ಸೋಮವಾರಪೇಟೆ, ಜ.೩: ಪಟ್ಟಣದ ಬಾಣಾವರ ರಸ್ತೆ ನಿವಾಸಿ ಸೋಮಶೇಖರ್ ಅವರ ಪುತ್ರ ನಂಜಪ್ಪ (೩೫) ಅವರು ಮನೆಯ ಹಿಂಭಾಗ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕಳೆದ ಒಂದು ವಾರದ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದ ನಂಜಪ್ಪ, ಇಂದು ಮಧ್ಯಾಹ್ನ ಮನೆಯ ಹಿಂಭಾಗದ ಮರಕ್ಕೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪತ್ನಿ ಹಾಗೂ ಮನೆಯವರು ಒಳಗಿದ್ದ ಸಂದರ್ಭ, ಮನೆಯ ಹಿಂಭಾಗದಿAದ ಆಗಮಿಸಿರುವ ನಂಜಪ್ಪ, ಟವೆಲ್‌ನಿಂದ ನೇಣಿಗೆ ಶರಣಾಗಿದ್ದಾರೆ.

ಇತ್ತೀಚೆಗಷ್ಟೇ ಖಾಸಗಿ ಹಣಕಾಸು ಸಂಸ್ಥೆಯಿAದ ಸಾಲ ಪಡೆದಿದ್ದ ಇವರು, ಆತ್ಮಹತ್ಯೆಗೂ ಮುನ್ನ ಡೆತ್‌ನೋಟ್ ಬರೆದಿಟ್ಟಿದ್ದು, ಸಾಲ ಬಾಧೆಯಿಂದ ಸಾವಿಗೆ ಶರಣಾಗುತ್ತಿದ್ದು, ನನ್ನ ಸಾವಿಗೆ ಬೇರೆ ಯಾರೂ ಕಾರಣರಲ್ಲ ಎಂದು ಉಲ್ಲೇಖಿಸಿದ್ದಾರೆ.

ಮೃತರು ಪೋಷಕರು ಸೇರಿದಂತೆ ಪತ್ನಿ ಪೂರ್ಣಿಮಾ ಹಾಗೂ ಒಂದು ವರ್ಷದ ಪುತ್ರನನ್ನು ಅಗಲಿದ್ದಾರೆ. ಸ್ಥಳಕ್ಕೆ ಸೋಮವಾರಪೇಟೆ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಠಾಣಾಧಿಕಾರಿ ವಿರೂಪಾಕ್ಷ ಹಾಗೂ ಸಿಬ್ಬಂದಿಗಳು ತೆರಳಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.