ಕ್ಷೇತ್ರ ಮಹಾತ್ಮೆ : ಪುಣ್ಯಭೂಮಿಯಾದ ನಮ್ಮ ಭರತ ಖಂಡದಲ್ಲಿ ಸಪ್ತ ತೀರ್ಥಗಳಿಗೆ ವಿಶೇಷ ಸ್ಥಾನವಿರುತ್ತದೆ. ಈ ತೀರ್ಥಗಳಲ್ಲಿ ಶ್ರೀ ಕಾವೇರಿಯೂ ಒಂದಾಗಿದೆ. ಅಲ್ಲದೆ, ಶ್ರೀ ಗಂಗಾದಿ ಸಮಸ್ತ ತೀರ್ಥಗಳೂ ಶ್ರೀ ಕಾವೇರಿ ಯಲ್ಲಿಯೇ ಸನ್ನಿಹಿತವಾಗಿರುವುದಾಗಿದೆಯೆಂದು ನಮಗೆ ವೇದ ಮತ್ತು ಪುರಾಣಗಳಿಂದ ತಿಳಿದು ಬರುತ್ತದೆ.
ಶ್ರೀ ಕವೇರ ಮುನಿಯ ತಪಸ್ಸಿಗೆ ಒಲಿದು ಬ್ರಹ್ಮ ದೇವರಿಂದ ವರ ರೂಪದಲ್ಲಿ ಕೊಡಲ್ಪಟ್ಟ ಲೋಪಾಮುದ್ರೆಯನ್ನು ಮುಂದೆ ಅಗಸ್ತ ಮಹಾಮುನಿಗಳು ವಿವಾಹವಾಗಿ, ಕೆಲವು ಸಮಯದವರೆಗೆ ಅವರು ಗೃಹಸ್ಥ ಜೀವನವನ್ನು ಸಾಗಿಸಿದ್ದರು. ಆದರೆ ಪತಿಯಾದ ಅಗಸ್ತö್ಯರು ವಿವಾಹ ಸಂದರ್ಭಕ್ಕೆ ಮೊದಲು ಮಾಡಿಕೊಂಡಿದ್ದ ನಿಬಂಧನೆಯನ್ನು ಉಲ್ಲಂಘಿಸಿರುತ್ತಾರೆ ಎಂಬ ಕಾರಣದಿಂದ, ಈ ಲೋಪಾಮುದ್ರೆಯು ಅಗಸ್ತö್ಯರ ಕಮಂಡಲುವಿನಿAದ ಹೊರಬಂದು ಪಕ್ಕದ ಬ್ರಹ್ಮಕುಂಡಿಕೆಯನ್ನು ಸೇರಿ ಅಲ್ಲಿಂದ ಜಲರೂಪವನ್ನು ತಳೆದು, ಲೋಕ ಕಲ್ಯಾಣಾರ್ಥವಾಗಿ ನದಿಯಾಗಿ ಹರಿಯುತ್ತಾಳೆ. ಮಾತ್ರವಲ್ಲ, ಇಲ್ಲಿ ಲೋಪಾಮುದ್ರೆಯ ರೂಪದಲ್ಲಿ ಅಗಸ್ತö್ಯರ ಪತ್ನಿಯಾಗೂ, ತೀರ್ಥರೂಪದ ನದಿಯಾಗಿ ಶ್ರೀ ಕಾವೇರಿಯಾಗಿಯೂ ಎರಡು ದೇಹವನ್ನು ಪಡೆದು ಮುಂದುವರೆಯುತ್ತಾಳೆ. ಅಂತೆಯೇ ಶ್ರೀ ಕಾವೇರಿಯು ಪೂರ್ವ ಸಮುದ್ರವನ್ನು ಸೇರುತ್ತಾಳೆ.
