ಮಡಿಕೇರಿ, ಜ. ೧: ಕೊಡವರ ಕೋವಿ ಬಳಕೆ, ಬ್ರಿಟಿಷ್ ಮತ್ತು ಫ್ರೆಂಚ್ ಆಗಮನಕ್ಕೂ ಹಿಂದಿನದು, ನಂತರದ ಸರ್ಕಾರಗಳು ಅಧಿಕೃತ ವಿನಾಯಿತಿ ನೀಡಿವೆ ಎಂದು ಅಂರ‍್ರಾಷ್ಟಿçÃಯ ಖ್ಯಾತಿಯ ವಕೀಲ ಮಲ್ಲೇಂಗಡ ಬಿ. ಗಗನ್ ಗಣಪತಿ ಅಭಿಪ್ರಾಯ ವ್ಯಕ್ತಪಡಿಸಿದರು.
ಕೊಡವಾಮೆರ ಕೊಂಡಾಟ ಸಂಘಟನೆಯಿAದ ತಿಂಗಕೋರ್ ಅರಿವು ಮಾಲೆ-೨ ವೆಬಿನಾರ್'ನಲ್ಲಿ ಮಾಹಿತಿ ನೀಡುತ್ತಾ ಮಾತನಾಡಿದ, ಕೋವಿ ಹಕ್ಕು ಸಂಬAಧದ ಕಾನೂನು ಹೋರಾಟದ, ವಕೀಲರ ತಂಡದಲ್ಲಿ ಮುಂಚೂಣಿಯಲ್ಲಿದ್ದ, ಮಲ್ಲೇಂಗಡ ಬಿ.ಗಗನ್ ಗಣಪತಿ ಅವರು, ಕೊಡವರು ಮತ್ತು ಕೋವಿಗೆ ಅವಿನಾಭಾವ ಸಂಬAಧವಿದೆ ಅದು ಇಂದು ನಿನ್ನೆಯದಲ್ಲ, ಬ್ರಿಟಿಷ್, ಫ್ರೆಂಚ್, ಟಿಪ್ಪು ಬರುವ ಮೊದಲಿನಿಂದಲೇ ಕೊಡವರಲ್ಲಿ ತಿರಿತೋಕ್ / ಅooಡಿg ಒಚಿಣಛಿhಟoಛಿಞ ಉuಟಿs ಬಳಕೆಯಲ್ಲಿದೆ, ನಂತರದ ಬ್ರಿಟಿಷ್ ಸರ್ಕಾರ ಕೋವಿ ಮತ್ತು ಕೊಡವರ ಪೂಜ್ಯಭಾವನೆಯನ್ನು ಮನಗಂಡು ಹುಟ್ಟು ಸಾವುಗಳಲ್ಲಿ, ಹಬ್ಬ ಹರಿದಿನಗಳಲ್ಲಿ ಕೊಡವರು ಕೋವಿಗೆ ನೀಡುವ ಗೌರವಾದರಿತ ಸ್ಥಾನಮಾನವನ್ನು ನೋಡಿ ಬ್ರಿಟಿಷ್ ಸರ್ಕಾರ ಕೋವಿ ಬಳಕೆಗೆ ವಿಶೇಷ ವಿನಾಯಿತಿ ನೀಡಿತ್ತು ಅದನ್ನು ಈಗಿನ ಸರ್ಕಾರಗಳೂ ಮುಂದುವರಿಸಿಕೊAಡು ಹೋಗುತ್ತಿವೆ ಎಂದು ಲಾಯರ್ಸ್ ಟ್ರಾನ್ಸ್ ಕಂಟಿನೆAಟಲ್ ಸಂಸ್ಥಾಪಕ, ಮಲ್ಲೆಂಗಡ ಬಿ. ಗಗನ್ ಗಣಪತಿ ಅವರು ಅಭಿಪ್ರಾಯಪಟ್ಟರು. ಕೊಡವಾಮೆರ ಕೊಂಡಾಟ ಸಂಘಟನೆಯ ತಿಂಗಕೋರ್ ಅರಿವು ಸರಣಿ ಮಾಲಿಕೆಯ ಎರಡನೇ ಕಾರ್ಯಕ್ರಮದ ವೆಬಿನಾರ್‌ನಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಕೋವಿಯನ್ನು ದೈವೀ ಭಾವದಲ್ಲಿಯೇ ಕಾಣುವ ಕೊಡವರಿಗೆ, ಕೂರ್ಗ್ ಬೈರೇಸ್ ಹೆಸರಿನಲ್ಲಿ ದಕ್ಕಿರುವ ಈ ಹಕ್ಕನ್ನು ಇಂದಿನ ಸರ್ಕಾರವೂ ವಿಶೇಷ ಸವಲತ್ತಾಗಿ ಮುಂದುವರೆಸಿದೆ. ಇದನ್ನ ಉಳಿಸಿಕೊಂಡು ಹೋಗುವುದು ನಮ್ಮ ಕರ್ತವ್ಯ ಎಂದರು. ಸರ್ಕಾರ ಇತ್ತೀಚಿನ ಕೆಲವು ಜಾಗತಿಕ ಬದಲಾವಣೆಯ ಕಾರಣಕ್ಕಾಗಿ, ಕೆಲವು ಕನಿಷ್ಟ ದಾಖಲಾತಿಯನ್ನು ಕೇಳುತ್ತದೆ, ಅದನ್ನ ನಾವು ಒದಗಿಸಿ ವಿನಾಯಿತಿ ಪಡೆಯಬಹುದು. ಎಲ್ಲಾ ದಾಖಲಾತಿಗಳನ್ನು ಒದಗಿಸಿದ ನಂತರವೂ ವಿನಾಕಾರಣ ಸತಾಯಿಸಿದರೆ, ಕಾನೂನು ಕ್ರಮ ಕೈಗೊಳ್ಳಬಹುದು ಎಂದರು.
