ಮಡಿಕೇರಿ, ಜ. ೧: ಕೊಡಗು ಜಿಲ್ಲಾ ಒಕ್ಕಲಿಗರ ಸಂಘದ ೨೦೧೯-೨೦ ಮತ್ತು ೨೦೨೦-೨೧ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಎಸ್.ಎಂ. ಚಂಗಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕುಶಾಲನಗರದ ರೈತರ ಸಹಕಾರ ಭವನದಲ್ಲಿ ನಡೆದ ಸಭೆಯಲ್ಲಿ ಒಕ್ಕಲಿಗರ ಸಂಘದ ಅಭಿವೃದ್ಧಿಗೆ ಸದಸ್ಯರಿಂದ ಸಲಹೆ ಸೂಚನೆಗಳನ್ನು ಪಡೆಯ ಲಾಯಿತು. ಮುಂದಿನ ದಿನಗಳಲ್ಲಿ ಸಂಘದ ಅಭಿವೃದ್ಧಿ ಬಗ್ಗೆ ಹೆಚ್ಚು ಗಮನ ಹರಿಸಲು ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯಿAದ ನಿರ್ಣಯ ಕೈಗೊಳ್ಳಲಾಯಿತು.

ನಂತರ ೨೦೧೮-೧೯ರ ಮಹಾಸಭೆ ನಡಾವಳಿಗೆ ಒಪ್ಪಿಗೆ, ೨೦೧೯-೨೦ ಮತ್ತು ೨೦೨೦-೨೧ನೇ ಸಾಲಿನ ಲೆಕ್ಕ ಪರಿಶೋಧನಾ ವರದಿಗೆ ಅಂಗೀಕಾರ, ೨೦೨೧-೨೨ನೇ ಸಾಲಿನ ಅಂದಾಜು ಆಯವ್ಯಯ ಪರಿಶೀಲಿಸಿ ಮಂಜೂರು ಮಾಡಲಾಯಿತು.

೨೦೨೧-೨೬ನೇ ಸಾಲಿನ ೫ವರ್ಷಗಳ ಅವಧಿಯ ಆಡಳಿತ ಮಂಡಳಿ ಆಯ್ಕೆ ಬಗ್ಗೆ ಚರ್ಚಿಸ ಲಾಯಿತು. ೨೦೨೦-೨೧ನೇ ಸಾಲಿನ ೧೦ ನೇ ತರಗತಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಮಾರ ನೀಡಲಾಯಿತು. ಸಭೆಯಲ್ಲಿ ೯೯ ಗ್ರಾ.ಪಂ. ಸದಸ್ಯರು, ವಿವಿಧ ಸಂಘ ಸಂಸ್ಥೆ, ಸಹಕಾರ ಸಂಘಗಳ ಒಟ್ಟು ೧೦೨ ಪದಾಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಮೃತಪಟ್ಟ ಸಂಘದ ಸದಸ್ಯರಿಗೆ ಸಂತಾಪ ಸೂಚಿಸಲಾಯಿತು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷರಾದ ವಿ.ಪಿ. ಸುರೇಶ್, ಪಿ.ಕೆ. ರವಿ, ಬಿ.ಕೆ. ದೇವಲಿಂಗಯ್ಯ, ಮಾಜಿ ಸಚಿವ ಜೀವಿಜಯ, ನಿರ್ದೇಶಕರುಗಳಾದ ಕೆ.ಟಿ. ನಾಗರಾಜ್, ಬಿ.ಎಲ್. ಸುರೇಶ್, ಗೌರವ ಕಾರ್ಯದರ್ಶಿ ಉಮೇಶ್ ಕುಮಾರ್, ಬೋಜಮ್ಮ ರಾಮಚಂದ್ರ, ಪ್ರಮುಖರಾದ ವಿ.ಪಿ. ಶಶಿಧರ್, ಎ.ಆರ್. ಮುತ್ತಣ್ಣ, ಕೆ.ಕೆ. ಮಂಜುನಾಥ್ ಕುಮಾರ್, ಪಿ.ಆರ್. ಪುರುಷೋತ್ತಮ, ಕೆ.ಎಂ. ಲೋಕೇಶ್, ಜಾನಕಿ ವೆಂಕಟೇಶ್, ಯಶೋಧ ಕುಶಾಲಪ್ಪ, ಜಿ.ಬಿ. ಸೋಮಯ್ಯ ಮತ್ತಿತರರು ಉಪಸ್ಥಿತರಿದ್ದರು. ವಿ.ಪಿ. ಶಶಿಧರ್ ಸ್ವಾಗತಿಸಿ, ಎಸ್.ಪಿ. ಪೊನ್ನಪ್ಪ ವಂದಿಸಿದರು. ಜಾನಕಿ ವೆಂಕಟೇಶ್ ಪ್ರಾರ್ಥಿಸಿದರು.