ಮಡಿಕೇರಿ, ಜ. ೪: ವೃತ್ತಿಪರ ಶಿಕ್ಷಣ ಮೊದಲನೇ ವರ್ಷದಲ್ಲಿ ಓದುತ್ತಿರುವ ಮಾಜಿ ಸೈನಿಕರ ಮಕ್ಕಳಿಗೆ (ಸೈನ್ಯಾಧಿಕಾರಿಗಳ ಮಕ್ಕಳನ್ನು ಹೊರತುಪಡಿಸಿ) ಕೇಂದ್ರಿಯ ಸೈನಿಕ ಮಂಡಳಿಯಿAದ ಪ್ರಧಾನಮಂತ್ರಿ ಶಿಷ್ಯವೇತನಕ್ಕೆ ಅರ್ಜಿ ಸಲ್ಲಿಸಲು ತಾ. ೩೧ ರವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಕೇಂದ್ರೀಯ ಸೈನಿಕ ಮಂಡಳಿಯು ಘೋಷಿಸಿದ್ದು, ಅರ್ಹ ವಿದ್ಯಾರ್ಥಿಗಳು ಅರ್ಜಿಯನ್ನು (WWW.ಏSಃ.ಉಔಗಿ.Iಓ) ನಲ್ಲಿ ಸಲ್ಲಿಸಬಹುದು.

ಅಂತೆಯೇ ಒಂದನೇ ತರಗತಿಯಿಂದ ಪದವಿಯವರೆಗೆ (ವೃತ್ತಿಪರ ಶಿಕ್ಷಣ ಹೊರತುಪಡಿಸಿ) ಓದುತ್ತಿರುವ ಮಾಜಿ ಸೈನಿಕರ (ಹವಲ್ದಾರ್ ರ‍್ಯಾಂಕಿನವರೆಗಿನ) ಮಕ್ಕಳಿಗೆ ಶಿಷ್ಯವೇತನಕ್ಕೆ ತಾ.೭ ರ ವರೆಗೆ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ ಎಂದು ಕೇಂದ್ರೀಯ ಸೈನಿಕ ಮಂಡಳಿ ತಿಳಿಸಿದೆ ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.