ಮಡಿಕೇರಿ, ಜ. ೧: ಕೊಡಗು ಜಿಲ್ಲೆಯಲ್ಲಿ ದೇಶ-ವಿದೇಶಗಳ ಗಮನ ಸೆಳೆದಿರುವ ಕೊಡವ ಕೌಟುಂಬಿಕ ಹಾಕಿ ಉತ್ಸವವೂ ಸೇರಿದಂತೆ ಜಿಲ್ಲೆಯಲ್ಲಿನ ಎಂದಿನ ಹಾಕಿ ಪಂದ್ಯಾವಳಿಗಳು ಮತ್ತೆ ಪುನರಾರಂಭಗೊಳ್ಳಬೇಕು. ಈ ಮೂಲಕ ಪ್ರತಿಭಾನ್ವಿತ ಹಾಕಿ ಆಟಗಾರರು, ರೂಪುಗೊಳ್ಳಬೇಕಿದೆ ಎಂದು ಮಾಜಿ ಒಲಂಪಿಯನ್, ಹಾಕಿ ಕರ್ನಾಟಕದ ಕಾರ್ಯದರ್ಶಿ ಹಾಗೂ ಭಾರತ ಹಾಕಿ ತಂಡದ ಆಯ್ಕೆ ಸಮಿತಿ ಸದಸ್ಯರೂ ಆಗಿರುವ ಡಾ. ಅಂಜಪರವAಡ ಬಿ. ಸುಬ್ಬಯ್ಯ ಅವರು ಅಭಿಲಾಷೆ ವ್ಯಕ್ತಪಡಿಸಿದರು. ‘ಶಕ್ತಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ಹಾಕಿ ಆಟದ ಕುರಿತಾಗಿ ತಮ್ಮ ಅಭಿಪ್ರಾಯ - ಅನುಭವಗಳನ್ನು ಹಂಚಿಕೊAಡರು.
೨೦೨೧ರ ವರ್ಷ ಸಂಕಷ್ಟದ ನಡುವೆಯೂ ಭಾರತೀಯ ಹಾಕಿಗೆ ಶುಭದಾಯಕವಾಗಿ ಮೂಡಿಬಂದಿದೆ. ೪೧ ವರ್ಷಗಳ ಬಳಿಕ ಭಾರತ ಪುರುಷರ ತಂಡ ಒಲಂಪಿಕ್ಸ್ನಲ್ಲಿ ಕಂಚಿನ ಪದಕಗಳಿಸಿದೆ. ಮಹಿಳಾ ತಂಡ ಕೂಡ ಅದ್ವಿತೀಯ ಪ್ರದರ್ಶನದೊಂದಿಗೆ ಸೆಮಿಫೈನಲ್ ತಲುಪಿರುವುದು ವಿಶೇಷವಾಗಿದೆ. ಭಾರತೀಯ ಜೂನಿಯರ್ ತಂಡ ವಿಶ್ವಕಪ್‌ನಲ್ಲಿ ನಾಲ್ಕನೇ ಸ್ಥಾನಗಳಿಸಿದೆ. ಹಾಕಿ ಕರ್ನಾಟಕದ ತಂಡವೂ ಸೀನಿಯರ್ ನ್ಯಾಷನಲ್ ಲೀಗ್‌ನಲ್ಲಿ ಕಂಚಿನ ಪದಕಗಳಿಸಿದೆ. ಇದೀಗ ಕೊಡಗಿನ ಇಬ್ಬರು ಸೇರಿದಂತೆ ಕರ್ನಾಟಕದ ಐವರು ರಾಷ್ಟಿçÃಯ ಹಾಕಿ ಶಿಬಿರಕ್ಕೆ ಆಯ್ಕೆಗೊಂಡಿರುವುದು ಸಂತಸದಾಯಕವಾಗಿದೆ. ಇವೆಲ್ಲವೂ ಹಾಕಿಯತ್ತ ಇನ್ನಷ್ಟು ಆಸಕ್ತಿ ಮೂಡಿಸುವಲ್ಲಿ ಪ್ರೇರಣಾತ್ಮಕವಾಗಿದ್ದು ಯುವ ಪ್ರತಿಭೆಗಳಿಗೆ ಅವಕಾಶಗಳು ಸಿಗುವಂತೆ ಪಂದ್ಯಾವಳಿಗಳು ಮರು ಆರಂಭಗೊಳ್ಳಬೇಕಿದೆ ಎಂದು ಅವರು ಹೇಳಿದರು.