ವಿನಾಯಿತಿ ಪತ್ರ ನೀಡಲು ಸರ್ಕಾರ ಇದನ್ನು ಸಕಾಲ ವ್ಯಾಪ್ತಿಗೆ ತರಬೇಕು, ಇದಕ್ಕಾಗಿ ಕೊಡವ ಸಂಘಸAಸ್ಥೆಗಳು ಪ್ರಯತ್ನಿಸಬೇಕು ಎಂದರು. ಕೊಡವರಿಗೆ ಕೊಡಗಿನ ಹೊರಗೆ ಎರಡು ಕೋವಿ ಬಳಸಲು ಅವಕಾಶವಿದೆ, ಕೊಡಗಿನೊಳಗೆ ಎಷ್ಟು ಕೋವಿ ಬಳಸಲು, ಅವಕಾಶವಿದೆ ಎನ್ನುವುದರ ಕುರಿತು ಸರ್ಕಾರದೊಂದಿಗೆ ವಿವರಣೆ ಪಡೆದುಕೊಳ್ಳುವುದು ಸೂಕ್ತ ಎಂದು ಗಗನ್ ಗಣಪತಿ ಅವರು ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಡವಾಮೆರ ಕೊಂಡಾಟ ಸಂಘಟನೆಯ ಉಪಾಧ್ಯಕ್ಷ ಮಾಳೇಟಿರ ಅಜಿತ್ ಪೂವಣ್ಣ ಪ್ರಾಸ್ತಾವಿಕವಾಗಿ, ಸಂಘಟನೆಯು ಸ್ಥಾಪನೆ ಆದಾಗಿಂದ ಒಂದಲ್ಲಾ ಒಂದು ರೀತಿಯ ವಿಭಿನ್ನ ಹಲವು ಕಾರ್ಯಕ್ರಮ ಮಾಡುತ್ತಲೇ ಬಂದಿದೆ. ತಿಂಗಳಿಗೊAದು ಅರಿವು ಮಾಲೆ ಎಂಬ ಹೊಸ ವಿಷಯಗಳನ್ನು ತಿಳಿಸುವ, ಅರಿವು ಮಾಲೆಯ ಎರಡನೇ ಕಾರ್ಯಕ್ರಮವಾಗಿ ಇದರಲ್ಲಿ ಕೂರ್ಗ್ ಬೈರೇಸ್ ಯಾರಿಗೆ...? ಏಕೆ...? ಅದನ್ನು ಹೇಗೆ ಪಡೆದುಕೊಳ್ಳುವುದು ಎಂಬ ವಿಷಯದ ಬಗ್ಗೆ ಅರಿವು ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಇದರ ಸದುಪಯೋಗವನ್ನು ಜನಾಂಗಬಾAಧವರು ಹೆಚ್ಚಿನ ಸಂಖ್ಯೆಯಲ್ಲಿ ಪಡೆಯುವಂತಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಸಂಘಟನೆಯ ಸ್ಥಾಪಕರೂ ಆಗಿರುವ, ಚಾಮೆರ ದಿನೇಶ್ ಬೆಳ್ಯಪ್ಪ, ಸದಸ್ಯರಾದ ಮಾಳೇಟಿರ ಸೀತಮ್ಮ ವಿವೇಕ್, ವೀರಾಜಪೇಟೆ ಕಾವೇರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ ತೀತಿಮಾಡ ಪೂವಮ್ಮ, ಸಂಘಟನೆಯ ಕಾರ್ಯದರ್ಶಿ ಅಜ್ಜಮಕ್ಕಡ ವಿನು ಕುಶಾಲಪ್ಪ, ಖಜಾಂಚಿ ಸಣ್ಣುವಂಡ ಕಿಸುದೇವಯ್ಯ, ಸಹಕಾರ್ಯದರ್ಶಿ ಚಾಮೆರ ಪ್ರಿಯದಿನೇಶ್, ಹಿರಿಯ ಸದಸ್ಯ ಮಾಳೇಟಿರ ಶ್ರೀನಿವಾಸ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದು ಮಾತನಾಡಿದರು. ಸಂಘಟನೆಯ ಆಡಳಿತ ಮಂಡಳಿ ನಿರ್ದೇಶಕ ಕೆ. ಗಿರೀಶ್ ಭೀಮಯ್ಯ ಸ್ವಾಗತಿಸಿದರೆ, ಆಡಳಿತ ಮಂಡಳಿ ನಿರ್ದೇಶಕಿ, ನೂರೆರ ಬಬಿತ ವಂದಿಸಿ, ಸದಸ್ಯೆ ಚಮ್ಮಟ್ಟಿರ ಹೃಷಿ ಪಾರ್ವತಿ ಅವರು ನಿರೂಪಿಸಿದರು.