ಮಡಿಕೇರಿ, ಜ. ೩ : ಕ್ರೆöÊಸ್ತರ ಮೇಲಿನ ದೌರ್ಜನ್ಯವನ್ನು ಖಂಡಿಸಿ ಹಾಗೂ ಮತಾಂತರ ನಿಷೇಧ ಮಸೂದೆಯನ್ನು ವಿರೋಧಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನಗರದ ಇಂದಿರಾ ಗಾಂಧಿ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಸರ್ಕಾರ ಹಾಗೂ ಸಂಘ ಪರಿವಾರದ ವಿರುದ್ಧ ದಿಕ್ಕಾರ ಘೋಷಣೆಗಳನ್ನು ಕೂಗಿದರು.

ಪಕ್ಷದ ಜಿಲ್ಲಾಧ್ಯಕ್ಷ ಮುಸ್ತಫ, ಪ್ರಮುಖರಾದ ಅಮಿನ್ ಮೊಯ್ಸಿನ್, ಮನ್ಸೂರ್, ಫಾದರ್ ಜೆರಾಲ್ಡ್ ಸಿಕ್ವೇರಾ, ಜಾರ್ಜ್ ಲಾಸ್ರಾಡೋ, ವಿಜು ಮಡಿಕೇರಿ, ಮೈಕಲ್ ವೇಗಸ್, ಅಬ್ದುಲ್ಲಾ, ನಗರಸಭಾ ಸದಸ್ಯರಾದ ಮೇರಿ ವೇಗಸ್ ಮತ್ತಿತರರು ಇದ್ದರು.