ಶ್ರೀ ಮಹಾಮುನಿ ಅಗಸ್ತö್ಯರ ಮಹಿಮೆ : ಕುಂಭೋದ್ಭವರೆAಬ ಅನ್ವರ್ಥನಾಮವುಳ್ಳ ಬ್ರಹ್ಮರ್ಷಿಗಳಾದ ಅಗಸ್ತö್ಯರು ರಾಕ್ಷಸರ ನಾಶಕ್ಕಾಗಿ ಇಡೀ ಸಮುದ್ರ ಜಲವನ್ನೇ ಪಾನ ಮಾಡಿ ಜೀರ್ಣಿಸಿಕೊಂಡವರು. ಅಗಸ್ತö್ಯರನ್ನು ನಾಶ ಮಾಡುವುದಕ್ಕಾಗಿ ವಂಚನೆಯಿAದ ವಾತಾಪಿ-ಇಲ್ವಲರೆಂಬ ರಾಕ್ಷಸರು, ವಾತಾಪಿಯನ್ನೇ ಕೊಂದು ಅಡುಗೆ ಮಾಡಿ ಬಡಿಸಿದ ಇಲ್ವಲನು ಪುನ: ವಾತಾಪಿಯನ್ನು ಕರೆಯುವಾಗ ಮಾಯವಿದ್ಯೆಯಿಂದ, ಅಗಸ್ತö್ಯರ ಹೊಟ್ಟೆಯನ್ನು ಸೀಳಿ ಹೊರಬರಲು ಪ್ರಯತ್ನಿಸಿದಾಗ, ತಮ್ಮ ತಪೋ ಮಹಿಮೆಯಿಂದ ಅಗಸ್ತö್ಯರು ವಾತಾಪಿಯನ್ನು ಜೀರ್ಣ ಮಾಡಿ ಇಲ್ವಲನನ್ನು ಸುಟ್ಟು ಬೂದಿ ಮಾಡುತ್ತಾರೆ.
ಸೂರ್ಯನ ಗತಿಗೆ ವಿಘ್ನವುಂಟುಮಾಡಿದ ವಿಂಧ್ಯ ಪರ್ವತವನ್ನೇ ಕುಗ್ಗಿಸಿದವರು ಶ್ರೀ ಅಗಸ್ತö್ಯರು. ಚಂದ್ರವAಶದ ನಹುಷ ಮಹಾರಾಜನು ಇಂದ್ರಪಟ್ಟವನ್ನೇರಿ, ದೇವೇಂದ್ರನ ಪತ್ನಿಯಾದ ಶಚೀದೇವಿಯನ್ನು ಕಾವಿಸಿ ಅನುರುಕ್ತನಾದಾಗ, ಸಪ್ತರ್ಷಿಗಳಿಂದ ಪಲ್ಲಕ್ಕಿಯಲ್ಲಿ ತನ್ನ ಅರಮನೆಗೆ ಬಂದಾಗ ವಿವಾಹವಾಗುವನೆಂಬ ಅವಳ ಮಾತಿನ ಪ್ರಕಾರ, ಸಪ್ತರ್ಷಿಗಳಿಂದಲೇ ಪಲ್ಲಕ್ಕಿಯನ್ನು ಹೊರಿಸಿಕೊಂಡು ಶಚೀದೇವಿಯ ಅಂತ:ಪುರಕ್ಕೆ ಬರುತ್ತಿದ್ದಾಗ ಬೇಗ ಬೇಗ ನಡೆಯೆಂದು ಪಲ್ಲಕ್ಕಿ ಹೊರುತ್ತಿದ್ದ ಶ್ರೀ ಅಗಸ್ತö್ಯರ ತಲೆಯನ್ನು ದುರಹಂಕಾರದಿAದ ನಹುಷನು ತನ್ನ ಕಾಲಿನಿಂದ ತುಳಿಯುತ್ತಾನೆ. ಇದರಿಂದ ಹೆಡೆ ತುಳಿದ ಸರ್ಪದಂತೆ ಭುಸುಗುಟ್ಟುತ್ತ ಶ್ರೀ ಅಗಸ್ತö್ಯರು “ಸರ್ಪೋಭವ”, ಎಂದು ಉಗ್ರವಾಗಿ ಶಪಿಸಿದ ಪರಿಣಾಮವಾಗಿ, ತಲೆ ಪಿತ್ಥವೆಲ್ಲ ಇಳಿದ ನುಹುಷನು ಪೂರ್ಣ ಕ್ಷಮಾಯಾಚನೆ ಮಾಡಿ ನಂತರ ವಿಶಾಪವನ್ನು ಪಡೆದರೂ ಕೂಡಲೇ ಹೆಬ್ಬಾವಿನ ಜನ್ಮವನ್ನು ಪಡೆಯುತ್ತಾನೆ. ಇಂತಹ ನಿಗ್ರಹಾನುಗ್ರಹ ಶಕ್ತಿಯುಳ್ಳ ಮಹಿಮಾತಿಶಯವುಳ್ಳ ತಪೋಶಕ್ತಿವಂತರಾದ ಮಹರ್ಷಿಗಳಾದ ಶ್ರೀ ಅಗಸ್ತö್ಯರೇ ಈ ಶ್ರೀ ತಲಕಾವೇರಿಯ ಆದಿಮ ಗುರುಗಳೂ ಪ್ರತಿಷ್ಠಾಪನಾಚಾರ್ಯರೂ ಹಾಗೂ ಸೃಷ್ಟಿಕರ್ತರೂ ಆಗಿರುತ್ತಾರೆಂಬುದು ಜ್ಯೋತಿಶಾಸ್ತçದ ಅಷ್ಟಮಂಗಲ ಪ್ರಶ್ನೆಯಲ್ಲಿ ಪ್ರಥಮತಃ ತಿಳಿದು ಬರುವ ವಿಚಾರವಾಗಿದೆ.
ಅನಶ್ವರ ಚೈತನ್ಯಪೂರ್ಣ ತೀರ್ಥ ಪಾವಿತ್ರö್ಯವನ್ನು ಹೊಂದಿ ಶ್ರೀ ಗಂಗಾದಿ ಸಮಸ್ತ ಪುಣ್ಯ ತೀರ್ಥ ಸ್ವರೂಪಳಾದ ಶ್ರೀ ಕಾವೇರಿಯ ಸಾನ್ನಿಧ್ಯವು ಸ್ವಯಂಭೂತವಾಗಿದ್ದು, ಉತ್ಪತ್ತಿಯಿಂದಲೇ ಸ್ವಯಂ ಪರಿಶುದ್ಧ ಮಹಿಮಾತಿಶಯ ವನ್ನು ಹೊಂದಿರುವುದು ತಿಳಿದು ಬರುತ್ತದೆ. ಆದರೆ, ಇಂತಹ ಅಲೌಕಿಕ ಶಕ್ತಿ ಪ್ರಭೆಯು ಪ್ರಸರಣವಾಗಿ ಭಕ್ತರಾದ ನಮಗೆ ಪ್ರಾಪ್ತವಾಗಬೇಕಾದ ಮಾಧ್ಯಮವೇ ಇದೀಗ ಸಂಪೂರ್ಣ ಮಾಲಿನ್ಯಗೊಂಡಿರುವುದು ಸುಸ್ಪಷ್ಟವಾಗಿದೆ. ಇದರಿಂದಾಗಿ ಭೂಲೋಕದಲ್ಲಿ ಸುರಲೋಕ ಪ್ರತೀತಿಯ, ಋಷೀಶ್ವರ ತಪೋಮಂಡಲವಾದ ಶ್ರೀ ತಲಕಾವೇರಿ ಕ್ಷೇತ್ರವು ಕೇವಲ ಶ್ರೀ ಕಾವೇರಿಯ ಉಗಮಸ್ಥಾನ ಮಾತ್ರವಾಗಿರದೆ, ಮಹಾಪುರಷರ, ಸಪ್ತರ್ಷಿಗಳ, ತಪೋಬಲದ ಅಕ್ಷಯ ನಿಧಿಯೂ ಆಗಿದ್ದು, ಮನುಕುಲದ ಉದ್ಧಾರಕ್ಕೆ ಪುಣ್ಯ ಪುಷ್ಕರಿಣಿಯಾಗಿ, ದಕ್ಷಿಣದ ಗಂಗೆಯಾಗಿ, ಶ್ರೀ ಕಾವೇರಿಯ ರೂಪದಿಂದ ಭೂಗರ್ಭದೊಳಗೆ ನಿಕ್ಷೇಪವಾಗಿರಿಸಿದ ಮಹರ್ಷಿಗಳ ತಪೋನಿಧಿಯೂ ಕೂಡ ಸೇರಿ ತೀರ್ಥರೂಪದಲ್ಲಿ ಇಳೆಯಿಂದ ಹೊರಹೊಮ್ಮಿ, ಸಮಸ್ತ ಮಾನವ ಕೋಟಿ ಪಾಪರಾಶಿಯನ್ನು ತೊಳೆಯುವ ನಿರಂತರ ಪೂರ್ವ-ಪ್ರಕ್ರಿಯೆಯಾಗಿರುತ್ತದೆ ಎಂಬುದನ್ನು ನಾವೆಲ್ಲರೂ ತಿಳಿಯ ಬೇಕಾಗಿರುತ್ತದೆ ಎಂದು ಕಂಡು ಬಂದಿರುತ್ತದೆ. ಆಶ್ರಮ ರೀತಿಯ ಋಷಿವಾಸಕ್ಕೆ ಯೋಗ್ಯವಾದ ರೀತಿಯ ಸಾನ್ನಿಧ್ಯ ಸಮುಚ್ಛಯವಾದ ಈ ಶ್ರೀ ತಲಕಾವೇರಿಯಲ್ಲಿ ಕ್ರಮೇಣ ರಾಜಮನೆತನದವರ ಆಡಳಿತ ಪ್ರಾಪ್ತವಾದ ಮೇಲೆ ಜನಜೀವನವು ಮಾರ್ಪಾಡು ಆಗುತ್ತಾ ಬಂದ ಹಾಗೇ ಆಗಮೋಕ್ತವಾದ ದೇವಮಂದಿರ, ಪೂಜಾ ವ್ಯವಸ್ಥೆಗಳು ಏರ್ಪಾಡಾಗಿರುವುದೆಂದು ತಿಳಿದು ಬರುತ್ತದೆ. ಶ್ರೀ ತಲಕಾವೇರಿ ಕ್ಷೇತ್ರವು ಮಾನವ ಜನ್ಮದ ಮೂರು ಋಣಗಳನ್ನು ಕಳೆಯುವ ಮಹಾಪಾವನವಾದ ಅತ್ಯಂತ ವಿಶಿಷ್ಟವೂ, ಸಂಕೀರ್ಣವೂ ಆದ ಮಹಾಕ್ಷೇತ್ರವಾಗಿರುತ್ತದೆಯೆಂಬುದು ನಿಸ್ಸಂದೇಹವಾಗಿರುತ್ತದೆ. ಅದು ಹೇಗೆಂದರೆ, ಈ ಕ್ಷೇತ್ರದಲ್ಲಿ ದೇವತಾ ಸಾನ್ನಿಧ್ಯಗಳಿಗೆ ಸಲ್ಲಿಸುವ ದೇವಪೂಜೆ ಯಿಂದ ದೇವಋಣವನ್ನೂ, ಋಷೀಶ್ವರ ಸಾನ್ನಿಧ್ಯಗಳಿಗೆ ಸಲ್ಲಿರುವ ಋಷಿ ಪೂಜೆಯಿಂದ ಋಷಿಋಣವನ್ನೂ, ಪಿತೃಗಳಿಗೆ ಸಲ್ಲಿಸುವ ಪಿಂಡೋದಕ ಕ್ರಿಯೆಗಳಿಂದ ಪಿತೃಋಣವನ್ನೂ ತೀರಿಸಲು ಅವಕಾಶವಿರುವಂತ ಕ್ಷೇತ್ರವಾಗಿದೆ. ಅಪೂರ್ವ ತ್ರಿವೇಣಿ ಸಂಗಮ ಕ್ಷೇತ್ರವಾದ ಈ ತಲಕಾವೇರಿ ಭಾಗಮಂಡಲ ಕ್ಷೇತ್ರಗಳು ಕೇವಲ ದೇವಾಲಯ, ಕಟ್ಟಡಗಳ ಸಮೂಹವಾಗಿರದೆ ಬ್ರಹ್ಮಗಿರಿ, ಋಷ್ಯಾಶ್ರಮ, ಕಾವೇರಿಯ ಉಗಮ ಇತ್ಯಾದಿ ಪರಿಸರಗಳನ್ನೊಳಗೊಂಡ ಒಟ್ಟು ಪರಿಧಿಯ ಸಮುಚ್ಛಯ ಸಂಕೀರ್ಣಗಳನ್ನೊಳಗೊAಡ ಋಣತ್ರಯ ವಿಮೋಚಕ ಮಹಾ ತೀರ್ಥಕ್ಷೇತ್ರಗಳಾಗಿವೆಯೆಂದು ತಿಳಿದುಬರುತ್ತಿದೆ. ಇಲ್ಲಿಗೆ ವಾಯವ್ಯ ದಿಕ್ಕಿನಲ್ಲಿ ‘‘ಅಯ್ಯಪ್ಪಕಾಡು’’ ಎಂಬದಿದ್ದು ಇಲ್ಲಿಯ ಕನಕೆ-ಕಜೆ ಎಂಬಲ್ಲಿ ಕನ್ನಿಕೆ ನದಿಯ ಉಗಮ ಸ್ಥಳವಿದೆ. ಇದು ಶ್ರೀ ಅಗಸ್ತö್ಯರು ಸ್ನಾನ ಮಾಡಿದ ಸ್ಥಳವಾಗಿದೆ. ಬ್ರಹ್ಮಗಿರಿಯಲ್ಲಿ ಸಪ್ತ ಋಷಿಗಳ ಆವಾಸಸ್ಥಾನವಿದ್ದು, ಅವರು ಯಜ್ಞ ಮಾಡಿದ ಕುರುಹುಗಳೂ ಇರುತ್ತದೆ. ಶ್ರೀ ಕಾವೇರಿ ಯಾತ್ರೆಯಲ್ಲಿ ಸಪ್ತ ಋಷಿಗಳ ಭೇಟಿಯೂ ಒಂದು ಪ್ರಧಾನ ಅಂಗವಾಗಿರುತ್ತದೆ ಎಂಬುದನ್ನು ಎಲ್ಲರೂ ಮನಗಾಣಬೇಕಾಗಿದೆ. ಶ್ರೀ ಕಾವೇರಿಯ ತೀರ್ಥ ಕುಂಡಿಕೆಯ ಪಾವಿತ್ರö್ಯ ಅತ್ಯಂತ ಮುಖ್ಯವಾದುದಾಗಿದೆ. ಈ ಶ್ರೀ ತಲಕಾವೇರಿ ಕ್ಷೇತ್ರದಲ್ಲಿರುವ ಸಾನ್ನಿಧ್ಯಗಳ ಸಂಖ್ಯೆ ಐದು. ಶ್ರೀ ಕಾವೇರಿ ಮಾತೆ, ಶ್ರೀ ಅಗಸ್ತೆö್ಯÃಶ್ವರ, ಶ್ರೀ ಶಾಸ್ತಾವು (ವನಶಾಸ್ತಾವು), ಶ್ರೀ ಅಗಸ್ತö್ಯ ಮಹರ್ಷಿ (ಗುರು), ಶ್ರೀ ಮಹಾಗಣಪತಿ. ದೇವಾಂಗನೆಯರು, ದೇವತೆಗಳು, ವಿವಿಧ ವಿಶಿಷ್ಟರಾದ ಚೈತನ್ಯ ಸ್ವರೂಪಿಗಳು, ಋಷಿ ಮಹರ್ಷಿಗಳು, ರಾತ್ರಿ ಕಾಲದಲ್ಲಿ ಸಪ್ತರ್ಷಿಗಳ ವಾಸಭೂಮಿ ಮತ್ತು ಯಾಗಭೂಮಿಯಾದ ಶ್ರೀ ತಲಕಾವೇರಿ ಸಮುಚ್ಛಯದಲ್ಲಿ ಶ್ರೀ ಕಾವೇರಿಯ ದೈವಿಕವಾದ, ದಿವ್ಯವಾದ ಅಮೃತ ಪ್ರಭಾ ವಲಯದ ಶಕ್ತಿ ಸಂಚಯನಕ್ಕಾಗಿ ಸಂಚರಿಸುವುದು, ಶ್ರೀ ಕಾವೇರಿ ಪುಣ್ಯ ಜಲದಲ್ಲಿ ಸ್ನಾನ ಮಾಡುವುದೂ, ಧ್ಯಾನ, ಯೋಗಗಳಲ್ಲಿ ಮಗ್ನರಾಗಿ ಗೈಯುವುದು ಶಾಸ್ತçದಲ್ಲಿ ಕಂಡುಬAದಿದೆ.
ಕಾವೇರಿ ಕೊಡವರ ಕುಲದೇವತೆ: ಶ್ರೀ ಕಾವೇರಿಯು ಕೊಡವರ ಕುಲದೇವತೆ, ಅನುಗ್ರಹದಾತೆ, ಅಭಯಪ್ರದಾತೆಯಾಗಿ ಕೊಡವರ ಬದುಕಿನಲ್ಲಿ, ಹುಟ್ಟಿನಿಂದ ಸಾವಿನ ತನಕ ಜೀವನದಲ್ಲಿ ನಡೆಸುವ ವಿವಿಧ ಸಂಸ್ಕಾರ ಕ್ರಿಯೆಗಳ ಸಂಬAಧವಾಗಿ ಒಂದೊAದು ವಿಧದಲ್ಲಿ ನೆನೆದು ಪೂಜಿಸಿ, ಪ್ರಾರ್ಥಿಸಿ, ಮರಣೋತ್ತರ ಕ್ರಿಯೆಗಳಲ್ಲಿ ಶ್ರೀ ಕಾವೇರಿ ಮಹಾಮಾತೆಯನ್ನು ನೆನೆದು ದಕ್ಷಿಣ ಗಂಗೆಯಾದ ಶ್ರೀ ಕಾವೇರಿ ಪುಣ್ಯ ಜಲದಲ್ಲಿ ಸ್ನಾನ ಮಾಡಿ ಪಿತೃಗಳಿಗೆ ತೃಪ್ತಿಯನ್ನು ಉಂಟು ಮಾಡಲು ಯಥೋಚಿತವಾದ ಕಾರ್ಯ ಕೈಗೊಳ್ಳುವುದು ಕೊಡವರ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಧಾರ್ಮಿಕ ಪ್ರಜ್ಞೆ ಮತ್ತು ನಿಯಮಾವಳಿಗಳಾಗಿವೆ. ಅವಿಚ್ಛಿನ್ನವಾಗಿ ಅನಾದಿ ಕಾಲದಿಂದಲೂ ಜಲರೂಪಿಯಾಗಿ, ನಿತ್ಯ ನೂತನೆಯಾಗಿ ಶ್ರೀ ಕಾವೇರಿಯಿಂದ ಬಂಗಾಲಕೊಲ್ಲಿಯವರೆಗೆ ಪ್ರವಹಿಸುತ್ತಲೇ ಇದ್ದು, ಶ್ರೀ ಕಾವೇರಿಯ ಜಲವು ಹರಿದಲ್ಲೆಲ್ಲಾ, ಅಕ್ಷಯ ಸುವರ್ಣ ವೃಷ್ಟಿಯಾಗುತ್ತಿದ್ದು, ಆ ಪ್ರದೇಶವನ್ನು ಅಕ್ಷಯ ವಸುಂಧೆÀರೆಯನ್ನಾಗಿ, ಕರುಣಾಮಯಿಯಾದ ಕಲುಷ ವಿನಾಶಿನಿ ಯಾದ, ಸರ್ವ ಅಧ್ಯಾತ್ಮಿಕ ಸಂಪತ್ತು ಮತ್ತು ಭೌತಿಕವಾದ ನಾನಾ ಸಂಪತ್ಪçದಾಯಿನಿಯಾದ ಶ್ರೀ ಕಾವೇರಿ ಮಾತೆಯು ಪರಿವರ್ತಿಸುತ್ತಿದ್ದಾಳೆ ಎಂಬುದು ನಿತ್ಯ ಸತ್ಯವಾಗಿರುತ್ತದೆ.
-ಜಿ. ರಾಜೇಂದ್ರ