ವೀರಾಜಪೇಟೆ, ಜ. ೧: ಪೋಷಕರು ನಿಂದಿಸಿದರು ಎಂಬ ಕಾರಣಕ್ಕೆ ಬಾಲಕನೋರ್ವ ನೇಣಿಗೆ ಶರಣಾದ ಘಟನೆ ವೀರಾಜಪೇಟೆ ತಾಲೂಕು ಕಡಂಗಮರೂರು ಗ್ರಾಮದಲ್ಲಿ ನಡೆದಿದೆ.
ಅಲ್ಲಿನ ತೋಟದ ಕಾರ್ಮಿಕ ಸಿಬಿ ಎಂಬವರ ಪುತ್ರ ನಿತಿನ್ (೧೩) ಆತ್ಮಹತ್ಯೆಗೆ ಶರಣಾದ ದುರ್ಧೈವಿ.
ಮೃತ ಬಾಲಕ ಕಡಂಗ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ೭ ನೇ ತರಗತಿಯ ವಿದ್ಯಾರ್ಥಿಯಾಗಿದ್ದು, ಮೃತನ ಪೋಷಕರು ಗಡಿಭಾಗವಾದ ಕೂಟುಪೊಳೆ ನಿವಾಸಿಗಳಾಗಿದ್ದಾರೆ. ಡಿ. ೩೧ ರಂದು ರಾತ್ರಿ ಊಟ ಮಾಡಿ ನಿತಿನ್ ಕೋಣೆಯ ಮೇಲ್ಚಾವಣೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವೀರಾಜಪೇಟೆ ಗ್ರಾಮಾಂತರ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ, ತಂದೆಯ ದೂರಿನಂತೆ ಪ್ರಕರಣ ದಾಖಲಿಸಿದ್ದಾರೆ.