ಎರಡು ವರ್ಷ ಕೋವಿಡ್ ಪರಿಸ್ಥಿತಿಯಿಂದಾಗಿ ಪಂದ್ಯಾವಳಿಗಳೇ ಕಡಿಮೆಯಾಗಿತ್ತು. ಇದೀಗ ವಿಶ್ವಮಟ್ಟದಿಂದ ಹಿಡಿದು ಮತ್ತೆ ಪಂದ್ಯಾಟಗಳು ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಹಾಕಿಗೆ ಹೆಸರಾದ ಕೊಡಗಿನಲ್ಲೂ ಹಾಕಿ ವೈಭವ ಮರುಕಳಿಸುವಂತಾಗಬೇಕಿದ್ದು ಈ ನಿಟ್ಟಿನಲ್ಲಿ ಹಾಕಿ ಅಭಿಮಾನಿಗಳು, ಸಂಘ-ಸAಸ್ಥೆಗಳು ಮುಂದಾಗಬೇಕಿದೆ ಎಂದು ಸುಬ್ಬಯ್ಯ ಅಭಿಪ್ರಾಯಪಟ್ಟರು.
ಕೊಡವ ಕೌಟುಂಬಿಕ ಹಾಕಿ ಉತ್ಸವದಿಂದ ಈ ಹಿಂದೆ ಹಲವಾರು ಆಟಗಾರರು ಮಾತ್ರವಲ್ಲ ತೀರ್ಪುಗಾರರು, ತಾಂತ್ರಿಕ ಸಮಿತಿಯವರು ಕೂಡ ಹೊರಹೊಮ್ಮಿದ್ದರು. ಈ ಪಂದ್ಯಾವಳಿ ಒಂದು ಉತ್ತಮ ವೇದಿಕೆ ಎಂದ ಅವರು ಕೊಡವ ಹಾಕಿ ಅಕಾಡೆಮಿ ಹಾಗೂ ಜವಾಬ್ದಾರಿ ಪಡೆದಿರುವ ಕುಟುಂಬ ಪಂದ್ಯಾವಳಿಯ ಮುಂದುವರಿಕೆಯತ್ತ ಆಸಕ್ತಿ ತೋರಿದಲ್ಲಿ ಹಾಕಿ ಕರ್ನಾಟಕದ ಮೂಲಕ ಎಲ್ಲಾ ರೀತಿಯ ಸಹಕಾರವನ್ನು ಒದಗಿಸಲಾಗುವುದು. ಶಾಲಾ-ಕಾಲೇಜು, ಕ್ಲಬ್ ಮಟ್ಟದ ಪಂದ್ಯಾವಳಿಗಳಿಗೂ ಹಾಕಿ ಕರ್ನಾಟಕ ಸಹಕಾರ ನೀಡಲಿದೆ ಎಂದರು.
ವಾಸ್ತವತೆ ಅರಿಯಬೇಕಿದೆ
ಭಾರತ ಹಾಕಿ ತಂಡದ ವಿಚಾರಕ್ಕೆ ಬಂದರೆ ಕೊಡಗಿನವರೇ ಆದ ತಾವು ಹಾಗೂ ಮಾಜಿ ಒಲಂಪಿಯನ್ ಬಿ.ಪಿ. ಗೋವಿಂದ ಅವರು ಆಯ್ಕೆ ಸಮಿತಿಯಲ್ಲಿದ್ದರೂ ಕೊಡಗಿನ ಆಟಗಾರರು ಆಯ್ಕೆಯಾಗಿಲ್ಲ ಎಂಬ ಬಗ್ಗೆ ಕೆಲವು ಅಸಮಾಧಾನಗಳು, ಅಭಿಪ್ರಾಯಗಳು ವ್ಯಕ್ತಗೊಂಡಿವೆ. ಆದರೆ ಈ ಅಭಿಪ್ರಾಯ ಸರಿಯಲ್ಲ ವಾಸ್ತವವನ್ನೂ
