ಮುಳ್ಳೂರು, ಜ ೧: ಸಮೀಪದ ಶನಿವಾರಸಂತೆÀ ಸುಪ್ರಜ ಗುರುಕುಲ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹೊಸ ವರ್ಷದ ಪ್ರಯುಕ್ತ ವಿಜ್ಞಾನ ಮಾದರಿ ವಸ್ತುಪ್ರದರ್ಶನ ನಡೆಯಿತು. ಶಾಲಾ ಆವರಣದೊಳಗೆ ಶಾಲೆಯ ೬ ರಿಂದ ೧೦ನೇ ತರಗತಿ ವಿದ್ಯಾರ್ಥಿ ವಿದ್ಯಾರ್ಥಿಗಳು ತಮ್ಮದೆ ಪರಿಕಲ್ಪನೆ ಮೂಲಕ ವಿಜ್ಞಾನದ ವಿವಿಧ ಆವಿಷ್ಕಾರದ ಮಾದರಿಗಳನ್ನು ತಯಾರಿಸಿ ಪ್ರದರ್ಶನಕಿಟ್ಟಿದ್ದರು. ಕೆಲವು ವಿದ್ಯಾರ್ಥಿಗಳು ತಮ್ಮದೆ ಪರಿಕಲ್ಪನೆಯಲ್ಲಿ ರಟ್ಟು, ಪೇಪರ್‌ಗಳಿಂದ ವಿಜ್ಞಾನ ಮತ್ತು ಮತ್ತು ತಂತ್ರಜ್ಞಾನದ ಮಾದರಿಗಳನ್ನು ತಯಾರಿಸಿಕೊಂಡು ಪ್ರದರ್ಶಿಸಿದರು. ಬಹುತೇಕ ವಿದ್ಯಾರ್ಥಿ ವಿದ್ಯಾರ್ಥಿನಿಯರು ಲೋಹ, ತಗಡು ವಸ್ತುಗಳನ್ನು ಬಳಕೆ ಮಾಡಿ ಬ್ಯಾಟರಿ ಮೂಲಕ ಚಾಲನೆಗೊಳ್ಳುವಂತ ಮಾದರಿಗಳನ್ನು ತಯಾರಿಸಿದ್ದರು.

ಕಣ್ಮನ ಸೆಳೆದ ಮಾದರಿಗಳು: ಕೃತಕ ಭೂ ಉಪಗ್ರಹ, ವಿಮಾನ, ವಿದ್ಯುತ್ ಸ್ಥಾವರ, ಬಯೋ ಗ್ಯಾಸ್, ಸೋಲಾರ್ ಪಾರ್ಕ್, ಮೊಬೈಲ್ ಚಾರ್ಜರ್ ಪವರ್‌ಬ್ಯಾಂಕ್, ವಿದ್ಯುತ್ ಉಳಿತಾಯ ಪರಿಕಲ್ಪನೆಯಲ್ಲಿ ತಯಾರಿಸಿದ ಸೋಲಾರ್ ಬ್ಯಾಟರಿ. ತಂತ್ರಜ್ಞಾನ ಯಂತ್ರ ಮೂಲಕ ಮಳೆ ಮಾಪನ, ತುಂತುರು ಹನಿ ನೀರಾವರಿ ಮೂಲಕ ೩ ದಿನಗಳಲ್ಲಿ ಹೈಬ್ರಿಡ್ ತಳಿಯ ಭತ್ತದ ಬೀಜ ಮೊಳಕೆಯೊಡೆದು ಸಸಿಯಾಗುವ ಬಯೋ ತಂತ್ರಜ್ಞಾನದ ಮಾದರಿ ಮುಂತಾದ ವಿಜ್ಞಾನ ಮಾದರಿಗಳನ್ನು ತಯಾರಿಸುದ ವಿದ್ಯಾರ್ಥಿಗಳು ಅವುಗಳಿಗೆ ಬ್ಯಾಟರಿ, ವೈರ್, ರ‍್ಯಾಮ್, ಇನ್ನುಮುಂತಾದ ಎಲೆಕ್ಟಿçಕ್ ವಸ್ತುಗಳನ್ನು ಅಳವಡಿಸಿದ್ದರು. ತಾವು ತಯಾರಿಸಿದ ಯೋಜನೆ ಬಗ್ಗೆ ಮಾಹಿತಿ ಒಳಗೊಂಡ ಫಲಕವನ್ನು ಅಳವಡಿಸಿ ಅವುಗಳನ್ನು ವೀಕ್ಷಕರಿಗೆ ಪ್ರಾಯೋಗಿಕವಾಗಿ ತೋರಿಸಿ ಕೊಡುತ್ತಿದ್ದರು.

ಇದರಲ್ಲಿ ವಿದ್ಯಾರ್ಥಿಯೊಬ್ಬ ಹೈಬ್ರಿಡ್ ಭತ್ತದ ಬೀಜವನ್ನು ೩ ದಿನಗಳ ಹಿಂದೆ ಬೇಸನ್‌ವೊಂದರಲ್ಲಿ ಬಿತ್ತನೆ ಮಾಡಿ ಸಸಿಯಾಗಿದ್ದ ಮಡುವನ್ನು ಪ್ರದರ್ಶನಕಿಟ್ಟು ಹನಿ ನೀರಾವರಿ ಮೂಲಕ ಬತ್ತದ ಬೀಜ ಸೇರಿದಂತೆ ವಿವಿಧ ಸಸ್ಯಗಳನ್ನು ಬೆಳೆಸುವ ವಿಧಾನವನ್ನು ಪ್ರಾಯೋಗಿಕವಾಗಿ ತೋರಿಸಿಕೊಡುತ್ತಿದ್ದದ್ದು ವಿಶೇµ Àವಾಗಿತ್ತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ತರಗತಿಗಳಲ್ಲಿ ವಾರದ ಸಂತೆ ನಡೆಸಿ ವಿವಿಧ ತರಕಾರಿ, ಕಾಯಿಪಲ್ಲೆಗಳನ್ನು ಮಾರಾಟ ಮಾಡಿದರು. -ಭಾಸ್ಕರ್ ಮುಳ್ಳೂರು