ಮಡಿಕೇರಿ, ಜ. ೨: ನಗರ ವ್ಯಾಪ್ತಿಯಲ್ಲಿ ಕೊಡವಕೇರಿ ಸಂಘಗಳು ಅಸ್ತಿತ್ವದಲ್ಲಿರುವದು ಪರಸ್ಪರ ಬಾಂಧವ್ಯವೃದ್ಧಿ ಹಾಗೂ ಸಹಕಾರಕ್ಕೆ ಪೂರಕವಾಗಿದೆ ಎಂದು ನಿವೃತ್ತ ಕರ್ನಲ್ ಡಾ|| ನಾಳಿಯಂಡ ಕರುಂಬಯ್ಯ ಅವರು ಅಭಿಪ್ರಾಯಪಟ್ಟರು.
ನಗರದ ಕೊಡವ ಸಮಾಜ ಸಭಾಂಗಣದಲ್ಲಿ ಜರುಗಿದ ಶ್ರೀ ಇಗ್ಗುತಪ್ಪ ಕೊಡವಕೇರಿ ಸಂಘದ ವಾರ್ಷಿಕ ಮಹಾಸಭೆ ಹಾಗೂ ಸಂತೋಷಕೂಟ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಪ್ರಸ್ತುತದ ಸನ್ನಿವೇಶದಲ್ಲಿ ಕೊರೊನಾದ ಆತಂಕವಿರುವದರಿAದ ಎಲ್ಲರೂ ಜಾಗ್ರತೆಯಿಂದಿರಬೇಕು ಹಾಗೂ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ತೋರಬೇಕೆಂದು ಅವರು ಕರೆ ನೀಡಿದರು.
ಸಂಘದ ಅಧ್ಯಕ್ಷೆ ಚೌರೀರ ಕಾವೇರಿ ಪೂಣಚ್ಚ ಅವರು ಮಾತನಾಡಿ, ಸಂಘದ ಸದಸ್ಯರ ನಡುವಿನ ಉತ್ತಮ ಬಾಂಧವ್ಯ ಮುಂದುವರಿಯಬೇಕೆAದು ಆಶಿಸಿದರು. ಕಾರ್ಯದರ್ಶಿ ಬೊಳ್ಳಾರ್‌ಪಂಡ ಲೀಲಾ ಸುಬ್ಬಯ್ಯ ಅವರು ಮಾತನಾಡಿದರು. ಖಜಾಂಚಿ ಪಡೆಯಟ್ಟಿರ ಹರೀಶ್ ಮುತ್ತಪ್ಪ ಲೆಕ್ಕಪತ್ರದ ವಿವರ ಮಂಡಿಸಿದರು. ಕಾರ್ಯಕ್ರಮದಲ್ಲಿ ಆರ್ಮಿ ಆಫೀರ‍್ಸ್ ಆಯ್ಕೆಯಲ್ಲಿ ರಾಷ್ಟçಮಟ್ಟದಲ್ಲಿ ತೃತೀಯ ಸ್ಥಾನಗಳಿಸಿದ ಅಜ್ಜಿನಂಡ ಐಶ್ವರ್ಯ ದೇಚಮ್ಮ, ಕಳೆದ ಬಾರಿಯ ಆರ್.ಡಿ. ಪೆರೇಡ್‌ನಲ್ಲಿ ಪಾಲ್ಗೊಂಡಿದ್ದ ಚಾವಂಡ ಯಶಸ್ವಿನಿ ತಮ್ಮಯ್ಯ ಹಾಗೂ ಶೈಕ್ಷಣಿಕವಾಗಿ ಸಾಧನೆಯೊಂದಿಗೆ ಪಿಹೆಚ್‌ಡಿ ಪಡೆದಿರುವ ಪೈಕೇರ ಶಿವಾನಿ ದೇಚಮ್ಮ ಅವರುಗಳಿಗೆ ಗೌರವ ಸಲ್ಲಿಸಲಾಯಿತು. ವೇದಿಕೆಯಲ್ಲಿ ಉಪಾಧ್ಯಕ್ಷ ಬಲ್ಯಂಡ ಪ್ರಕಾಶ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ನೂತನÀ ಸಮಿತಿ ರಚನೆ
ಸಂಘದ ಮುಂದಿನ ಸಾಲಿನ ಪದಾಧಿಕಾರಿಗಳನ್ನು ಈ ಸಂದರ್ಭ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಮೊಣ್ಣಂಡ ಶೋಭಾ ಸುಬ್ಬಯ್ಯ, ಉಪಾಧ್ಯಕ್ಷರಾಗಿ ಮುಕ್ಕಾಟಿರ ಪೊನ್ನಮ್ಮ, ಕಾರ್ಯದರ್ಶಿಯಾಗಿ ಚೆಯ್ಯಂಡ ಸತ್ಯಗಣಪತಿ, ಖಜಾಂಚಿಯಾಗಿ ಕಲಿಯಂಡ ಮಧು ಹಾಗೂ ಇತರ ನಿರ್ದೇಶಕರನ್ನು ಆರಿಸಲಾಯಿತು. ಸದಸ್ಯ ಮಾತಂಡ ಸುರೇಶ್ ಚಂಗಪ್ಪ ಅವರು ಆಯ್ಕೆಪ್ರ‍್ರಕ್ರಿಯೆ ನಡೆಸಿಕೊಟ್ಟರು. ಚೆಯ್ಯಂಡ ಬನಿತ್ ಬೋಜಣ್ಣ ಪ್ರಾರ್ಥಿಸಿ, ಬಲ್ಯಂಡ ಪ್ರಕಾಶ್ ಸ್ವಾಗತಿಸಿದರು. ನೆರವಂಡ ಬಬಿನಾ ಹಾಗೂ ಮುಕ್ಕಾಟಿರ ವಿಮಲ ಸನ್ಮಾನಿತರನ್ನು ಪರಿಚಯಿಸಿದರೆ, ಸತ್ಯಗಣಪತಿ ನಿರೂಪಿಸಿದರು. ನೂತನ ಅಧ್ಯಕ್ಷೆ ಶೋಭಾ ಸುಬ್ಬಯ್ಯ ಅವರು ಈ ಸಂದರ್ಭ ಮಾತನಾಡಿದರು.