(ಮೊದಲ ಪುಟದಿಂದ) ಅರಿಯಬೇಕು ಎಂದು ಸುಬ್ಬಯ್ಯ ನುಡಿದರು. ದೇಶದ ತಂಡದ ಆಯ್ಕೆಯ ವಿಚಾರ ಬಂದಾಗ ಕಟ್ಟುನಿಟ್ಟಿನ ಕ್ರಮ ಇರುತ್ತದೆ. ಆಟಗಾರರ ಪ್ರಾವಿಣ್ಯತೆ-ಚಾಕಚಕ್ಯತೆ, ಅತ್ಯುನ್ನತ ರೀತಿಯಲ್ಲಿರಬೇಕು. ಅಂತಿಮ ಶಿಬಿರಕ್ಕೆ ಬಂದರೂ ಅಲ್ಲಿಯೂ ಭಾರೀ ಪೈಪೋಟಿ ಇರುತ್ತದೆ. ಎಲ್ಲಾ ಆಟಗಾರರ ಸಾಧನೆಯನ್ನು ಪರಿಗಣಿಸಲಾಗುವುದು, ಮತ್ತೊಂದು ವಿಚಾರವೆಂದರೆ ಮುಖ್ಯವಾಗಿ ಭಾರತ ತಂಡದ ಮುಖ್ಯ ಕೋಚ್ ಆಗಿ ನಿಯುಕ್ತಿಗೊಂಡಿರುವವರು ಹೆಚ್ಚು ಜವಾಬ್ದಾರಿಯುತರಾಗಿ ತಂಡದ ಆಯ್ಕೆಯ ಹಿಂದಿರುತ್ತಾರೆ. ಮುಖ್ಯ ಕೋಚ್ ಎಲ್ಲಾ ಆಟಗಾರರ ಆಟದ ನೈಪುಣ್ಯತೆ, ವಿವಿಧ ವಿಭಾಗದಲ್ಲಿನ ಅವರ ಅವಶ್ಯಕತೆಗಳ ಕುರಿತಾಗಿ ಆಯ್ಕೆ ಸಮಿತಿಯ ಗಮನಕ್ಕೆ ತಂದು ವಿವರ ನೀಡಿರುತ್ತಾರೆ. ಕೋಚ್ ಅವರು ತಮ್ಮ ‘ಪ್ಲಾನಿಂಗ್’ ಕುರಿತಾಗಿಯೂ ಪೂರ್ಣ ಮಾಹಿತಿಯನ್ನು ನೀಡಿರುತ್ತಾರೆ.
ಏಕೆಂದರೆ ತಂಡದ ಸೋಲು-ಗೆಲುವಿನಲ್ಲಿ ಅವರನ್ನೇ ಗುರಿಯನ್ನಾಗಿಸಲಾಗುತ್ತದೆ ಎಂಬುದು ಒಂದು ಅಂಶವಾಗಿದೆ; ಆಯ್ಕೆ ಸಮಿತಿಯವರೂ ಶಿಬಿರದ ಎಲ್ಲಾ ಆಟಗಾರರ ಸಾಧನೆಯನ್ನು ಗಮನಿಸಿರುತ್ತಾರೆ. ಒಂದು ವೇಳೆ ಕೋಚ್ ಅವರ ನಿರ್ಧಾರ ಸಮಂಜಸ ರೀತಿಯಲ್ಲಿ ಇರದಿದ್ದಲ್ಲಿ ಆಯ್ಕೆ ಸಮಿತಿ ಸದಸ್ಯರು ಈ ಬಗ್ಗೆ ಪ್ರಶ್ನಿಸುವುದೋ, ಬದಲಿ ಆಯ್ಕೆಯ ಬಗ್ಗೆಯೋ ನಿರ್ಧಾರಕ್ಕೆ ಬರಲಿದೆ. ಆದರೆ ಹೆಚ್ಚು ಜವಾಬ್ದಾರಿ ಕೋಚ್ ಅವರದ್ದಾಗಿರುತ್ತದೆ ಎಂಬುದು ವಾಸ್ತವವಾದ ವಿಚಾರ ಎಂದು ಅವರು ‘ಶಕ್ತಿ’ಯ ಪ್ರಶ್ನೆಗೆ ಉತ್ತರಿಸಿದರು.
ಆಟಗಾರರು ಸದಾ ಸ್ಪರ್ಧೆಯಲ್ಲಿರಬೇಕು
ಅಂತಿಮ ಶಿಬಿರಕ್ಕೆ ಅಥವಾ ತಂಡಕ್ಕೆ ಆಯ್ಕೆಗೊಂಡರೂ ನಂತರದಲ್ಲಿ ಆ ಆಟಗಾರರೂ ಮೈಮರೆಯುವಂತಿಲ್ಲ ಉಗುರಿನಂಚಿನಲ್ಲಿ ನಿಂತು ಸದಾ ಪೈಪೋಟಿಯುತವಾದ ಸಾಧನೆಯನ್ನು ಮುಂದುವರಿಸಬೇಕು ಎಂದು ಹೇಳಿದ ಸುಬ್ಬಯ್ಯ ಈಗಿನ ತಂಡ ಸಾಧನೆಯ ಆಧಾರದಲ್ಲೇ ಆಯ್ಕೆಗೊಳ್ಳುತ್ತಿದೆ ಇದರಲ್ಲಿ ರಾಜಿ ಇರುವುದಿಲ್ಲ ಎಂದು ಪ್ರತಿಪಾದಿಸಿದರು.
