ಪೊನ್ನAಪೇಟೆ, ಜ. ೨: ಇಲ್ಲಿನ 'ಜೆ.ಸಿ.ಐ. ಪೊನ್ನಂಪೇಟೆ ನಿಸರ್ಗ'ಕ್ಕೆ (ನಿಸರ್ಗ ಜೇಸೀಸ್) ಆಯ್ಕೆಗೊಂಡಿರುವ ೧೧ನೇ ಘಟಕಾಡಳಿತ ಮಂಡಳಿಯ ನೂತನ ಪದಾಧಿಕಾರಿಗಳ ಪದಸ್ವೀಕಾರ ಸಮಾರಂಭವು ತಾ.೫ರಂದು ಬುಧವಾರ ಬಿಟ್ಟಂಗಾಲದಲ್ಲಿ ಜರುಗಲಿದೆ.

ಗೋಣಿಕೊಪ್ಪಲು- ವೀರಾಜಪೇಟೆ ಮುಖ್ಯರಸ್ತೆಯ ಬಿಟ್ಟಂಗಾಲದ ಕೊಡಗು ಹೆಗ್ಗಡೆ ಸಮಾಜದ ಸಭಾಂಗಣದಲ್ಲಿ ಸಂಜೆ ೬:೩೦ ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ವಲಯ-೧೪ರ ನಿಕಟಪೂರ್ವ ವಲಯಾಧ್ಯಕ್ಷರು ಮತ್ತು ಜೆಸಿಐ ಭಾರತದ ಅಧಿಕೃತ ಮಾಸ ಸಂಚಿಕೆಯ ಸಂಪಾದಕ ಮಂಡಳಿಯ ಮುಖ್ಯಸ್ಥ ಸೆನೆಟರ್ ಭರತ್ ಎನ್. ಆಚಾರ್ಯ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಘಟಕದ ೨೦೨೧ನೇ ಸಾಲಿನ ಅಧ್ಯಕ್ಷ ವನಿತ್‌ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಜೇಸಿಸ್‌ನ ಅಂತರಾಷ್ಟಿçÃಯ ತರಬೇತುದಾರರು ಮತ್ತು ಶ್ರೀರಂಗಪಟ್ಟಣದ ಪರಿವರ್ತನಾ ಶಾಲೆಯ ಡೀನ್ ಆರ್. ಎ. ಚೇತನ್ ರಾಮ್ ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಗೌರವ ಅತಿಥಿಗಳಾಗಿ ಜೆಸಿಐ ಭಾರತದ ವಲಯ ೧೪ರ 'ಡಿ' ಪ್ರಾಂತ್ಯದ ವಲಯ ಉಪಾಧ್ಯಕ್ಷರಾದ ಯಶಸ್ವಿನಿ ಅವರು ಭಾಗವಹಿಸಲಿದ್ದಾರೆ.

ಜೆ.ಸಿ.ಐ. ಪೊನ್ನಂಪೇಟೆ ನಿಸರ್ಗ ಘಟಕದ ೧೧ನೇ ಘಟಕಾಡಳಿತ ಮಂಡಳಿಯ ಅಧ್ಯಕ್ಷರಾಗಿ ಎ. ಪಿ. ದಿನೇಶ್, ಕಾರ್ಯದರ್ಶಿಯಾಗಿ ಶರತ್ ಸೋಮಣ್ಣ, ಕೋಶಾಧಿಕಾರಿಯಾಗಿ ಕುಪ್ಪಂಡ ದಿಲನ್ ಬೋಪಣ್ಣ, ಉಪಾಧ್ಯಕ್ಷರಾಗಿ ಎಂ. ಎಸ್. ಸರ್ಪುದ್ದೀನ್ (ನಿರ್ವಹಣೆ), ಎನ್.ಜಿ. ಸುರೇಶ್ (ಕಾರ್ಯಕ್ರಮ), ಹೆಚ್. ಆರ್. ಸತೀಶ್ (ತರಬೇತಿ), ಡಾ. ಬಿ. ಎಂ. ಗಣೇಶ್ (ಅಭಿವೃದ್ಧಿ ಮತ್ತು ಬೆಳವಣಿಗೆ), ಕೆ. ಪಿ. ರಹೀಸ್ (ವ್ಯವಹಾರ) ಜಂಟಿ ಕಾರ್ಯದರ್ಶಿಯಾಗಿ ಪಿ.ಎಂ. ಮೆಹರೂಫ್, ನಿರ್ದೇಶಕರುಗಳಾಗಿ ಸ್ವಾಮಿ ಆಚಾರ್ಯ, ಶಿವಕುಮಾರ್, ಟಿ.ಜಿ. ಲಿಖಿತ್ ಕುಮಾರ್, ಸಿ.ಬಿ. ಸೋಮಣ್ಣ, ಎಂ.ಪಿ. ಬೋಪಣ್ಣ ಹಾಗೂ ಜೂನಿಯರ್ ಜೇಸಿ ವಿಭಾಗದ ಮುಖ್ಯಸ್ಥರಾಗಿ ಎ.ಡಿ. ಚರಣ್ ಚಂಗಪ್ಪ ಅವರು ಸಮಾರಂಭದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಜೆಸಿಐ ಭಾರತದ ಸೀನಿಯರ್ ಮೆಂಬರ್ಸ್ ಅಸೋಸಿಯೇಷನ್ (ಎಸ್. ಎಂ.ಎ.) ಸಂಸ್ಥಾಪನಾ ರಾಷ್ಟಿçÃಯ ಮಂಡಳಿಯ ನಿರ್ದೇಶಕರಾಗಿ ಆಯ್ಕೆಗೊಂಡಿರುವ ಎ. ಎಸ್. ನರೇನ್ ಕಾರ್ಯಪ್ಪ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆಗೈದಿರುವ ಡಾ. ಕೆ.ಕೆ. ಶಿವಪ್ಪ, ಡಾ. ಜೆ. ಸೋಮಣ್ಣ ಮತ್ತು ಕೆ. ಟಿ. ಟಿಪ್ಪು ಬಿದ್ದಪ್ಪ ಅವರನ್ನು ಸಮಾರಂಭದಲ್ಲಿ ಘಟಕದ ಪರವಾಗಿ ಸನ್ಮಾನಿಸಿ ಗೌರವಿಸಲಾಗುವುದು.