ಮಡಿಕೇರಿ, ಜ. ೧ : ವಿಶೇಷಚೇತನರ ಪ್ಯಾರಾ ಮಾಸ್ರ್ಸ್ ರಾಷ್ಟಿçÃಯ ಹೊರಾಂಗಣ ಕ್ರೀಡಾಕೂಟದಲ್ಲಿ ಕೊಡಗಿನ ವಿ.ಎಂ. ಲೋಹಿತ್ ಗೌಡ ಮೂರು ಚಿನ್ನದ ಪದಕ ಗೆದ್ದಿದ್ದಾರೆ.
ವಾರ್ಲ್ಡ್ ಪ್ಯಾರಾ ಮಾಸ್ಟರ್ಸ್ ಗೇಮ್ಸ್ ಫೆಡರೇಶನ್ನ ಸಂಯೋಜಿತ ಚಾಲೆಂಜ್ಡ್ ಆಲ್ ಸ್ಪೋರ್ಟ್ಸ್ ಅಸೋಸಿಯೇಷನ್ ವತಿಯಿಂದ ಕೇರಳದ ಕ್ಯಾಲಿಕಟ್ ನಲ್ಲಿ ನಡೆದ ವಿಕಲಚೇತನರ ಕ್ರೀಡಾಕೂಟದಲ್ಲಿ ಗುಂಡು ಎಸೆತ, ಜಾವೆಲಿನ್ ಎಸೆತ ಹಾಗೂ ಡಿಸ್ಕಸ್ ಎಸೆತದಲ್ಲಿ ಹೊದ್ದೂರು ಗ್ರಾಮದ ಲೋಹಿತ್ ಗೌಡ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ೨೦೨೨ರಲ್ಲಿ ಜಪಾನ್ನಲ್ಲಿ ನಡೆಯುವ ವಿಶೇಷಚೇತನರ ಅಂತರರಾಷ್ಟಿçÃಯ ಕ್ರೀಡಾಕೂಟಕ್ಕೆ ಇವರು ಆಯ್ಕೆಯಾಗಿದ್ದಾರೆ.