ಈ ಹಿಂದೆ ಕೊಡಗಿನ ಕೆಲವು ಆಟಗಾರರು ತಂಡದಲ್ಲಿದ್ದರು. ಇವರೊಂದಿಗೆ ಇದ್ದ ಕೆಲವಾರು ಇತರ ಆಟಗಾರರೂ ತಂಡದಲ್ಲಿ ಈಗಲೂ ಮುಂದುವರಿದಿರುವುದು ಸಾಧನೆಯ ಆಧಾರದಿಂದ ಎಂದು ಹೇಳಿದರು.
ನಿವೃತ್ತಿ ಆಗುವ ತನಕ ಮುಂದುವರಿಯಬೇಕು
ತAಡಕ್ಕೆ ಆಯ್ಕೆಗೊಂಡ ಆಟಗಾರರು ನಂತರದಲ್ಲಿ ಹಲವಷ್ಟು ವರ್ಷಗಳು ತಮ್ಮ ಪ್ರತಿಭೆ-ಸಾಧನೆಯ ಮೂಲಕ ನಿರಂತರವಾಗಿ ತಂಡದಲ್ಲಿ ಮುಂದುವರಿಯಬೇಕು. ಯಾವುದೇ ಆಟಗಾರರು ಆಯ್ಕೆ ಸಂದರ್ಭ ಕೈಬಿಡುವಂತೆ (ಡ್ರಾಪ್) ಆಗಬಾರದು. ಅವರಾಗಿಯೇ ನಿವೃತ್ತಿ ಘೋಷಿಸುವ ರೀತಿಯಲ್ಲಿ ತಂಡದಲ್ಲಿ ಮುಂದುವರಿಯುತ್ತಿರಬೇಕು ಎಂಬದು ತಮ್ಮ ಅಪೇಕ್ಷೆಯಾಗಿದೆ ಎಂದು ಸುಬ್ಬಯ್ಯ ಅವರು ಮನದಿಂಗಿತ ವ್ಯಕ್ತಪಡಿಸಿದರು.
ಕೊಡಗಿನ ಬಗ್ಗೆ ಹರ್ಷ
ಹಾಕಿಯೂ ಸೇರಿದಂತೆ ವಿವಿಧ ಪಂದ್ಯಾಟಗಳಿಗೆ ಕೊಡಗು ಜಿಲ್ಲೆಯಲ್ಲಿ ಭಾರೀ ಅಭಿಮಾನ-ಬೆಂಬಲಗಳು ವ್ಯಕ್ತವಾಗುವುದು ಹರ್ಷದಾಯಕ. ಇದರೊಂದಿಗೆ ಜಿಲ್ಲೆಯಲ್ಲಿ ‘ಶಕ್ತಿ’ಯೂ ಸೇರಿದಂತೆ ಇತರ ಮಾಧ್ಯಮಗಳು ಹೆಚ್ಚು ಪ್ರಚಾರವನ್ನು ನೀಡುತ್ತಿರುವುದು ಕೂಡ ಕ್ರೀಡೆಯ ಬೆಳವಣಿಗೆಗೆ ಪೂರಕವಾದ ಅಂಶ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಕರ್ನಾಟಕ ಮಹಿಳಾ ಹಾಕಿ ತಂಡಕ್ಕೆ ವಿಶೇಷವಾಗಿ ಕೊಡಗು ಹಾಗೂ ಮೈಸೂರುನಿಂದ ಹೆಚ್ಚು ಆಟಗಾರ್ತಿಯರು ರೂಪುಗೊಳ್ಳುತ್ತಿದ್ದರು. ಆದರೆ ಇದು ಪ್ರಸ್ತುತ ಕಾರಣಾಂತರಗಳಿAದ ಕಡಿಮೆಯಾದಂತಿದ್ದು ಸಂಬAಧಿಸಿದವರೊAದಿಗೆ ಸಮಾಲೋಚಿಸಲಾಗುವುದು ಎಂದು ಸುಬ್ಬಯ್ಯ ತಿಳಿಸಿದರು. -ಕಾಯಪಂಡ ಶಶಿ ಸೋಮಯ್ಯ