ಸೋಮವಾರಪೇಟೆ, ಜ.೨: ಕರ್ನಾಟಕ ರಾಜ್ಯ ಕ್ರಾಸ್ ಕಂಟ್ರಿ ಅಸೋಸಿಯೇಷನ್ ವತಿಯಿಂದ ಕಾರವಾರದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ ತಾಲೂಕಿನ ಕೂತಿ ಗ್ರಾಮದ ಸಿ.ಎಂ. ರಾಶಿ, ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕಕ್ಕೆ ಭಾಜನಳಾಗಿದ್ದಾಳೆ.
ಗುಡ್ಡಗಾಡು ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ಈಕೆ ೬ ಕಿ.ಮೀ. ದೂರವನ್ನು ೨೨ ನಿಮಿಷದಲ್ಲಿ ಕ್ರಮಿಸುವ ಮೂಲಕ ಪ್ರಥಮ ಸ್ಥಾನ ಪಡೆದಿದ್ದಾಳೆ. ಈಕೆ ಕೂತಿ ಗ್ರಾಮದ ರೀನಾ ಮತ್ತು ಮಂಜುನಾಥ್ ದಂಪತಿ ಪುತ್ರಿ.