಗಢ, ಜ. ೫: ರೈತರ ಪ್ರತಿಭಟನೆಯಿಂದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್ನಲ್ಲಿ ಸುಮಾರು ೨೦ ನಿಮಿಷಗಳ ಕಾಲ ಫ್ಲೆöÊಓವರ್ನಲ್ಲಿ ಸಿಲುಕಿದ ಘಟನೆ ಬುಧವಾರ ನಡೆದಿದೆ. ಬಳಿಕ ಪ್ರಧಾನಿ ಮೋದಿ ಅವರು ಫಿರೋಜ್ಪುರದಲ್ಲಿ ನಿಗದಿಯಾಗಿದ್ದ ಕಾರ್ಯಕ್ರಮವನ್ನು ರದ್ದುಗೊಳಿಸಿ ದೆಹಲಿಗೆ ವಾಪಸಾಗಿದ್ದಾರೆ. ಕೇಂದ್ರ ಸರ್ಕಾರ ಇದೊಂದು ಪ್ರಮುಖ ಭದ್ರತಾ ಲೋಪ ಎಂದು ಹೇಳಿದೆ. ಪ್ರಧಾನಿ ಮೋದಿ ಅವರು ಬಟಿಂಡಾದಿAದ ಫಿರೋಜ್ಪುರಕ್ಕೆ ಹೆಲಿಕಾಪ್ಟರ್ನಲ್ಲಿ ಪ್ರಯಾಣಿಸಬೇಕಿತ್ತು. ಆದರೆ ಹವಾಮಾನ ವೈಪರಿತ್ಯದಿಂದಾಗಿ ಪ್ರಧಾನಿ ಮೋದಿ ಅವರು ದಿಢೀರ್ ರಸ್ತೆ ಮೂಲಕ ಪ್ರಯಾಣಿಸಿದ್ದಾರೆ. ಪ್ರಧಾನಿ ತೆರಳುತ್ತಿದ್ದ ರಸ್ತೆಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದರಿಂದ ಫಿರೋಜ್ಪುರ ಬಳಿಯ ಹುಸೇನಿವಾಲಾದಿಂದ ಸುಮಾರು ೩೦ ಕಿಲೋಮೀಟರ್ ದೂರದಲ್ಲಿರುವ ಫ್ಲೆöÊಓವರ್ನಲ್ಲಿ ಪ್ರಧಾನಿ ಮೋದಿ ೧೫ ರಿಂದ ೨೦ ನಿಮಿಷಗಳ ಕಾಲ ಸಿಲುಕಿಕೊಂಡಿದ್ದರು. ಕೇಂದ್ರ ಗೃಹ ಸಚಿವಾಲಯವು ಈ ಘಟನೆ "ದೊಡ್ಡ ಭದ್ರತಾ ಲೋಪ" ಎಂದಿದ್ದು, ಈ ಬಗ್ಗೆ ವರದಿ ನೀಡುವಂತೆ ಪಂಜಾಬ್ ಸರ್ಕಾರಕ್ಕೆ ಸೂಚಿಸಿದೆ. ಅಲ್ಲದೆ ಭದ್ರತಾ ಲೋಪದ ಕಾರಣದಿಂದ ಪ್ರಧಾನಿ ಮೋದಿ ಬಟಿಂಡಾದಲ್ಲಿ ನಿಗದಿಯಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸದೆ ವಿಮಾನ ನಿಲ್ದಾಣಕ್ಕೆ ವಾಪಸ್ ಆದರು ಎಂದು ಗೃಹ ಸಚಿವಾಲಯ ಹೇಳಿದೆ. ಪ್ರಧಾನಿ ಮೋದಿ ಅವರು ಹುಸೇನಿವಾಲಾದಲ್ಲಿರುವ ರಾಷ್ಟಿçÃಯ ಹುತಾತ್ಮರ ಸ್ಮಾರಕಕ್ಕೆ ಭೇಟಿ ನೀಡಲು ಬಟಿಂಡಾದ ಭೈಸಿಯಾನ ಏರ್ ಫೋರ್ಸ್ ಬಂದಿಳಿದಿದ್ದು, ಅಲ್ಲಿಂದ ಹೆಲಿಕಾಪ್ಟರ್ನಲ್ಲಿ ತೆರಳಬೇಕಾಗಿತ್ತು. ಆದರೆ ಹವಾಮಾನ ವೈಪರಿತ್ಯದಿಂದಾಗಿ ಮೋದಿ ವಿಮಾನ ನಿಲ್ದಾಣದಲ್ಲಿ ಸುಮಾರು ೨೦ ನಿಮಿಷಗಳ ಕಾಲ ಕಾದರು. ಆದರೂ ಹವಾಮಾನ ಸುಧಾರಿಸದ ಕಾರಣ ರಸ್ತೆ ಮಾರ್ಗದ ಮೂಲಕ ಸ್ಮಾರಕಕ್ಕೆ ತೆರಳಲು ನಿರ್ಧರಿಸಿದರು. ಪ್ರಧಾನಿ ಮೋದಿ ಪಂಜಾಬ್ ಪ್ರವಾಸಕ್ಕೆ ರೈತರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಎರಡು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಸಂಬAಧ ಪಂಜಾಬ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಬಿಜೆಪಿ ರಾಷ್ಟಿçÃಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು, ಘೋರ ಸೋಲಿನ ಭಯದಿಂದ ಪಂಜಾಬ್ನ ಕಾಂಗ್ರೆಸ್ ಸರ್ಕಾರ ಪ್ರಧಾನಿಯನ್ನು ಕೆಣಕಲು ಸಾಧ್ಯವಿರುವ ಎಲ್ಲ ತಂತ್ರಗಳನ್ನು ಅನುಸರಿಸುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.
ಸೇನಾ ಹೆಲಿಕಾಪ್ಟರ್ ದುರಂತ:ತನಿಖಾ ತಂಡದಿAದ ವಿಸ್ತೃತ ವರದಿ ಸಲ್ಲಿಕೆ
ನವದೆಹಲಿ, ಜ. ೫: ಡಿಸೆಂಬರ್ ೮ ರಂದು ತಮಿಳು ನಾಡಿನ ಕೂನ್ನೂರು ಬಳಿ ಸಂಭವಿಸಿದ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ರಕ್ಷಣಾ ಪಡೆ ಮುಖ್ಯಸ್ಥ ಜ. ಬಿಪಿನ್ ರಾವತ್ ಸೇರಿದಂತೆ ೧೪ ಮಂದಿ ಮೃತಪಟ್ಟಿರುವ ಘಟನೆಯ ತ್ರಿಸೇವಾ ತನಿಖೆಯನ್ನು ಪೂರ್ಣಗೊಳಿಸಿರುವ ತಂಡ ಬುಧವಾರ ವರದಿಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ನೀಡಿದೆ. ರಷ್ಯಾ ಮೂಲದ ಮಿ-೧೭ವಿ೫ ಹೆಲಿಕಾಪ್ಟರ್ ದುರಂತಕ್ಕೀಡಾಗಿತ್ತು. ಈ ದುರಂತ ಹೇಗಾಯಿತು ಎಂದು ತ್ರಿಸೇವಾ ತನಿಖೆ ನಡೆಸಿದ್ದು ಭಾರತೀಯ ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿವೇಕ್ ರಾಮ್ ಚೌಧರಿ, ರಕ್ಷಣಾ ಇಲಾಖೆ ಕಾರ್ಯದರ್ಶಿ ಅಜಯ್ ಕುಮಾರ್ ಮತ್ತು ತನಿಖಾ ಸಮಿತಿ ಮುಖ್ಯಸ್ಥ ಏರ್ ಮಾರ್ಷಲ್ ಮನ್ವೇಂದ್ರ ಸಿಂಗ್ ಅವರು ರಾಜನಾಥ್ ಸಿಂಗ್ ಅವರ ನಿವಾಸಕ್ಕೆ ತೆರಳಿ ವರದಿ ನೀಡಿ ಸುಮಾರು ೪೫ ನಿಮಿಷಗಳ ಕಾಲ ತನಿಖೆಯ ವಿವರ ನೀಡಿದ್ದಾರೆ. ಸಂಭಾವ್ಯ ಮಾನವ ದೋಷ ಅಥವಾ ಹೆಲಿಕಾಪ್ಟರ್ ಲ್ಯಾಂಡಿAಗ್ಗೆ ತಯಾರಿ ನಡೆಸುತ್ತಿದ್ದಾಗ ಸಿಬ್ಬಂದಿ ಭಯಗೊಂಡಿದ್ದರೇ ಎಂಬಿತ್ಯಾದಿ ಸೇರಿದಂತೆ ಅಪಘಾತದ ಎಲ್ಲಾ ಸಂಭವನೀಯ ಸನ್ನಿವೇಶಗಳನ್ನು ತನಿಖಾ ತಂಡವು ಪರಿಶೀಲಿಸಿದೆ ಎಂದು ತಿಳಿದುಬಂದಿದೆ. ಪ್ರಸ್ತುತ ಐಎಎಫ್ನ ಬೆಂಗಳೂರು ಪ್ರಧಾನ ಕಚೇರಿಯ ತರಬೇತಿ ಕಮಾಂಡ್ನ ಮುಖ್ಯಸ್ಥರಾಗಿರುವ ಏರ್ ಮಾರ್ಷಲ್ ಸಿಂಗ್ ಅವರು ವಿಮಾನ ಅಪಘಾತ ತನಿಖಾಧಿಕಾರಿಗಳಲ್ಲಿ ಒಬ್ಬರಾಗಿದ್ದಾರೆ. ತರಬೇತಿ ಕಮಾಂಡ್ನ ನಿಯಂತ್ರಣವನ್ನು ತೆಗೆದುಕೊಳ್ಳುವ ಮೊದಲು, ಏರ್ ಮಾರ್ಷಲ್ ಅವರು ವಾಯು ಪ್ರಧಾನ ಕಚೇರಿಯಲ್ಲಿ ಡೈರೆಕ್ಟರ್ ಜನರಲ್ (ತಪಾಸಣೆ ಮತ್ತು ಸುರಕ್ಷತೆ) ಆಗಿದ್ದರು. ಸೇವೆ ಸಲ್ಲಿಸುವಾಗ ವಿಮಾನ ಸುರಕ್ಷತೆಗಾಗಿ ವಿವಿಧ ಪ್ರೋಟೋಕಾಲ್ಗಳನ್ನು ಅಭಿವೃದ್ಧಿ ಪಡಿಸಿದರು. ಇನ್ನು ಮುಂದೆ ಪ್ರಮುಖ ಗಣ್ಯರು, ಅತಿ ಗಣ್ಯರು ಪ್ರಯಾಣಿ ಸುವಾಗ ಕಾರ್ಯವಿಧಾನಗಳಲ್ಲಿ ಕೆಲವು ಪರಿಷ್ಕರಣೆ ಮಾಡಬೇಕೆಂದು ತ್ರಿಸೇವಾ ತನಿಖೆ ಸಲಹೆ ನೀಡಿದೆ. ಡಿಸೆಂಬರ್ ೮ ರಂದು ಮಿ-೧೭ವಿ೫ ಪ್ರಯಾಣಿಸುತ್ತಿರುವಾಗ ಪರ್ವತ ಪ್ರದೇಶದಲ್ಲಿ ತೀವ್ರ ಮೋಡ ಎದುರಾಗಿತ್ತು. ಕಣಿವೆ ನಡುವೆ ಕಡಿಮೆ ಸಾಂದ್ರತೆಯಲ್ಲಿ ಹಾರಾಟ ನಡೆಸುತ್ತಿದ್ದರು. ಮೋಡವನ್ನು ತಪ್ಪಿಸಲು ಹೋಗಿ ಅಪಘಾತಕ್ಕೀಡಾಗಿರಬಹುದು ಎಂದು ಹೇಳಲಾಗುತ್ತಿದೆ. ತನಿಖಾ ತಂಡ ರಕ್ಷಣಾ ಇಲಾಖೆಗೆ ಹಲವು ಶಿಫಾರಸುಗಳನ್ನು ಮಾಡಿದೆ ಎಂದು ತಿಳಿದುಬಂದಿದೆ.
ಬಸ್-ಟ್ರಕ್ ಮುಖಾಮುಖಿ ಡಿಕ್ಕಿ ೭ ಮಂದಿ ದುರ್ಮರಣ
ಪಾಕೂರ್, ಜ. ೫: ಜಾರ್ಖಂಡ್ನ ಪಾಕುರ್ ಜಿಲ್ಲೆಯಲ್ಲಿ ಬುಧವಾರ ಬಸ್ ಮತ್ತು ಗ್ಯಾಸ್ ಸಿಲಿಂಡರ್ ಸಾಗಿಸುತ್ತಿದ್ದ ಟ್ರಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಏಳು ಮಂದಿ ಸಾವನ್ನಪ್ಪಿ, ೨೪ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಬುಧವಾರ ನಡೆದಿದೆ. ಅಮ್ರಪಾರ ಪೊಲೀಸ್ ಠಾಣಾ ವ್ಯಾಪ್ತಿಯ ಪಡೇರ್ಕೋಲಾ ಗ್ರಾಮದಲ್ಲಿ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ. ವೇಗವಾಗಿ ಬಂದ ಟ್ರಕ್ ಮತ್ತು ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಏಳು ಜನರು ಸಾವನ್ನಪ್ಪಿದ್ದಾರೆ ಮತ್ತು ೨೪ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಉಪವಿಭಾಗೀಯ ಪೊಲೀಸ್ ಅಧಿಕಾರಿ ಅಜಿತ್ ಕುಮಾರ್ ವಿಮಲ್ ಅವರು ತಿಳಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವ ೨೪ ಮಂದಿಯ ಪೈಕಿ ಹಲವರ ಸ್ಥಿತಿ ಗಂಭೀರವಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಬರ್ಹರ್ವಾದಿಂದ ದುಮ್ಕಾಗೆ ಹೋಗುತ್ತಿದ್ದ ಬಸ್ ಮತ್ತು ಎಲ್ಪಿಜಿ ಸಿಲಿಂಡರ್ ತುಂಬಿದ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಮಂಜು ಮುಸುಕಿದ ಕಾರಣ ಟ್ರಕ್ ಮತ್ತು ಬಸ್ ನಡುವೆ ಡಿಕ್ಕಿಯಾಗಿದೆ ಎಂದು ಹೇಳಲಾಗುತ್ತಿದೆ. ಅದೃಷ್ಟವಶಾತ್ ವಾಹನದಲ್ಲಿದ್ದ ಯಾವುದೇ ಸಿಲಿಂಡರ್ಗಳೂ ಸ್ಫೋಟಗೊಂಡಿಲ್ಲ. ಸ್ಫೋಟಗೊಂಡಿದ್ದೇ ಆಗಿದ್ದರೆ, ಮತ್ತಷ್ಟು ಜನರು ಸಾವನ್ನಪ್ಪುವ ಸಾಧ್ಯತೆಗಳಿರುತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.